Englishहिन्दीമലയാളംதமிழ்తెలుగు

ಸೆ.30: ಟಿ20 ಕಾರ್ಗಿಲ್! ಪಟಾಕಿ ಹೊಡೆಯಲು ರೆಡಿನಾ?

Posted by:
Updated: Sunday, September 30, 2012, 15:05 [IST]
 

ಕೊಲಂಬೋ, ಸೆ.29: ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ ತಂಡ ತನ್ನ ಸಾಂಪ್ರದಾಯಿಕ ವೈರಿ ಪಾಕಿಸ್ತಾನವನ್ನು ಭಾನುವಾರ(ಸೆ.30) ಎದುರಿಸಲಿದೆ. 2007ರಿಂದ ಸೂಪರ್ 8 ಪಂದ್ಯಗಳಲ್ಲಿ ಯಶಸ್ಸು ಕಾಣದ ಭಾರತಕ್ಕೆ ಭಾನುವಾರ ಕೂಡಾ ಗೆಲ್ಲುವ ಆತ್ಮವಿಶ್ವಾಸವಿಲ್ಲ.

ಲಭ್ಯ ಮಾಹಿತಿ ಪ್ರಕಾರ, ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದರ್ ಸೆಹ್ವಾಗ್ ಅವರು ಶನಿವಾರ ಯಾವುದೇ ಅಭ್ಯಾಸದಲ್ಲಿ ಪಾಲ್ಗೊಳ್ಳಲ್ಲದೆ ಅನ್ಯಮನಸ್ಕರಾಗಿ ಮೈದಾನದಿಂದ ಹೊರಗುಳಿದಿದ್ದರು.

ಹೀಗಾಗಿ ಭಾನುವಾರ ಸೆಹ್ವಾಗ್ ಕ್ರೀಸ್ ಗೆ ಇಳಿದು ಉತ್ತಮವಾದ ಆಟವಾಡಿದರೆ ಪವಾಡವೇ ಸರಿ. ಆದರೆ, ಕೊನೆ ಗಳಿಗೆಯಲ್ಲಿ ಸೆಹ್ವಾಗ್ ಕಣಕ್ಕಿಳಿಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕೆಳಗೆ ಕಾಣುವ ಪ್ರೇಮದಾಸ ಸ್ಟೇಡಿಯಂನ ಚಿತ್ರದಲ್ಲಿದ್ದಂತೆ ಮೋಡ ಕವಿದ ವಾತಾವರಣ ಭಾನುವಾರ(ಸೆ.30) ಕಾಣಲು ಸಾಧ್ಯವಿಲ್ಲ. 21 ಕಿ.ಮೀ ವೇಗದ ಗಾಳಿ ಬೀಸಲಿದ್ದು, 62% ತೇವಾಂಶ ಇರುತ್ತದೆ ಮಳೆರಾಯನ ಅಡ್ಡಿ ಇರುವುದಿಲ್ಲ ಎಂದು ಹವಾಮಾನ ವರದಿ ಹೇಳಿದೆ.

ಸೆ.30: ಟಿ20 ಕಾರ್ಗಿಲ್! ಪಟಾಕಿ ಹೊಡೆಯಲು ರೆಡಿನಾ?

ಭಾರತದ ಸೆಮಿಫೈನಲ್ ಹಾದಿ ಸುಗಮವಾಗೇನೂ ಇಲ್ಲ. ಮೊದಲು ಪಾಕಿಸ್ತಾನವನ್ನು ದೊಡ್ಡ ಅಂತರದಿಂದ ಮಣಿಸಿ ರನ್ ಸರಾಸರಿ (ಈಗಿನ ಸರಾಸರಿ -2.506) ಹೆಚ್ಚಿಸಿಕೊಳ್ಳಬೇಕು ನಂತರ ಅಕ್ಟೋಬರ್ 2 ರಂದು ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕು.

ಬೌಲಿಂಗ್ ಸಮಸ್ಯೆ: ಭಾರತದ ಬಳಿ ಸ್ಟ್ರೈಕ್ ಬೌಲರ್ ಗಳ ಕೊರತೆ ಇದೆ. ಜಹೀರ್, ಇರ್ಫಾನ್ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದಾರೆ. ಸ್ಪಿನ್ ತ್ರಯರಾದ ಹರ್ಭಜನ್, ಪಿಯೂಷ್ ಹಾಗೂ ಅಶ್ವಿನ್ ಎದುರಾಳಿ ಬ್ಯಾಟ್ಸ್ ಮನ್ ಗಳಲ್ಲಿ ಭಯ ಹುಟ್ಟಿಸುತ್ತಿಲ್ಲ. ಪಾಕ್ ವಿರುದ್ಧ ಪಿಯೂಷ್ ಆಡಿಸುವುದು ಅನುಮಾನ.

ಪಾಕಿಸ್ತಾನದಲ್ಲಿ ಗುಲ್ ಹಾಗೂ ತನ್ವೀರ್ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಅಜ್ಮಲ್, ಹಫೀಜ್ ಹಾಗೂ ಅಫ್ರಿದಿ ಸ್ಪಿನ್ ಎದುರಿಸುವುದು ಭಾರತಕ್ಕೆ ಅಷ್ಟು ಸಮಸ್ಯೆಯಾಗಲಾರದು. ಪಾಕಿಸ್ತಾನ ತಂಡ ಅನುಭವಿ ಆಲ್ ರೌಂಡರ್ ಅಬ್ದುಲ್ ರಜಾಕ್ ಗೆ ಮಣೆ ಹಾಕಿದರೆ ಅಚ್ಚರಿ ಪಡಬೇಕಾಗಿಲ್ಲ.

ಆಯ್ಕೆ ಸಮಸ್ಯೆ: ಧೋನಿ ಮತ್ತೊಮ್ಮೆ 7 ಬ್ಯಾಟ್ಸ್ ಮನ್ ಗಳ ಯೋಜನೆಗೆ ಮಣೆ ಹಾಕುವುದು ನಿಚ್ಚಳವಾಗಿದೆ. 3 ಸ್ಪಿನ್ನರ್ ಉಳ್ಳ 5 ಬೌಲರ್ ತಂಡ ಇಟ್ಟುಕೊಂಡು ಪಾಕಿಸ್ತಾನ ವಿರುದ್ಧ ಆಡುವುದು ಮೂರ್ಖತನದ ಪರಮಾವಧಿ ಎಂಬುದು ಟೀಂ ಇಂಡಿಯಾಗೆ ಅರ್ಥವಾದರೆ ಒಳಿತು.

ಭಾರತದ ವಿರುದ್ಧ ಪಾಕಿಸ್ತಾನ ತಂಡ ಗೆದ್ದರೆ ಸೆಮಿಸ್ ಪ್ರವೇಶ ಸುಲಭವಾಗುತ್ತದೆ. ಟೂರ್ನಿ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿರುವುದು ನಮ್ಮ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಪಾಕ್ ನಾಯಕ ಹಫೀಜ್ ಹೇಳಿದ್ದಾರೆ.

ಇದುವರೆವಿಗೂ ವಿಶ್ವ ಟಿ20 ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಿರುವ ಎರಡೂ ಪಂದ್ಯಗಳನ್ನೂ ಗೆದ್ದಿದೆ. ಅದರಲ್ಲಿ ಒಂದು ಪಂದ್ಯ ಟೈ ಆಗಿ ಸೂಪರ್ ಬೌಲ್ ಔಟ್ ಮೂಲಕ ಭಾರತ ಜಯ ದಾಖಲಿಸಿತ್ತು. ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠ ಎನಿಸಿದ್ದರು.

ಕೊನೆಯದಾಗಿ, ಸೆಹ್ವಾಗ್ ಅಡಲಿ ಬಿಡಲಿ, ಟೀಂ ಇಂಡಿಯಾ ಸಾಂಘಿಕ ಹೋರಾಟ, ಹೆಚ್ಚಿನ ಆತ್ಮವಿಶ್ವಾಸ ಪ್ರದರ್ಶಿಸಿದರೆ ಮಾತ್ರ ಪಾಕ್ ವಿರುದ್ಧ ಗೆಲ್ಲಲು ಸಾಧ್ಯ. ಜೊತೆಗೆ ನಾಯಕ ಎಂಎಸ್ ಧೋನಿ ಟಿ20ಯಲ್ಲಿ ಉತ್ತಮ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಬೇಕು. ಸ್ಲಾಗ್ ಓವರ್ ನಲ್ಲಿ ರನ್ ನಿಯಂತ್ರಣದ ಬಗ್ಗೆ ಗಮನ ಹರಿಸಬೇಕಿದೆ.

ಸಂಭಾವ್ಯ ತಂಡ: ಭಾರತ: ಎಂಎಸ್ ಧೋನಿ, ವೀರೇಂದರ್ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ರೋಹಿತ್ ಶರ್ಮ, ಇರ್ಫಾನ್ ಪಠಾಣ್, ಆರ್ ಅಶ್ವಿನ್, ಹರ್ಭಜನ್ ಸಿಂಗ್, ಜಹೀರ್ ಖಾನ್

ಪಾಕಿಸ್ತಾನ: ಮಹಮ್ಮದ್ ಹಫೀಜ್ (ನಾಯಕ), ಇಮ್ರಾನ್ ನಜೀರ್, ನಸೀರ್ ಜಮ್ಶೆಡ್, ಕಮ್ರಾನ್ ಅಕ್ಮಲ್ (ವಿಕೆಟ್ ಕೀಪರ್), ಶಹೀದ್ ಅಫ್ರಿದಿ, ಉಮರ್ ಅಕ್ಮಲ್, ಸಯೀದ್ ಅಜ್ಮಲ್, ಉಮರ್ ಗುಲ್, ಶೊಯಿಬ್ ಮಲಿಕ್, ಅಬ್ದುಲ್ ರಜಾಕ್, ಸೋಹೈಲ್ ತನ್ವೀರ್

ಅಂಪೈರುಗಳು: ರಾಡ್ ಟಕರ್(ಆಸ್ಟ್ರೇಲಿಯಾ), ರಿಚರ್ಡ್ ಕೆಟಲ್ ಬರೋ(ಇಂಗ್ಲೆಂಡ್)
ಮೂರನೆ ಅಂಪೈರ್ : ಕುಮಾರ್ ಧರ್ಮಸೇನ (ಶ್ರೀಲಂಕಾ)
ಪಂದ್ಯ ಆರಂಭ ಸಮಯ: ರಾತ್ರಿ 7.30 IST,

Catch live ball by ball commentary, regular updates, reports here on www.thatscricket.com

Story first published:  Saturday, September 29, 2012, 21:44 [IST]
English summary
India, demolished by Australia on Friday night, will have to be at their best when they lock horns with arch rivals Pakistan on Sunday night in Super Eights of the ICC World Twenty20 2012. India have not won a World T20 Super Eight game since 2007 and they have to break that losing streak to stay in Sri Lanka
ಅಭಿಪ್ರಾಯ ಬರೆಯಿರಿ