Englishहिन्दीമലയാളംதமிழ்తెలుగు

ಲಯನ್ಸ್ ಗೆ ಶರಣಾದ ಚಾಂಪಿಯನ್ಸ್ ಮುಂಬೈ

Posted by:
Updated: Monday, October 15, 2012, 14:51 [IST]
 

ಲಯನ್ಸ್ ಗೆ ಶರಣಾದ ಚಾಂಪಿಯನ್ಸ್ ಮುಂಬೈ
 

ಜೊಹಾನ್ಸ್‌ಬರ್ಗ್‌, ಅ.15: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಸ್ಥಳೀಯ ತಂಡ ಹೈವೆಲ್ಡ್ ಲಯನ್ಸ್ ತಂಡವು ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸ್ಕೋರ್ ಕಾರ್ಡ್ ನೋಡಿ

ಗೆಲ್ಲಲು 158 ರನ್‌ ಸವಾಲು ಪಡೆದ ಲಯನ್ಸ್‌ ತಂಡ ಕೇವಲ ಎರಡು ವಿಕೆಟ್‌ ಕಳೆದುಕೊಂಡು 18.5 ಓವರ್‌ಗಳಲ್ಲಿ 158 ರನ್‌ ಗಳಿಸಿ ಭರ್ಜರಿ ಜಯ ದಾಖಲಿಸಿದೆ.

ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ಮತ್ತು ನೀಲ್‌ ಮೆಕೆಂಜಿ ಅವರು ಮೂರನೇ ವಿಕೆಟಿಗೆ ಕಲೆ ಹಾಕಿದ 121 ರನ್‌ ಗಳ ಜೊತೆಯಾಟ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದಕ್ಕೂ ಮುನ್ನ ಹರ್ಭಜನ್ ಸಿಂಗ್ ಅವರ ಮುಂಬೈ ಇಂಡಿಯನ್ಸ್‌ ತಂಡವು 6 ವಿಕೆಟಿಗೆ 157 ರನ್‌ ಗಳಿಸಿತ್ತು.

ಲಯನ್ಸ್ ಪರ ಆರಂಭಿಕ ಜೋಡಿ ಗುಲಾಬ್‌ ಬೋಡಿ ಮತ್ತು ನಾಯಕ ಅಲ್ವಿರೊ ಪೀಟರ್‌ಸನ್‌ ಎಚ್ಚರಿಕೆ ಆಟವಾಡಿದರೂ ತಂಡದ ಮೊತ್ತ 37 ರನ್‌ ತಲುಪುವಷ್ಟರಲ್ಲಿ ಇಬ್ಬರು ಔಟಾದರು.

ನಂತರ ಕಾಕ್‌ ಮತ್ತು ಮೆಕೆಂಜಿ ಉತ್ತಮ ಜೊತೆಯಾಟ ಪ್ರದರ್ಶಿಸಿ, ಲಸಿತ್ ಮಾಲಿಂಗ, ಹರ್ಭಜನ್, ಪೊಲ್ಲಾರ್ಡ್ ಬೌಲಿಂಗ್ ನಲ್ಲಿ ಭರ್ಜರಿ ಹೊಡೆತ ಬಾರಿಸಿದರು.

ಕಾಕ್‌ 33 ಎಸೆತದಲ್ಲಿ 51 ರನ್‌ (5 ಬೌಂಡರಿ, 2 ಸಿಕ್ಸರ್‌) ಹಾಗೂ ಪಂದ್ಯಶ್ರೇಷ್ಠ ಮೆಕೆಂಜಿ 41 ಎಸೆತದಲ್ಲಿ 12 ಬೌಂಡರಿಗಳಿದ್ದ 68 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭ ಪಡೆಯಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿಧಾನ ಗತಿ ಆಟವಾಡಿದರೂ ವಿಕೆಟ್ ಕಾಯ್ದುಕೊಂಡರು.

ಸಚಿನ್ 24 ಎಸೆತದಲ್ಲಿ 16 ರನ್ ಮಾತ್ರ ಗಳಿಸಿ ಔಟಾದರು. ಸ್ಮಿತ್ 16 ಎಸೆತದಲ್ಲಿ 26 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.

ರೋಹಿತ್ ಶರ್ಮ ಉತ್ತಮ ಆಟ ಪ್ರದರ್ಶಿಸಿ 27 ರನ್ ಗಳಿಸಿದರು. ವೇಗಿ ಜಾನ್ಸನ್ 29 ಎಸೆತದಲ್ಲಿ 30 ರನ್ ಗಳಿಸಿ ತಂಡದ ಮೊತ್ತದಲ್ಲಿ ಹೆಚ್ಚಿನ ಕೊಡುಗೆ ನೀಡಿದರು. ಕೊನೆ ಹಂತದಲ್ಲಿ ವಿಕೆಟ್ ಕೀಪರ್ ಕಾರ್ತಿಕ್ 9 ಎಸೆತದಲ್ಲಿ 19 ರನ್(2 ಬೌಂಡರಿ, 1 ಸಿಕ್ಸರ್) ಚೆಚ್ಚಿದರು.

ಸಂಕ್ಷಿಪ್ತ ಸ್ಕೋರ್ : ಹೈವೆಲ್ಸ್‌ ಲಯನ್ಸ್‌ 18.5 ಓವರ್‌ಗಳಲ್ಲಿ 2 ವಿಕೆಟಿಗೆ 158 (ಬೋಡಿ 19, ಅಲ್ವಿರೊ ಪೀಟರ್‌ಸನ್‌ 14, ಕ್ವಿಂಟನ್‌ ಡಿ ಕಾಕ್‌ ಔಟಾಗದೆ 51, ನೀಲ್‌ ಮೆಕೆಂಝಿ ಔಟಾಗದೆ 68, ಲಸಿತ್ ಮಾಲಿಂಗ 18ಕ್ಕೆ 1, ಹರ್ಭಜನ್‌ ಸಿಂಗ್‌ 36ಕ್ಕೆ 1).

Story first published:  Monday, October 15, 2012, 12:20 [IST]
English summary
Mumbai Indians lost to Highveld Lions by 8 wickets in another Champions League T20 Group B clash at Johannesburg on Sunday(Oct.14).
ಅಭಿಪ್ರಾಯ ಬರೆಯಿರಿ