Englishहिन्दीമലയാളംதமிழ்తెలుగు

ಭಾರತದ ಮೇಲೆ ಆಸ್ಟ್ರೇಲಿಯಾಗೆ ಸುಲಭ ಜಯ

Posted by:
Updated: Friday, September 28, 2012, 23:53 [IST]
 

ಭಾರತದ ಮೇಲೆ ಆಸ್ಟ್ರೇಲಿಯಾಗೆ ಸುಲಭ ಜಯ
 

ಕೊಲಂಬೋ, ಸೆ.28: ಸೂಪರ್ 8 ಹಂತದ ಮೊದಲ ಪಂದ್ಯದಲ್ಲೇ ಭಾರತ ತಂಡ ಹೀನಾಯ ಸೋಲು ಕಂಡಿದೆ. ಟೀಂ ಇಂಡಿಯಾ ಒಡ್ಡಿದ್ದ ಗುರಿಯನ್ನು ಕೇವಲ ಒಂದು ವಿಕೆಟ್ ಕಳೆದುಕೊಂಡು ಇನ್ನೂ 31 ಎಸೆತ ಬಾಕಿ ಇರುವಂತೆ ಆಸೀಸ್ ತಂಡ ಜಯಭೇರಿ ಬಾರಿಸಿದೆ.

ಶೇನ್ ವ್ಯಾಟ್ಸನ್, ಡೇವಿಡ್ ವಾರ್ನರ್ ಜುಗಲ್ ಬಂದಿಗೆ ಟೀಂ ಇಂಡಿಯಾ ತಲೆ ಬಾಗಿದೆ. ಸೆಹ್ವಾಗ್ ಇಲ್ಲದ ಭಾರತ ತಂಡ 7 ವಿಕೆಟ್ ಕಳೆದುಕೊಂಡು ಗಳಿಸಿದ್ದ 140ರನ್ ಗಳನ್ನು ವ್ಯಾಟ್ಸನ್ ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಸುಲಭವಾಗಿ ಮುಟ್ಟಿದೆ.

Scorecard

ವ್ಯಾಟ್ಸನ್ (3/34, 42 ಎಸೆತದಲ್ಲಿ 72 ರನ್ (7 ಸಿಕ್ಸರ್ ಹಾಗೂ 2 ಬೌಂಡರಿ)ಹಾಗೂ ಡೇವಿಡ್ ವಾರ್ನರ್ (41 ಎಸೆತದಲ್ಲಿ 63 ನಾಟೌಟ್ (7ಬೌಂಡರಿ, 3 ಸಿಕ್ಸರ್) ಇಬ್ಬರು ಆಟಗಾರರು ಭಾರತೀಯ ಬೌಲರ್ ಗಳ ಎಸೆತಗಳನ್ನು ಚಂಡಾಡಿದರು. 14.5 ಓವರ್ ಗಳಲ್ಲಿ 141 ರನ್ ಗಳಿಸಿದರು.

ಮೊದಲ ವಿಕೆಟ್ ಗೆ 13.3 ಓವರ್ ಗಳಲ್ಲಿ 133 ರನ್ ಗಳಿಸಿದ ಆಸ್ಟ್ರೇಲಿಯಾ ಯಾವುದೇ ಅಡ್ಡಿ ಆತಂಕ ಇಲ್ಲದೆ ಸುಲಭವಾಗಿ ಜಯ ಗಳಿಸಿದರು.

ಭಾರತದ ಪರ ಮೂವರು ಸ್ಪಿನ್ನರ್ ಗಳು ಟುಸ್ ಆದರು. ಜಹೀರ್ ಖಾನ್ ಉತ್ತಮ ಬೌಲಿಂಗ್ ಮಾಡಿದರೂ ವಿಕೆಟ್ ಕೀಳಲು ವಿಫಲರಾದರು. ಬ್ಯಾಟಿಂಗ್ ನಲ್ಲಿ ಮಿಂಚಿದ ಇರ್ಫಾನ್ ಕೂಡಾ ಬೌಲಿಂಗ್ ನಲ್ಲಿ ಚೆಚ್ಚಿಸಿಕೊಂಡರು. ಅಶ್ವಿನ್ 3.5 ಓವರ್ ನಲ್ಲಿ 32 ರನ್ ಚೆಚ್ಚಿಸಿಕೊಂಡರೆ, ಹರ್ಭಜನ್ 2 ಓವರ್ ನಲ್ಲಿ 20 ರನ್ ಹೊಡೆಸಿಕೊಂಡರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತದ ಪರ ಗೌತಮ್ ಗಂಭೀರ್ 12 ಎಸೆತದಲ್ಲಿ 17 ರನ್ (3 ಬೌಂಡರಿ) ವಿರಾಟ್ ಕೊಹ್ಲಿ 13 ಎಸೆತದಲ್ಲಿ 15 ರನ್ ಅಲ್ಲದೆ ಸುರೇಶ್ ರೈನಾ 19 ಎಸೆತದಲ್ಲಿ 26 ರನ್ (4 ಬೌಂಡರಿ) ಉತ್ತಮ ಆರಂಭ ಗಳಿಸಿದರೂ ಯಾವುದೇ ಜೊತೆಯಾಟ ಇಲ್ಲದ ಕಾರಣ ತಂಡದ ಮೊತ್ತ ಏರಲೇ ಇಲ್ಲ.

ಧೋನಿ ಮತ್ತೊಮ್ಮೆ ಟಿ20 ಯಲ್ಲಿ ಕಡಿಮೆ ಸ್ಟ್ರೈಕ್ ರೇಟ್ 71.43 ಸಿಂಡ್ರೋಮ್ ನಿಂದ ಹೊರಬಂದಿಲ್ಲ. ಆರಂಭಿಕ ಆಟಗಾರ ಇರ್ಫಾನ್ ಪಠಾಣ್ 31 ರನ್ (2ಬೌಂಡರಿ, 1ಸಿಕ್ಸರ್) ಗಳಿಸಿದ್ದು ಭಾರತದ ಇನ್ನಿಂಗ್ಸ್ ನ ಅತ್ಯಧಿಕ ಮೊತ್ತ ಗಳಿಸಿದರು.

ಆಸೀಸ್ ಪರ ಶೇನ್ ವ್ಯಾಟ್ಸನ್ 34/3 ಗಳಿಸಿದ್ದಲ್ಲದೆ, ಕಮಿನ್ಸ್ 16 ರನ್ನಿತ್ತು 2 ವಿಕೆಟ್ ಉರುಳಿಸಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಸ್ಟಾರ್ಕ್ 1 ವಿಕೆಟ್ ಕಿತ್ತರು.

Story first published:  Friday, September 28, 2012, 23:00 [IST]
English summary
Australia demolished India by nine wickets and 31 balls to spare in their Super Eights game at the ICC World Twenty20 2012 here on Friday night. Shane Watson's dazzling all-round display handed India a humiliating defeat. He won his third successive Man-of-the-match award in the tournament.
ಅಭಿಪ್ರಾಯ ಬರೆಯಿರಿ