Englishहिन्दीമലയാളംதமிழ்తెలుగు

ಟಿ20: ಇಂಗ್ಲೆಂಡ್ ಔಟ್, ಸೆಮಿಸ್ ಗೆ ಶ್ರೀಲಂಕಾ

Posted by:
Updated: Monday, October 1, 2012, 23:20 [IST]
 

ಕೊಲಂಬೋ, ಅ.1: ಇಂಗ್ಲೆಂಡ್ ತಂಡದ ಸೆಮಿಸ್ ಕನಸು ಭಗ್ನಗೊಂಡಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 19 ರನ್ ಗಳಿಂದ ಸೋಲಿಸಿದ ಅತಿಥೇಯ ಶ್ರೀಲಂಕಾ ತಂಡ ವಿಶ್ವಟಿ20 ಟೂರ್ನಿಯ ಸೆಮಿ ಫೈನಲ್ ಪ್ರವೇಶಿಸಿದೆ.

ಮಾಲಿಂಗ ಮಾರಕ ಬೌಲಿಂಗ್ ಮತ್ತೊಮ್ಮೆ ಲಂಕಾಗೆ ಜಯ ತಂದು ಕೊಟ್ಟಿದೆ. ಅಂಗ್ಲರು ಸೋತಿದ್ದರಿಂದ ಲಂಕಾ ಜೊತೆಗೆ ವಿಂಡೀಸ್ ಕೂಡಾ ಸೆಮಿಸ್ ಗೆ ಅರ್ಹತೆ ಪಡೆದಿದೆ.

ಟಿ20: ಇಂಗ್ಲೆಂಡ್ ಔಟ್, ಸೆಮಿಸ್ ಗೆ ಶ್ರೀಲಂಕಾ

ಗೆಲ್ಲಲು ಬೇಕಿದ್ದ 170 ರನ್ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಓವರ್ ಗಳಲ್ಲಿ 150 ರನ್ ಮಾತ್ರ ಗಳಿಸಿ ಸೊಲೊಪ್ಪಿಕೊಂಡಿತು.

ಸಮಿತ್ ಪಟೇಲ್, ಸ್ವಾನ್ ಬಿಟ್ಟರೆ ಉಳಿದ ಯಾವುದೇ ಇಂಗ್ಲೆಂಡ್ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ವಿಕೆಟ್ ಚೆಲ್ಲಿದರು. [ಸ್ಕೋರ್ ಕಾರ್ಡ್]

ಸಮಿತ್ ಪಟೇಲ್ 67ರನ್ (48 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿ ಗಮನ ಸೆಳೆದರು. ಲೂಕ್ ರೈಟ್ ಉತ್ತಮ ಆರಂಭ ಪಡೆದರೂ 12 ರನ್ ಗಳಿಸಿ ಔಟಾದರು. ಕೊನೆ ಗಳಿಗೆಯಲ್ಲಿ ಸ್ಪಿನ್ನರ್ ಗ್ರಹಾಂ ಸ್ವಾನ್ 20 ಎಸೆತದಲ್ಲಿ 34 ರನ್ (4 ಬೌಂಡರಿ, 1 ಸಿಕ್ಸರ್) ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು.

ಅಲೆಕ್ಸ್ ಹಾಲ್ಸ್ , ಜಾನಿ ಬೈರ್ಸ್ಟೋ, ಬೋಪಾರಾ, ಬಟ್ಲರ್ ಎಲ್ಲರೂ ಕಳಪೆಯಾಗಿ ಔಟಾದರು. ಲಸಿತ್ ಮಾಲಿಂಗ ಮಾರಕ ಬೌಲಿಂಗ್ ಮಾಡಿ 31 ರನ್ನಿತ್ತು 5 ವಿಕೆಟ್ ಕಿತ್ತರು. ಸ್ಪಿನ್ನರ್ ಅಖಿಲ ಧನಂಜಯ 2, ಜೀವನ ಮೆಂಡಿಸ್ 1 ವಿಕೆಟ್ ಗಳಿಸಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ನಾಯಕ ಜಯವರ್ಧನೆ ಉತ್ತಮ ಆಟದ ಫಲವಾಗಿ ಉತ್ತಮ ಮೊತ್ತ ಕಲೆ ಹಾಕಿತು. ಜಯವರ್ಧನೆ 38 ಎಸೆತದಲ್ಲಿ 42 ರನ್ (5 ಬೌಂಡರಿ, 1 ಸಿಕ್ಸರ್) ಹಾಗೂ ಅಂತಿಮ ಹಂತದಲ್ಲಿ ಥಿಸ್ಸಾರ ಪೆರೆರಾ 16 ಎಸೆತದಲ್ಲಿ 26 ರನ್ (2 ಸಿಕ್ಸರ್) ಉತ್ತಮ ಕೊಡುಗೆ ನೀಡಿದರು.

ಸಂಗಕ್ಕಾರ 13 ರನ್, ದಿಲ್ಶನ್ 16 ರನ್, ಏಂಜೆಲೋ ಮ್ಯಾಥ್ಯೂಸ್ 28 ರನ್ , ಜೀವನ ಮೆಂಡಿಸ್ 18 ರನ್, ತಿರಮನ್ನೆ 13 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.

ಇಂಗ್ಲೆಂಡ್ ಪರ ನಾಯಕ ಸ್ಟುವರ್ಟ್ ಬ್ರಾಡ್ 32 ರನ್ನಿತ್ತು 3 ವಿಕೆಟ್ ಪಡೆದರು. ಗ್ರಹಾಂ ಸ್ವಾನ್ 2 ವಿಕೆಟ್ ಹಾಗೂ ಫಿನ್ 1 ವಿಕೆಟ್ ಗಳಿಸಿದರು.

Story first published:  Monday, October 1, 2012, 23:08 [IST]
English summary
Lasith Malinga took five wickets as Sri Lanka defeated England by 19 runs to enter the semi-finals of ICC World Twenty20 2012. West Indies joined the hosts from Group 1 to reach last-four stage. Defending champions England were knocked out.
ಅಭಿಪ್ರಾಯ ಬರೆಯಿರಿ