Englishहिन्दीമലയാളംதமிழ்తెలుగు

ಟಿ20: ಪಾಕಿಸ್ತಾನಕ್ಕೆ ಸೋಲು, ಲಂಕಾ ಫೈನಲ್ ಗೆ

Posted by:
Updated: Friday, October 5, 2012, 0:10 [IST]
 

ಕೊಲಂಬೋ, ಅ.4: ಐಸಿಸಿ ವಿಶ್ವ ಟಿ20 ಟೂರ್ನಿಯ ಮೊದಲ ಸೆಮಿಫೈನಲ್ ನಲ್ಲಿ ಪಾಕಿಸ್ತಾನವನ್ನು 16 ರನ್ ಗಳಿಂದ ಮಣಿಸಿದ ಶ್ರೀಲಂಕಾ ಫೈನಲ್ ತಲುಪಿದೆ. ಪ್ರೇಮದಾಸ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ 139/4 ರನ್ ಗಳಿಸಿ ನಂತರ ಪಾಕಿಸ್ತಾನವನ್ನು ಗೆಲುವಿನ ಗುರಿ ತಲುಪದಂತೆ ನಿಯಂತ್ರಿಸಿದೆ.

ಸ್ಕೋರ್ ಕಾರ್ಡ್
ಕೊನೆ ಓವರ್ ನಲ್ಲಿ 23 ರನ್ ಗಳಿಸ ಬೇಕಿದ್ದ ಪಾಕಿಸ್ತಾನ ಮುಗ್ಗರಿಸಿದೆ. ಉಮರ್ ಅಕ್ಮಲ್ ಮತ್ತೊಮ್ಮೆ ಹೋರಾಟ ತೋರಿ 22 ಎಸೆತದಲ್ಲಿ 23 ರನ್ ಗಳಿಸಿ ಔಟಾಗದೆ ಉಳಿದರೂ ಪಂದ್ಯ ಗೆಲ್ಲಿಸಲು ಆಗಲಿಲ್ಲ.

ಟಿ20: ಪಾಕಿಸ್ತಾನಕ್ಕೆ ಸೋಲು, ಲಂಕಾ ಫೈನಲ್ ಗೆ

ಉಳಿದಂತೆ ನಾಯಕ ಮಹಮ್ಮದ್ ಹಫೀಜ್ 40 ಎಸೆತದಲ್ಲಿ 42ರನ್(4 ಬೌಂಡರಿ, 1 ಸಿಕ್ಸರ್) ಗಳಿಸಿ ಪಾಕಿಸ್ತಾನಕ್ಕೆ ಆಸೆ ಚಿಗುರಿಸಿದರು. ಇಮ್ರಾನ್ ನಜೀರ್ 20 ರನ್ ಗಳಿಸಿದರು. ಉಳಿದಂತೆ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿಯಿತು.

ಶ್ರೀಲಂಕಾ ನಿಯಮಿತ ಅವಧಿಯಲ್ಲಿ ವಿಕೆಟ್ ಉದುರಿಸುತ್ತಾ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿಬಿಟ್ಟಿತು. ಏಂಜೆಲೋ ಮ್ಯಾಥ್ಯೂಸ್ ಹಾಗೂ ಅಜಂತಾ ಮೆಂಡಿಸ್ ತಲಾ 2 ವಿಕೆಟ್ ಗಳಿಸಿದರು. ರಂಗಣ ಹೆರಾತ್ 25 ರನ್ನಿತ್ತು 3 ವಿಕೆಟ್ ಕಬಳಿಸಿ ಪಾಕಿಸ್ತಾನ ಆಸೆಗೆ ತಣ್ಣಿರೆರಚಿದರು. ಮಾಲಿಂಗ ವಿಕೆಟ್ ಕೀಳದಿದ್ದರೂ 4 ಓವರ್ ಗಳಲ್ಲಿ 19 ರನ್ ನೀಡಿ ರನ್ ನಿಯಂತ್ರಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಾಯಕ ಮಹೇಲ ಜಯವರ್ಧನೆ ಹಾಗೂ ತಿಲಕರತ್ನೆ ದಿಲ್ಶನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನ ಲಾಭ ಪಡೆಯಿತು.

ಜಯವರ್ಧನೆ 36 ಎಸೆತದಲ್ಲಿ 42 ರನ್(7 ಬೌಂಡರಿ), ದಿಲ್ಶನ್ 35 ರನ್ ಗಳಿಸಿದ್ದು ಲಂಕಾ ಸ್ಪರ್ಧಾತ್ಮಕ ಮೊತ್ತ ತಲುಪಲು ಸಹಾಯಕವಾಯಿತು.

ಸಂಗಕ್ಕಾರ 18 ರನ್, ಜೀವನ್ ಮೆಂಡಿಸ್ 15 ರನ್ ಗಳಿಸಿ ರನ್ ಗತಿ ಹೆಚ್ಚಿಸಲು ಯತ್ನಿಸಿ ಔಟಾದರು. ಪಾಕಿಸ್ತಾನಿ ಬೌಲರ್ ಗಳು ಕರಾರುವಾಕ್ ಬೌಲಿಂಗ್ ಮಾಡುವ ಮೂಲಕ ಲಂಕಾಗೆ ಕಡಿವಾಣ ಹಾಕಿದರು. ಲಂಕಾ ಆಟಗಾರರು ಜೊತೆಯಾಟ ಬೆಳೆಸುವ ಹೊತ್ತಿಗೆ ವಿಕೆಟ್ ಕೀಳುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು.

ಕೇವಲ 4 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಅಂತಿಮ ಓವರ್ ಗಳಲ್ಲಿ ಹೊಡಿಬಡಿ ಆಟವಾಡಲು ಸಾಧ್ಯವಾಗದೆ 139 ಮಾತ್ರ ಗಳಿಸಿತು. ನಾಯಕ ಹಫೀಜ್ ಸೇರಿದಂತೆ, ಅಜ್ಮಲ್, ಗುಲ್, ಅಫ್ರಿದಿ ತಲಾ 1 ವಿಕೆಟ್ ಗಳಿಸಿದರು. 139 ರನ್ ಗಳಿಸುವ
ಹುಮ್ಮಸ್ಸಿನಲ್ಲಿದ್ದ ಪಾಕಿಸ್ತಾನಕ್ಕೆ ಶ್ರೀಲಂಕಾ ತಂಡದ ಸ್ಪಿನ್ನರ್ ಗಳು ಕಡಿವಾಣ ಹಾಕಿ ಫೈನಲ್ ಗೇರಿದರು.

Story first published:  Thursday, October 4, 2012, 22:39 [IST]
English summary
It was a low-scoring affair and Sri Lanka were brilliant to edge Pakistan out and book a berth in the final of ICC World Twenty20 2012 here on Thursday night at the R Premadasa Stadium. Sri Lanka won by 16 runs after managing to score 139/4 in 20 overs on a difficult pitch.
ಅಭಿಪ್ರಾಯ ಬರೆಯಿರಿ