Englishहिन्दीമലയാളംதமிழ்తెలుగు

ಸಿಎಲ್ಟಿ20: ಕೋಲ್ಕತ್ತಾ ಮೇಲೆ ಡೆಲ್ಲಿಗೆ ಭರ್ಜರಿ ಜಯ

Posted by:
Updated: Sunday, October 14, 2012, 16:46 [IST]
 

ಸಿಎಲ್ಟಿ20: ಕೋಲ್ಕತ್ತಾ ಮೇಲೆ ಡೆಲ್ಲಿಗೆ ಭರ್ಜರಿ ಜಯ
 

ಸೆಂಚೂರಿಯನ್, ಅ.14: ಚಾಂಪಿಯನ್ಸ್ ಲೀಗ್ ಟಿ20 2012ರ ಮೊದಲ ಪಂದ್ಯದಲ್ಲೇ ಐಪಿಎಲ್ 5ರ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕಟ್ಟಿ ಹಾಕುವ ಮೂಲಕ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಭರ್ಜರಿ ಜಯದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಡೆಲ್ಲಿ ಬಾಯ್ಸ್ 52 ರನ್ ಗಳ ಅಮೋಘ ಜಯದೊಂದಿಗೆ ಶುಭಾರಂಭ ಮಾಡಿದ್ದಾರೆ.

ಸ್ಕೋರ್ ಕಾರ್ಡ್

ಡೆಲ್ಲಿ ಡೇರ್ ಡೆವಿಲ್ಸ್ ನೀಡಿದ್ದ 161 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಶಾರುಖ್ ಖಾನ್ ಪಡೆ ಆರಂಭಿಕ ಆಘಾತ ಅನುಭವಿಸಿತು. ನಾಯಕ ಗೌತಮ್ ಗಂಭೀರ್ ಶೂನ್ಯ ಸುತ್ತಿ ಔಟಾದರು. ಕೊನೆಗೆ ಕೆಕೆಆರ್ ತಂಡಕ್ಕೆ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದು ಕೇವಲ 108 ರನ್ ಮಾತ್ರ ಸಾಧ್ಯವಾಯಿತು. ಡೆಲ್ಲಿ ಪರ ಇರ್ಫಾಣ್ ಪಠಾಣ್ ಉತ್ತಮ ಬೌಲಿಂಗ್ ಮಾಡಿ ಪಂದ್ಯ ಶ್ರೇಷ್ಠ ಎನಿಸಿದರು.

ಗೌತಮ್ ಗಂಭೀರ್ ನಂತರ, ಬ್ರೆಂಡನ್ ಮೆಕಲಮ್ (0), ಬಿಸ್ಲಾ(1), ಜಾಕ್ ಕಾಲಿಸ್ (0) ವಿಫಲರಾದರು, ಮಾರ್ಕೆಲ್ ಬೌಲಿಂಗ್ ನಲ್ಲಿ ಬೆರಳಿಗೆ ಗಾಯ ಮಾಡಿಕೊಂಡು ಪೆವಿಲಿಯನ್ ಗೆ ತೆರಳಿದ ಕಾಲಿಸ್ ಮತ್ತೆ ಕ್ರೀಸ್ ಗೆ ಇಳಿಯಲಿಲ್ಲ.

ಮನೋಜ್ ತಿವಾರಿ 33ರನ್ ಹಾಗೂ ರಜತ್ ಭಾಟಿಯಾ 22 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರು. ಯೂಸುಫ್ ಪಠಾಣ್ 11 ರನ್ ಗಳಿಸಿ ಔಟಾದರು.

ಡೆಲ್ಲಿ ಪರ ಇರ್ಫಾನ್ ಪಠಾಣ್ 19 ರನ್ನಿತ್ತು 2 ವಿಕೆಟ್ ಗಳಿಸಿದರೆ, ಮಾರ್ನೆ ಮಾರ್ಕೆಲ್, ಉಮೇಶ್ ಯಾದವ್ ತಲಾ 2 ವಿಕೆಟ್ ಗಳಿಸಿದರು. ಅಜಿತ್ ಅಗರ್ಕರ್ 1 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ಬ್ಯಾಟ್ಸ್ ಮನ್ ಗಳು ಉತ್ತಮ ಇನ್ನಿಂಗ್ಸ್ ಕಟ್ಟಿದರು. ನಾಯಕ ಮಹೇಲ ಜಯವರ್ಧನೆ 19 ಎಸೆತದಲ್ಲಿ 21 ರನ್ ಹಾಗೂ ವೀರೇಂದರ್ ಸೆಹ್ವಾಗ್ 17 ಎಸೆತದಲ್ಲಿ 22 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರು.

ನಂತರ ಬಂದ ಕೆವಿನ್ ಪೀಟರ್ಸನ್ 14 ರನ್ ಮಾತ್ರ ಗಳಿಸಿ ಔಟಾದ ಮೇಲೆ ಯುವ ಆಟಗಾರ ಉನ್ಮುಕ್ತ್ ಚಂದ್ ಭರ್ಜರಿ ಅಟವಾಡಿದರು. 27 ಎಸೆತದಲ್ಲಿ 40 ರನ್(4 ಬೌಂಡರಿ, 2 ಸಿಕ್ಸರ್) ಚೆಚ್ಚಿದರು. ರಾಸ್ ಟೇಲರ್ 24 ಎಸೆತದಲ್ಲಿ 36 ರನ್ ಗಳಿಸಿ ಉತ್ತಮ ಜೊತೆಯಾಟ ಮೆರೆದರು.

ಸ್ಪಿನ್ನರ್ ಸುನಿಲ್ ನರೇನ್ ಉತ್ತಮ ಬೌಲಿಂಗ್ ಪ್ರದರ್ಶಿಸಿ 21 ರನ್ನಿತ್ತು 3 ವಿಕೆಟ್ ಪಡೆದರು. ಲಕ್ಷ್ಮಿಪತಿ ಬಾಲಾಜಿ 4 ಓವರ್ ಗಳಲ್ಲಿ 61 ರನ್ ಚೆಚ್ಚಿಸಿಕೊಂಡು 2 ವಿಕೆಟ್ ಕಿತ್ತರು. ಬ್ರೆಟ್ ಲೀ, ಕಾಲಿಸ್ ಹಾಗೂ ಸಂಗ್ವಾನ್ ತಲಾ 1 ವಿಕೆಟ್ ಕಿತ್ತರು. ಸ್ಲಾಗ್ ಓವರ್ ಗಳಲ್ಲಿ ಕೆಕೆಆರ್ ಉತ್ತಮ ಬೌಲಿಂಗ್ ಪ್ರದರ್ಶಿಸಿದರೂ ಡೆಲ್ಲಿ ತಂಡ 8 ವಿಕೆಟ್ ಕಳೆದುಕೊಂದು 160 ರನ್ ಗಳಿಸಿತು.

Story first published:  Sunday, October 14, 2012, 12:09 [IST]
English summary
Delhi Daredevils crushed IPL 5 champions, Kolkata Knight Riders by 52 runs in their opening Champions League Twenty20 match on Saturday in the second Group A clash at SuperSport Park, Centurion, South africa.
ಅಭಿಪ್ರಾಯ ಬರೆಯಿರಿ