Englishहिन्दीമലയാളംதமிழ்తెలుగు

ಇರಾನಿ ಟ್ರೋಫಿ: ಇತರೆ ಭಾರತ ತಂಡಕ್ಕೆ ಭರ್ಜರಿ ಜಯ

Posted by:
Updated: Monday, September 24, 2012, 17:05 [IST]
 

ಬೆಂಗಳೂರು, ಸೆ.24: ರಣಜಿ ಚಾಂಪಿಯನ್ ರಾಜಸ್ಥಾನ ತಂಡವನ್ನು ಇನ್ನಿಂಗ್ಸ್ ಹಾಗೂ 79 ರನ್ ಗಳಿಂದ ಮಣಿಸುವ ಮೂಲಕ ಇರಾನಿ ಕಪ್ ಎತ್ತಿ ಶೇಷ ಭಾರತ ತಂಡ ಸಂಭ್ರಮಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇರಾನಿ ಕಪ್ ಪಂದ್ಯಾವಳಿಯ ನಾಲ್ಕನೇ ದಿನ 275 ರನ್ ಗಳಿಗೆ ಆಲೌಟ್ ಆಗುವ ಮೂಲಕ ರಾಜಸ್ಥಾನ ಸೊಲೊಪ್ಪಿಕೊಂಡಿದೆ.

ಇರಾನಿ ಕಪ್ ಇತಿಹಾಸದಲ್ಲಿ ಇತರೆ ಭಾರತ ತಂಡ 24ನೇ ಬಾರಿ ಇರಾನಿ ಕಪ್ ಎತ್ತಿದ ದಾಖಲೆ ಮೆರೆದಿದೆ. ಇತರೆ ಭಾರತದ ಈ ಗೆಲುವಿನಲ್ಲಿ ಮುರಳಿ ವಿಜಯ್ ದ್ವಿಶತಕ ಹಾಗೂ ಸ್ಪಿನ್ನರ್ ಹರ್ಮಿತ್ ಸಿಂಗ್ ಬೌಲಿಂಗ್ ಕಾರಣವಾಯಿತು.

ಇರಾನಿ ಟ್ರೋಫಿ: ಇತರೆ ಭಾರತ ತಂಡಕ್ಕೆ ಭರ್ಜರಿ ಜಯ

ಇತರೆ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 607/7 ಗಳಿಸಿದ ಮೇಲೆ ರಾಜಸ್ಥಾನದ ಹಣೆ ಬರಹ ಬಹುತೇಕ ನಿರ್ಧಾರವಾಗಿತ್ತು. 354 ರನ್ ಹಿಂದಿದ್ದ ರಾಜಸ್ಥಾನ ತಂಡದಲ್ಲಿ ನಾಯಕ ಹೃಷಿಕೇಶ್ ಕಾನಿಕ್ಟರ್ ಹಾಗೂ ರಾಬಿನ್ ಬಿಶ್ಟ್ ಹೋರಾಟದ ಮನೋಭಾವ ತೋರಿದ್ದು ಬಿಟ್ಟರೆ ಉಳಿದವರು ಕ್ರೀಸ್ ನಲ್ಲಿ ನಿಲ್ಲುವ ವ್ಯವಧಾನ ತೋರಲಿಲ್ಲ.

ಎರಡನೇ ಇನ್ನಿಂಗ್ಸ್ ನಲ್ಲಿ ರಾಜಸ್ಥಾನ ತಂಡವನ್ನು 90.2 ಓವರ್ ಗಳಲ್ಲಿ 275ರನ್ ಗಳಿಗೆ ನಿಯಂತ್ರಿಸಿದ ಇತರೆ ಭಾರತ ತಂಡ ಒಂದು ದಿನ ಇರುವಂತೆಯೇ ಜಯ ದಾಖಲಿಸಿತು.

ಕೆಎಸ್ ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಅವರು ಇರಾನಿ ಕಪ್ ಅನ್ನು ಇತರೆ ಭಾರತ ತಂಡದ ನಾಯಕ ಚೇತೇಶ್ವರ್ ಪೂಜಾರಾ ಅವರಿಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ : ರಾಜಸ್ಥಾನ 253 ಆಲೌಟ್ 86.3 ಓವರ್ (ರಾಬಿನ್ ಬಿಶ್ಟ್ 117 ನಾಟೌಟ್, ಉಮೇಶ್ ಯಾದವ್ 5/55, ಇಶಾಂತ್ 2/17, ಸ್ಟುವರ್ಟ್ ಬಿನ್ನಿ 2/38) ಹಾಗೂ 275 ಆಲೌಟ್ 90.2 ಓವರ್ (ಹೃಷಿಕೇಶ್ ಕಾನಿಕ್ಟರ್ 73, ರಾಬಿನ್ ಬಿಶ್ಟ್ 67, ಹರ್ಮಿತ್ ಸಿಂಗ್ 4/45, ಪಿ ಓಜಾ 2/83)

ಇತರೆ ಭಾರತ ತಂಡ 607/7 ಡಿಕ್ಲೇರ್ 167 ಓವರ್ (ಮುರಳಿ ವಿಜಯ್ 266, ಅಜಿಂಕ್ಯ ರಹಾನೆ 81, ಚೇತೇಶ್ವರ್ ಪೂಜಾರಾ 78, ಎಸ್ ಬದರಿನಾಥ್ 55, ದಿನೇಶ್ ಕಾರ್ತಿಕ್ 56, ಮಧುರ್ ಖಾತ್ರಿ 3/125, ದೀಪಕ್ ಚಾಹರ್ 2/99)

Story first published:  Monday, September 24, 2012, 17:04 [IST]
English summary
Rest of India (ROI) completed a crushing innings and 79-run victory over Rajasthan to win the Irani Cup for the 24th time in history, here at the M Chinnaswamy Stadium during the fourth day, Monday. Left-arm spinner Harmeet Singh took 4/45 as Rajasthan were bowled out for 275 in second innings.
ಅಭಿಪ್ರಾಯ ಬರೆಯಿರಿ