Englishहिन्दीമലയാളംதமிழ்తెలుగు

ಟಿ20: ಅಜ್ಮಲ್ ಕಮಾಲ್, ಪಾಕಿಸ್ತಾನಕ್ಕೆ ವಿಜಯ

Posted by:
Updated: Sunday, September 23, 2012, 20:42 [IST]
 

ಟಿ20: ಅಜ್ಮಲ್ ಕಮಾಲ್, ಪಾಕಿಸ್ತಾನಕ್ಕೆ ವಿಜಯ
 

ಕೊಲಂಬೋ, ಸೆ.23: ತೀವ್ರ ಸೆಣಸಾಟದಿಂದ ಕೂಡಿದ್ದ 'ಡಿ' ಗುಂಪಿನ ಪಂದ್ಯದಲ್ಲಿ ಅಂತಿಮವಾಗಿ ನ್ಯೂಜಿಲೆಂಡ್ ತಂಡವನ್ನು ಪಾಕಿಸ್ತಾನ ತಂಡ ಮಣಿಸಿದೆ. ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ನೀಡಿದ್ದ 178 ರನ್ ಬೆನ್ನು ಹತ್ತಿದ ಕಿವೀಸ್ 164/9 ಮಾತ್ರ ಗಳಿಸಿ ಸೊಲೊಪ್ಪಿಕೊಂಡಿದೆ.

ರಾಬ್ ನಿಕೊಲ್ (33), ಬ್ರೆಂಡನ್ ಮೆಕಲಮ್ (32) ಉತ್ತಮ ಆರಂಭ ಒದಗಿಸಿದರೂ ಮಧ್ಯಮ ಕ್ರಮಾಂಕ ವಿಕೆಟ್ ಗಳು ನಿರಂತರವಾಗಿ ಉದುರಿದ್ದು ಕಿವೀಸ್ ಗೆ ಮುಳುವಾಯಿತು. [ಸ್ಕೋರ್ ಕಾರ್ಡ್ ನೋಡಿ]

ವೆಟ್ಟೋರಿ (18), ಓರಮ್ (11), ಕೇನ್ ವಿಲಿಯಮ್ಸನ್(15) ಎಲ್ಲರೂ ಉತ್ತಮ ಇನ್ನಿಂಗ್ಸ್ ಕಟ್ಟುವ ಕುರುಹು ತೋರಿದರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಔಟಾದರು. ಜೊತೆಯಾಟದ ಕೊರತೆ ಅನುಭವಿಸಿದ ಕಿವೀಸ್ ತಂಡ ಮೇಲೆ ಪಾಕಿಸ್ತಾನಿಗಳು ಒತ್ತಡ ಹೇರಿ ರನ್ ನಿಯಂತ್ರಿಸಿಬಿಟ್ಟರು.

ಅಜ್ಮಲ್ 30 ರನ್ನಿತ್ತು 4 ವಿಕೆಟ್ ಪಡೆದರೆ, ತನ್ವೀರ್, ಗುಲ್ ಹಾಗೂ ಅಫ್ರಿದಿ ತಲಾ 1 ವಿಕೆಟ್ ಗಳಿಸಿದರು. ಹಫೀಜ್ 4 ಓವರ್ ಗಳಲ್ಲಿ 15 ರನ್ ಮಾತ್ರ ನೀಡಿ ಕಿವೀಸ್ ರನ್ ವೇಗವನ್ನು ನಿಯಂತ್ರಿಸಿದರು.

ಈ ಗೆಲುವಿನೊಂದಿಗೆ ಪಾಕಿಸ್ತಾನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಸೂಪರ್ 8 ರ ಹಂತಕ್ಕೇರುವ ನಿರೀಕ್ಷೆಯಿದೆ.

ಪಾಕಿಸ್ತಾನ ಇನ್ನಿಂಗ್ಸ್ : ಮಹಮ್ಮದ್ ಹಫೀಜ್ ನೀಡಿದ ಕ್ಯಾಚನ್ನು ರಾಸ್ ಟೇಲರ್ ಮೊದಲ ಓವರ್ ನಲ್ಲಿ ಬಿಟ್ಟಿದ್ದು ದುಅಬರಿಯಾಯಿತು. ಶೂನ್ಯಕ್ಕೆ ಔಟಾಗಬೇಕಿದ್ದ ಹಫೀಜ್ 28 ಎಸೆತದಲ್ಲಿ 43 ರನ್(2 ಬೌಂಡರಿ, 2 ಸಿಕ್ಸರ್) ಗಳಿಸಿ ಪಾಕಿಸ್ತಾನಕ್ಕೆ ಉತ್ತಮ ಆರಂಭ ಒದಗಿಸಿದರು.

ನಸಿರ್ ಜಮ್ಶೆಡ್ ಹಾಗೂ ಹಫೀಜ್ 76 ರನ್ ಕಲೆಹಾಕಿದರು. ನಸಿರ್ ಪಾಕಿಸ್ತಾನದ ಪರ ಎರಡನೇ ಅತ್ಯಂತ ತ್ವರಿತವಾಗಿ 50 ರನ್ ಗಳಿಸಿದ ದಾಖಲೆ ಬರೆದರು.

ಉಳಿದಂತೆ ಇಮ್ರಾನ್ ನಜೀರ್(25), ಉಮರ್ ಅಕ್ಮಲ್ (23), ಅಫ್ರಿದಿ 6 ಎಸೆತದಲ್ಲಿ 12ರನ್(2 ಬೌಂಡರಿ) ಉತ್ತಮ ಆಟ ಪ್ರದರ್ಶಿಸಿ ತಂಡದ ಮೊತ್ತವನ್ನು 20 ಓವರ್ ಗಳಲ್ಲಿ 177/6ಕ್ಕೆ ಏರಿಸಿದರು.

ಕಿವೀಸ್ ಪರ ಓರಮ್, ಸೌಥಿ ತಲಾ 2 ವಿಕೆಟ್ ಗಳಿಸಿದರು. ವೆಟ್ಟೋರಿ, ಫ್ರಾಂಕ್ಲಿನ್ ತಲಾ 1 ವಿಕೆಟ್ ಪಡೆದರು.

ಕೆಲ ಮುಖ್ಯಾಂಶ:

# ಪಾಕಿಸ್ತಾನದ ಪರ ಟಿ20ಯಲ್ಲಿ ತ್ವರಿತವಾಗಿ ಅರ್ಧಶತಕ: ಉಮರ್ ಅಕ್ಮಲ್(21 ಎಸೆತಗಳು), ಕಮ್ರನ್ ಅಕ್ಮಲ್ (25 ಎಸೆತಗಳು), ಶೋಯಿಬ್ ಮಲ್ಲಿಕ್ ಹಾಗೂ ಈ ಪಂದ್ಯದಲ್ಲಿ ನಸಿರ್ ಜಮ್ಶೆಡ್ (27ಎಸೆತಗಳು)
# 2012ರ ಟಿ20 ಪಂದ್ಯಗಳಲ್ಲಿ ನಸಿರ್ ಅವರ 27 ಎಸೆತದಲ್ಲಿ 50 ಎರಡನೇ ವೇಗದ ಅರ್ಧಶತಕವಾಗಿದೆ. ಕ್ರಿಸ್ ಗೇಲ್ ಆಸ್ಟ್ರೇಲಿಯಾ ವಿರುದ್ಧ 26 ಎಸೆತದಲ್ಲಿ 50 ರನ್ ಗಳಿಸಿದ್ದರು.

# ವಿಶ್ವ ಟಿ20 ಟೂರ್ನಿಯಲ್ಲಿ ಪಲ್ಲೆಕೆಲೆಯಲ್ಲಿ 4 ಪಂದ್ಯ ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ನಾಲ್ಕು ಪಂದ್ಯಗಳನ್ನು ಗೆದ್ದಿದೆ.
# ಮೊದಲು ಬ್ಯಾಟಿಂಗ್ ಮಾಡಿ 150ಕ್ಕೂ ಅಧಿಕ ರನ್ ಗಳಿಸಿದ ಮೇಲೆ ಪಾಕಿಸ್ತಾನ ಒಮ್ಮೆ ಮಾತ್ರ ಸೋತಿದೆ.

Story first published:  Sunday, September 23, 2012, 20:18 [IST]
English summary
An all-round performance saw Pakistan beat New Zealand by 14 runs, to start on a winning note, as they restricted Kiwis to 164/9 in the group D clash at Pallekele International Cricket Stadium on Sunday(Sept.23).
ಅಭಿಪ್ರಾಯ ಬರೆಯಿರಿ