Englishहिन्दीമലയാളംதமிழ்తెలుగు

ಟಿ20: ಭಾರತದ ಸೂಪರ್ 8 ಪಂದ್ಯಗಳು ಯಾವಾಗ?

Posted by:
Updated: Wednesday, September 26, 2012, 0:09 [IST]
 

ಟಿ20: ಭಾರತದ ಸೂಪರ್ 8 ಪಂದ್ಯಗಳು ಯಾವಾಗ?
 

ಕೊಲಂಬೊ, ಸೆ.25: ಟಿ20 ವಿಶ್ವಕಪ್‌ ಪಂದ್ಯಾವಳಿಯ ಸೂಪರ್‌-8 ಹಂತಕ್ಕೆ ಎಲ್ಲಾ ತಂಡಗಳು ಸಜ್ಜಾಗುತ್ತಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮಂಗಳವಾರ(ಸೆ.25) ಕಡೆಯ ಲೀಗ್ ಪಂದ್ಯವಾಡುತ್ತಿದ್ದು, ಪಾಕಿಸ್ತಾನ ಗೆಲ್ಲುವ ನಿರೀಕ್ಷೆಯಿದೆ.

ಸೂಪರ್‌-8ನಲ್ಲಿ ತಲಾ 4 ತಂಡಗಳ 2 ವಿಭಾಗಗಳಿವೆ. ಮೊದಲ ವಿಭಾಗದಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್, ಇಂಗ್ಲಂಡ್‌, ವೆಸ್ಟ್ ಇಂಡೀಸ್ ತಂಡಗಳಿದೆ. ಎರಡನೇ ವಿಭಾಗದಲ್ಲಿ ಭಾರತ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡಗಳಿದೆ. ಇನ್ನೊಂದು ಸ್ಥಾನಕ್ಕಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಕಾದಾಡ ನಡೆದು, ಪಾಕಿಸ್ತಾನ ಗೆಲುವು ಸಾಧಿಸಿ, ಸೂಪರ್ 8ಕ್ಕೆ ಅರ್ಹತೆ ಪಡೆದಿದೆ..

ಅ. 27ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲಂಡ್‌ ಸೆಣಸಾಡಲಿದೆ.

ಸೂಪರ್ 8 ಹಂತದಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದ್ದು, ಶುಕ್ರವಾರ (ಸೆ.28) ರಾತ್ರಿ ಆಸೀಸ್ ತಂಡವನ್ನು ಟೀಂ ಇಂಡಿಯಾ ಬಗ್ಗು ಬಡಿಯಲು ಸಕಲ ಸಿದ್ಧತೆ ನಡೆಸಿದೆ.

ಭಾರತ ಮತ್ತು ಪಾಕ್‌ ಸೆ. 30ರಂದು ಸೆಣಸಾಡುವುದು ಖಚಿತವಾಗಿದೆ. ಭಾರತದ 3ನೇ ಸೂಪರ್‌ 8 ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಅ. 2ರಂದು ನಡೆಯಲಿದೆ.

ಸೂಪರ್ 8 ನಲ್ಲಿ ಭಾರತ ಹಾಗೂ ಇತರೆ ಪಂದ್ಯಗಳ ವಿವರ: (ದಿನಾಂಕ, ವೇಳೆ, ಗುಂಪು, ತಂಡಗಳು, ಸ್ಥಳ)

ಸೆ.28 : ರಾತ್ರಿ 7.30:ಗುಂಪು 2: ಆಸ್ಟ್ರೇಲಿಯಾ vs ಭಾರತ (B1 Vs A2) ಕೊಲಂಬೋ
ಸೆ.30 : ರಾತ್ರಿ 7.30: ಗುಂಪು 2 : ಪಾಕಿಸ್ತಾನ vs ಭಾರತ (D1 Vs A2) ಕೊಲಂಬೋ
ಅ.2: ರಾತ್ರಿ 7.30: ಗುಂಪು 2 : ಭಾರತ vs ದಕ್ಷಿಣ ಆಫ್ರಿಕಾ (A2 V C2) ಕೊಲಂಬೋ

ಇತರೆ ಸೂಪರ್ 8 ವೇಳಾಪಟ್ಟಿ
ಸೆ.27: ಮಧ್ಯಾಹ್ನ 3.30 : ಗುಂಪು 1 : ಶ್ರೀಲಂಕಾ vs ನ್ಯೂಜಿಲೆಂಡ್ (C1 Vs D2) ಪಲ್ಲೆಕೆಲೆ
ಸೆ.27: ರಾತ್ರಿ 7.30: ಗುಂಪು 1 : ಇಂಗ್ಲೆಂಡ್ vs ವೆಸ್ಟ್ ಇಂಡೀಸ್ (A1 Vs B2) ಪಲ್ಲೆಕೆಲೆ

ಸೆ.28: ಮಧ್ಯಾಹ್ನ 3.30 : ಗುಂಪು 1 : ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (D1 Vs C2) ಕೊಲಂಬೋ

ಸೆ. 29 : ಮಧ್ಯಾಹ್ನ 3.30 : ಗುಂಪು 1 : ಇಂಗ್ಲೆಂಡ್ vs ನ್ಯೂಜಿಲೆಂಡ್ (A1 Vs D2)ಪಲ್ಲೆಕೆಲೆ

ಸೆ. 29 : ರಾತ್ರಿ 7.30 : ಗುಂಪು 1 : ಶ್ರೀಲಂಕಾ vs ವೆಸ್ಟ್ ಇಂಡೀಸ್ (C1 Vs B2) ಪಲ್ಲೆಕೆಲೆ

ಸೆ.30: ಮಧ್ಯಾಹ್ನ 3.30 : ಗುಂಪು 2 : ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ (B1 Vs C2) ಕೊಲಂಬೋ

ಅ.1 : ಮಧ್ಯಾಹ್ನ 3.30 : ಗುಂಪು 1 : ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ (B2 Vs D2) ಪಲ್ಲೆಕೆಲೆ
ಅ.1 : ರಾತ್ರಿ 7.30 : ಗುಂಪು 1 : ಶ್ರೀಲಂಕಾ vs ಇಂಗ್ಲೆಂಡ್ (A1 Vs C1) ಪಲ್ಲೆಕೆಲೆ

ಅ.2 : ಮಧ್ಯಾಹ್ನ 3.30 : ಗುಂಪು 2 : ಆಸ್ಟ್ರೇಲಿಯಾ vs ಪಾಕಿಸ್ತಾನ (B1 Vs D1) ಕೊಲಂಬೋ

ಅ.2 : ರಾತ್ರಿ 7.30 : ಗುಂಪು 2 : ಭಾರತ vs ದಕ್ಷಿಣ ಆಫ್ರಿಕಾ (A2 Vs C2) ಕೊಲಂಬೋ

Story first published:  Tuesday, September 25, 2012, 11:32 [IST]
English summary
WT20 :Team India Super 8 Matches schedule. India to face Australia and later India have to battle with Pakistan or Bangladesh and South Africa.
ಅಭಿಪ್ರಾಯ ಬರೆಯಿರಿ