Englishहिन्दीമലയാളംதமிழ்తెలుగు

ಪಾಕಿಸ್ತಾನಕ್ಕೆ ಜಯ; ಆಸ್ಟ್ರೇಲಿಯಾ ಸೆಮಿಸ್ ಗೆ

Posted by:
Updated: Tuesday, October 2, 2012, 20:44 [IST]
 

ಪಾಕಿಸ್ತಾನಕ್ಕೆ ಜಯ; ಆಸ್ಟ್ರೇಲಿಯಾ ಸೆಮಿಸ್ ಗೆ
 

ಕೊಲಂಬೋ, ಅ.2: ಐಸಿಸಿ ವಿಶ್ವಟಿ20 ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಸೋಲು ಕಂಡಿದೆ. ಆಸೀಸ್ ತಂಡವನ್ನು 32 ರನ್ ಗಳಿಂದ ಸೋಲಿಸಿದ ಪಾಕಿಸ್ತಾನ ಸೆಮಿಫೈನಲ್ ತಲುಪುವ ಅವಕಾಶ ಹೆಚ್ಚಿಸಿಕೊಂಡಿದೆ. ಆಸ್ಟ್ರೇಲಿಯಾ ಸೆಮಿಫೈನಲ್ ಗೆ ಅರ್ಹತೆ ಪಡೆದಿದೆ.

ಸ್ಕೋರ್ ಕಾರ್ಡ್

ಪಾಕಿಸ್ತಾನ ನೀಡಿದ್ದ 150 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 117 ರನ್ ಮಾತ್ರ ಗಳಿಸಿ ಸೊಲೊಪ್ಪಿಕೊಂಡಿತು.

ಆದರೆ, ಉತ್ತಮ ರನ್ ಸರಾಸರಿ ಹೊಂದಿರುವ ಆಸ್ಟ್ರೇಲಿಯಾ ಸೂಪರ್ 8 ರಲ್ಲಿ 2 ಪಂದ್ಯಗಳನ್ನು ಗೆದ್ದಿದ್ದು, ಈ ಪಂದ್ಯದಲ್ಲಿ 112 ರನ್ ಗಳಿಸಿದರೆ ಸೆಮಿಸ್ ಪ್ರವೇಶ ಖಾತ್ರಿಯಾಗುತ್ತಿತ್ತು. ಮೈಕಲ್ ಹಸ್ಸಿ ಅರ್ಧ ಶತಕ ಬಾರಿಸಿ ಔಟಾಗದೆ ಉಳಿದು ತಂಡವನ್ನು ಸೆಮಿ ಫೈನಲ್ ಗೆ ತಲುಪಿಸಿದರು.

ಆಸೀಸ್ ಆರಂಭಿಕ ಆಟಗಾರರಾದ ಶೇನ್ ವ್ಯಾಟ್ಸನ್ ಹಾಗೂ ಡೇವಿಡ್ ವಾರ್ನರ್ ತಲಾ 8 ರನ್ ಗಳಿಸಿ ಔಟಾದ ಮೇಲೆ ಮೈಕಲ್ ಹಸ್ಸಿ ಆಸೀಸ್ ರನ್ ಚೇಸ್ ಮುಂದುವರೆಸಿದರು. ಹಸ್ಸಿ 54 ರನ್ (47ಎಸೆತ, 4 ಬೌಂಡರಿ, 1 ಸಿಕ್ಸರ್) ಆಸೀಸ್ ತಂಡವನ್ನು ಸೆಮಿಸ್ ಗೆ ಸೇರಿಸಿತು.

ಉಳಿದಂತೆ, ನಾಯಕ ಬೈಲಿ 15 ರನ್, ವೇಡ್ 13 ರನ್, ವೈಟ್ 12 ರನ್ ಗಳಿಸಿದರು. ಪಾಕಿಸ್ತಾನ ಪರ ಯುವ ಸ್ಪಿನ್ನರ್ ರಾಜಾ ಹಸನ್ 4 ಓವರ್ ಗಳಲ್ಲಿ 14 ರನ್ನಿತ್ತು 2 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು. ಸಯೀದ್ ಅಜ್ಮಲ್ 17ಕ್ಕೆ3, ನಾಯಕ ಹಫೀಜ್ 22ಕ್ಕೆ2 ಗಳಿಸಿ ಆಸೀಸ್ ಗೆಲುವಿಗೆ ಬ್ರೇಕ್ ಹಾಕಿದರು.

ಪಾಕಿಸ್ತಾನ ಇನ್ನಿಂಗ್ಸ್: ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಾಯಕ ಹಫೀಜ್ ಹಾಗೂ ನಜೀರ್ ವಿಕೆಟ್ ಬೇಗನೇ ಕಳೆದುಕೊಂಡಿತು. ಪಾಕ್ ಮಧ್ಯಮ ಕ್ರಮಾಂಕದಲ್ಲಿ ನಾಸಿರ್ ಜಮ್ಶೆಡ್ 55ರನ್(46 ಎಸೆತ, 4 ಬೌಂಡರಿ, 2 ಸಿಕ್ಸರ್), ಕಮ್ರಾನ್ ಅಕ್ಮಲ್ 32 ರನ್(26 ಎಸೆತ, 1 ಬೌಂಡರಿ, 1 ಸಿಕ್ಸರ್) ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.

ಅಬ್ದುಲ್ ರಜಾಕ್ 17 ಎಸೆತದಲ್ಲಿ 22 ರನ್ ಸಿಡಿಸಿದರು. ಆಸೀಸ್ ಪರ ಸ್ಟಾರ್ಕ್ 20ರನ್ನಿತ್ತು 3 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಶೇನ್ ವ್ಯಾಟ್ಸನ್, ಕ್ಸೇವಿಯರ್ ಡೊಹರ್ಟಿ ಹಾಗೂ ಕುಮಿನ್ಸ್ ತಲಾ 1 ವಿಕೆಟ್ ಪಡೆದರು.

Story first published:  Tuesday, October 2, 2012, 19:14 [IST]
English summary
Australia lost their first match in the ICC World Twenty20 2012 but managed to book a semi-final berth here on Tuesday. Pakistan won by 32 runs to keep their chances of last-four alive. It all now depends on India-South Africa match later tonight. India have to win with a better run rate to knock Pakistan out
ಅಭಿಪ್ರಾಯ ಬರೆಯಿರಿ