Englishहिन्दीമലയാളംதமிழ்తెలుగు

ಸೂಪರ್ 8 : ಆಸೀಸ್ ವಿರುದ್ಧ ಸೆಹ್ವಾಗ್ ಆಡಲಿಲ್ಲ ಏಕೆ?

Posted by:
Updated: Friday, September 28, 2012, 23:03 [IST]
 

ಕೊಲಂಬೋ, ಸೆ.28: ವಿಶ್ವ ಟಿ20 ಟೂರ್ನಿಯ ಸೂಪರ್ 8 ಹಂತಕ್ಕೆ ರೋಚಕ ಆರಂಭ ಸಿಕ್ಕಿದೆ. ಶುಕ್ರವಾರ(ಸೆ.29) ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದ್ದು, ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದರ್ ಸೆಹ್ವಾಗ್ ಆಡುತ್ತಾರಾ? ಎಂಬುದು ಕುತೂಹಲಕಾರಿಯಾಗಿದೆ.

ಎಲ್ಲಾ ಆಟಗಾರರಂತೆ ಸೆಹ್ವಾಗ್ ಕೂಡಾ ಡೋಪಿಂಗ್ ಪರೀಕ್ಷೆಗೆ ಒಳಪಟ್ಟರೂ ಎಲ್ಲರಂತೆ ಅಭ್ಯಾಸ ನಿರತರಾಗದೆ ಡಗ್ ಔಟ್ ನಲ್ಲೇ ಕುಳಿತ್ತಿದ್ದರು. ಲಭ್ಯ ಮಾಹಿತಿ ಪ್ರಕಾರ ಎಂಎಸ್ ಧೋನಿ ಅವರು ಸೆಹ್ವಾಗ್ ಅವರನ್ನು ಕೈ ಬಿಟ್ಟು 5 ಜನ ಬೌಲರ್ ಗಳನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ.

ಸೂಪರ್ 8 : ಆಸೀಸ್ ವಿರುದ್ಧ ಸೆಹ್ವಾಗ್ ಆಡಲಿಲ್ಲ ಏಕೆ?

ಸೆಹ್ವಾಗ್ ಅವರ ಗಾಯದ ಬಗ್ಗೆ ಯಾವುದೇ ಮಾಹಿತಿಯನ್ನು ಟೀಂ ಮ್ಯಾನೇಜ್ಮೆಂಟ್ ಹೊರಹಾಕಿಲ್ಲ. ಅಭ್ಯಾಸ ಇಲ್ಲದಿದ್ದರೂ ಸೆಹ್ವಾಗ್ ಸಮರ್ಥರಾಗಿದ್ದಾರೆ ಸದ್ಯದಲ್ಲೇ ಕಣಕ್ಕಿಳಿಯಲಿದ್ದಾರೆ ಎಂದಷ್ಟೇ ಬಿಸಿಸಿಐ ವಕ್ತಾರರು ಹೇಳಿದ್ದರು.

ಆದರೆ, ಧೋನಿ ಹಾಗೂ ಸೆಹ್ವಾಗ್ ನಡುವಿನ ಮನಸ್ತಾಪ ಮತ್ತೆ ಮರುಕಳಿಸಿತೇ ಎಂಬ ಸಂಶಯ ಮೂಡಿದರೂ, ಟೀಂ ಮಾನೇಜ್ಮೆಂಟ್ ಈ ಸುದ್ದಿಯನ್ನು ತಳ್ಳಿ ಹಾಕಿದೆ.

ಡೇವಿಡ್ ವಾರ್ನರ್ ಹಾಗೂ ಶೇನ್ ವ್ಯಾಟ್ಸನ್ ಕಟ್ಟಿಹಾಕಲು ಸ್ಪಿನ್ ತ್ರಯರಾದ ಹರ್ಭಜನ್ ಸಿಂಗ್, ಆರ್ ಅಶ್ವಿನ್ ಹಾಗೂ ಪಿಯೂಷ್ ಚಾವ್ಲಾಗೆ ಭಾರತ ಮೊರೆ ಹೋಗುವ ಸಾಧ್ಯ್ಯತೆಯಿದೆ.

ಹೊಸ ಪಿಚ್ ನಲ್ಲಿ ಆಡುತ್ತಿರುವುದರಿಂದ ಅಂತಿಮ XI ತಂಡದ ಆಯ್ಕೆ ಕಠಿಣವಾಗಿದೆ. ಬಹುಶಃ ಐವರು ಬೌಲರ್ ಗಳನ್ನು ಆಡಿಸುವ ನಿರೀಕ್ಷೆ ಇದೆ ಎಂದು ಧೋನಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೊದಲ 10 ಓವರ್ ನಂತರ ಪಿಚ್ ಸ್ಪಿನ್ ಗೆ ನೆರವಾಗುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಹರ್ಭಜನ್ ಹಾಗೂ ಪಿಯೂಷ್ ಉತ್ತಮ ಪ್ರದರ್ಶನ ನೀಡಿರುವುದು ಆಯ್ಕೆ ಗೊಂದಲ ಮೂಡಿಸಿದ್ದರೂ ಈ ಗೊಂದಲ ತಂಡಕ್ಕೆ ಒಳ್ಳೆಯದು ಎಂದು ಧೋನಿ ಹೇಳಿದ್ದಾರೆ.

2007ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಗೆದ್ದಿದ್ದ ಭಾರತ ನಂತರ 2010 ರಲ್ಲಿ ಕೆರಬಿಯನ್ ನೆಲದಲ್ಲಿ ಆಸ್ಟ್ರೇಲಿಯಾಕ್ಕೆ ಸೋತಿತ್ತು. ಒಟ್ಟಾರೆ ಸಮಬಲದ ಹೋರಾಟದ ನಿರೀಕ್ಷೆಯಿದೆ. ಪಂದ್ಯ ರಾತ್ರಿ 7.30ಕ್ಕೆ ಸ್ಟಾರ್ ಕ್ರಿಕೆಟ್ ನಲ್ಲಿ ಪ್ರಸಾರವಾಗಲಿದೆ. ಉಳಿದಂತೆ ಕೆಲವು ವೆಬ್ ತಾಣದಲ್ಲಿ ನೇರ ಪ್ರಸಾರ ಕೂಡಾ ಲಭ್ಯವಿದೆ.

ದಟ್ಸ್ ಕ್ರಿಕೆಟ್ ನಲ್ಲಿ ಪಂದ್ಯದ ನೇರ ಬಾಲ್ ಬೈ ಬಾಲ್, ಸ್ಕೋರ್ ಕಾರ್ಡ್ ಹಾಗೂ ಮುಖ್ಯಾಂಶಗಳನ್ನು ತಪ್ಪದೇ ಓದಿ.

Story first published:  Friday, September 28, 2012, 12:22 [IST]
English summary
There is still suspense over whether Virender Sehwag will play in Friday's game and also whether India will opt for five bowlers. These two are key questions as India gear up for their first big test in Super Eights of ICC World Twenty20 2012 against Australia here at the R Premadasa Stadium.
ಅಭಿಪ್ರಾಯ ಬರೆಯಿರಿ