Englishहिन्दीമലയാളംதமிழ்తెలుగు

ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿ ಅನಿಲ್ ಕುಂಬ್ಳೆ

Posted by:
Updated: Thursday, October 11, 2012, 17:36 [IST]
 

ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷರಾಗಿ ಅನಿಲ್ ಕುಂಬ್ಳೆ
 

ಬೆಂಗಳೂರು, ಅ.11: ಟೀಂ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರನ್ನು ಐಸಿಸಿ ಕ್ರಿಕೆಟ್ ಸಮಿತಿಗೆ ಗುರುವಾರ (ಅ.11) ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಅನಿಲ್ ಕುಂಬ್ಳೆ ಅವರು ವೆಸ್ಟ್ ಇಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್ ಅವರ ಬದಲಿಗೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

'ಅನಿಲ್ ಕುಂಬ್ಳೆ ಅವರು ಐಸಿಸಿ ಕ್ರಿಕೆಟ್ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲು ಸಂತೋಷವಾಗುತ್ತದೆ. ಅನಿಲ್ ಅವರು ಭಾರತದ ಶ್ರೇಷ್ಠ ಆಟಗಾರ ಮಾತ್ರವಲ್ಲದೆ, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಸಮರ್ಥವಾಗಿ ಕ್ರಿಕೆಟ್ ಬೆಳವಣಿಗೆಗೆ ಕಾರಣರಾಗಿದ್ದಾರೆ' ಎಂದು ಐಸಿಸಿ ಅಧ್ಯಕ್ಷ ಅಲಾನ್ ಐಸಾಕ್ ಅವರು ಕಾರ್ಯಕಾರಿ ಬೋರ್ಡ್ ಸಭೆ ನಂತರ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

41 ವರ್ಷ ವಯಸ್ಸಿನ ಅನಿಲ್ ಕುಂಬ್ಳೆ ಅವರು ತಮ್ಮ 18 ವರ್ಷದ ಕ್ರೀಡಾಜೀವನದಲ್ಲಿ ಒಟ್ಟಾರೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಗಳು ಹಾಗೂ 271 ಏಕದಿನ ಪಂದ್ಯಗಳಿಂದ 337 ವಿಕೆಟ್ ಗಳನ್ನು ಗಳಿಸಿದ್ದಾರೆ. [ಅನಿಲ್ ಕುಂಬ್ಳೆ ವೃತ್ತಿ ಜೀವನ ಅಂಕಿ ಅಂಶ ನೋಡಿ]

ಐಸಿಸಿ ಮೂಲಗಳ ಪ್ರಕಾರ ಕುಂಬ್ಳೆ ಅವರಿಗೆ 2 ವರ್ಷದ ಅಧಿಕಾರ ಅವಧಿ ನೀಡಲಾಗಿದೆ. ಐಸಿಸಿ ಕ್ರಿಕೆಟ್ ಸಮಿತಿ ವರ್ಷದಲ್ಲಿ ಎರಡು ಬಾರಿ ಸಭೆ ಸೇರಲಿದೆ. ಸಮಿತಿಯಲ್ಲಿ ಮಾರ್ಕ್ ಟೇಲರ್ ಹಾಗೂ ಡೇವಿಡ್ ಕೆಂಡಿಕ್ಸ್ ಅಧಿಕಾರ ಅವಧಿಯನ್ನು ವಿಸ್ತರಿಸಲಾಗಿದೆ.

ಭ್ರಷ್ಟಾಚಾರ ವಿರೋಧಿ ಹಾಗೂ ಉದ್ದೀಪನ ದ್ರವ್ಯ ಸೇವನೆ ವಿರೋಧಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ಐಸಿಸಿ ಬೋರ್ಡ್ ಮೀಟಿಂಗ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇತ್ತೀಚೆಗೆ ವೆಸ್ಟ್ ಇಂಡೀಸ್ ಕ್ರಿಕೆಟರ್ ಐಯಾನ್ ಬಿಷಪ್ ಅವರ ಸ್ಥಾನಕ್ಕೆ ಇಂಗ್ಲೆಂಡ್ ಆಟಗಾರ ಆಂಡ್ರ್ಯೂ ಸ್ಟ್ರಾಸ್ ಅವರನ್ನು ನೇಮಿಸಲಾಗಿತ್ತು. ಸ್ಟ್ರಾಸ್ ರಂತೆ ಕುಂಬ್ಳೆ ಕೂಡಾ ಕ್ಲೈವ್ ಲಾಯ್ಡ್ ಅವರ ನೀಡಿರುವ ಉತ್ತಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ ಎಂದು ಐಸಿಸಿ ಅಧ್ಯಕ್ಷ ಐಸಾಕ್ ಹೇಳಿದ್ದಾರೆ.

Story first published:  Thursday, October 11, 2012, 16:13 [IST]
English summary
Former India captain Anil Kumble was on Thursday(Oct.11) unanimously appointed chairman of ICC's Cricket Committee by the game's governing body, replacing West Indies great Clive Lloyd.
ಅಭಿಪ್ರಾಯ ಬರೆಯಿರಿ