Englishहिन्दीമലയാളംதமிழ்తెలుగు

ಟಿ20 ಶ್ರೇಯಾಂಕ : ಭಾರತ 3, ದಕ್ಷಿಣ ಆಫ್ರಿಕಾ ನಂ.1

Posted by:
Updated: Wednesday, October 3, 2012, 17:17 [IST]
 

ಟಿ20 ಶ್ರೇಯಾಂಕ : ಭಾರತ 3, ದಕ್ಷಿಣ ಆಫ್ರಿಕಾ ನಂ.1
 

ಕೊಲಂಬೋ, ಸೆ.26: ವಿಶ್ವ ಟಿ20 ಟೂರ್ನಿ ಚಾಲ್ತಿಯಲ್ಲಿರುವಂತೆ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯನ್ನು ಬುಧವಾರ(ಸೆ.26) ಪ್ರಕಟಿಸಲಾಗಿದೆ. ಭಾರತ ಮೂರನೇ ಸ್ಥಾನಕ್ಕೇರಿದ್ದರೆ, ಇಂಗ್ಲೆಂಡನ್ನು ಕೆಳಕ್ಕೆ ತಳ್ಳಿ ದಕ್ಷಿಣ ಆಫ್ರಿಕಾ ನಂ 1 ಸ್ಥಾನ ಪಡೆದಿದೆ.

ಅಗ್ರ ಶ್ರೇಯಾಂಕ ಹೊತ್ತುಕೊಂಡು ದಕ್ಷಿಣ ಆಫ್ರಿಕಾ ವಿಶ್ವ ಟಿ20 ಟೂರ್ನಿಯ ಸೂಪರ್ 8 ಹಂತದ ಪಂದ್ಯಗಳನ್ನಾಡಲಿದೆ. ಭಾರತದ ವಿರುದ್ಧ 90 ರನ್ ಗಳಿಂದ ಸೋತ ಇಂಗ್ಲೆಂಡ್ ತಂಡ 124 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ವಿಶ್ವ ಟಿ 20 ಆರಂಭಕ್ಕೂ ಮುನ್ನ ಶ್ರೇಯಾಂಕ ಪಟ್ಟಿಯಲ್ಲಿ ಕಳಪೆ ಸಾಧನೆ ತೋರಿದ್ದ ಭಾರತ ನಾಲ್ಕು ಸ್ಥಾನ ಮೇಲಕ್ಕೇರಿದ್ದರೆ, ವೆಸ್ಟ್ ಇಂಡೀಸ್ ನಾಲ್ಕು ಸ್ಥಾನ ಕೆಳಗೆ ಕುಸಿದು 8ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ವಿಶ್ವ ಟಿ 20ಯಲ್ಲಿ ವ್ಯಾಟ್ಸನ್ ಸತತವಾಗಿ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯಶ್ರೇಷ್ಠ ಪ್ರದರ್ಶನ ತೋರಿದ್ದಲ್ಲದೆ 758 ಅಂಕಗಳೊಂದಿಗೆ ಆಟಗಾರರ ಪಟ್ಟಿಯಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿದ್ದಾರೆ.

ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕಲಮ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಎರಡನೇ ಸ್ಥಾನದಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಮೆಕಲಮ್ 123 ರನ್ ಚೆಚ್ಚಿದ್ದು ಟಿ20 ವಿಶ್ವಕಪ್ ನಲ್ಲಿ ಇದುವರೆವಿಗೂ ದಾಖಲಾದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. 849 ಅಂಕದೊಂದಿಗೆ ಮತ್ತೊಮ್ಮೆ ಅಗ್ರಪಟ್ಟದಲ್ಲೇ ಮುಂದುವರೆದಿದ್ದಾರೆ.

ಬೌಲರ್ ಗಳ ಪೈಕಿ ಟಾಪ್ 20ಯೊಳಗೆ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಲಾ ಮೂವರು ಆಟಗಾರರಿದ್ದರೆ ಪಾಕಿಸ್ತಾನದ 3 ಬೌಲರ್ ಗಳು ಟಾಪ್ 10ರೊಳಗೆ ಸ್ಥಾನ ಪಡೆದಿದ್ದಾರೆ. ಸಯೀದ್ ಅಜ್ಮಲ್ (3), ಶಹೀದ್ ಅಫ್ರಿದಿ(5) ಹಾಗೂ ಮಹಮ್ಮದ್ ಹಫೀಜ್ (9) ಟಾಪ್ ಪಟ್ಟಿಯಲ್ಲಿದ್ದಾರೆ.

ಮುಂದಿನ ಐಸಿಸಿ ಟಿ20 ಶ್ರೇಯಾಂಕ ಪಟ್ಟಿ ಸೂಪರ್ 8 ಹಂತದ ಅಂತ್ಯಕ್ಕೆ ಅಕ್ಟೋಬರ್ 3 ರಂದು ಪರಿಷ್ಕರಣೆಗೊಳ್ಳಲಿದೆ.

ಐಸಿಸಿ ಟಿ20 ಚಾಂಪಿಯನ್ ಶಿಪ್ ಪಟ್ಟಿ (ಸೆ.26, ವಿಶ್ವ ಟಿ20ಯ ಸೂಪರ್ 8 ಸರಣಿಗೂ ಮುನ್ನ) ಶ್ರೇಯಾಂಕ (+/-) ತಂಡದ ರೇಟಿಂಗ್

1 (+1) ದಕ್ಷಿಣ ಆಫ್ರಿಕಾ 134

2 (-1) ಇಂಗ್ಲೆಂಡ್ 124

3 (+4) ಭಾರತ 116

4 (-1) ಶ್ರೀಲಂಕಾ 115

5 (+1) ಪಾಕಿಸ್ತಾನ 114

6 (-1) ನ್ಯೂಜಿಲೆಂಡ್ 107

7 (+2) ಆಸ್ಟ್ರೇಲಿಯಾ 104

8 (-4) ವೆಸ್ಟ್ ಇಂಡೀಸ್ 102

9 (-1) ಬಾಂಗ್ಲಾದೇಶ 85

10 (-) ಐರ್ಲೆಂಡ್ 82

11 (-) ಜಿಂಬಾಬ್ವೆ 44

ಶ್ರೇಯಾಂಕ ಪಟ್ಟಿಯಿಂದ ಹೊರಗುಳಿದಿರುವ ಇನ್ನೂ 8 ತಂಡಗಳು ಹಾಗೂ ಅಂಕಪಟ್ಟಿ ಇಂತಿದೆ:

* ಅಫ್ಘಾನಿಸ್ತಾನ 76
* ನೆದರ್ಲೆಂಡ್ 73
* ಸ್ಕಾಲೆಂಡ್ 67
* ಕೆನಡಾ 11
* ಕೀನ್ಯಾ 2

(ದಟ್ಸ್ ಕ್ರಿಕೆಟ್)

Story first published:  Wednesday, September 26, 2012, 22:02 [IST]
English summary
Australia's Shane Watson has jumped four places to a career-high third position in the latest ICC T20I Player Rankings for batsmen which were released on Wednesday at the end of the group stage of the ICC World Twenty20 Sri Lanka 2012.
ಅಭಿಪ್ರಾಯ ಬರೆಯಿರಿ