Englishहिन्दीമലയാളംதமிழ்తెలుగు

ದೈತ್ಯ ಬ್ಯಾಟ್ಸ್ ಮನ್ ಹೇಡನ್ ಕ್ರಿಕೆಟಿಗೆ ಗುಡ್ ಬೈ

Posted by:
Published: Thursday, September 20, 2012, 18:16 [IST]
 

ದೈತ್ಯ ಬ್ಯಾಟ್ಸ್ ಮನ್ ಹೇಡನ್ ಕ್ರಿಕೆಟಿಗೆ ಗುಡ್ ಬೈ
 

ಸಿಡ್ನಿ, ಸೆ.20: ಆಸ್ಟ್ರೇಲಿಯಾ ಕ್ರಿಕೆಟ್ ನಲ್ಲಿ ಫಿನಿಕ್ಸ್ ನಂತೆ ಬೆಳೆದ ದೈತ್ಯ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಅವರು ಎಲ್ಲಾ ಬಗೆಯ ಕ್ರಿಕೆಟ್ ಮಾದರಿಯಿಂದ ಗುರುವಾರ(ಸೆ.20) ನಿವೃತ್ತಿ ಘೋಷಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ನಿಂದ ದೂರ ಉಳಿದಿದ್ದ ಹೇಡನ್ ಅವರು ಆಸ್ಟ್ರೇಲಿಯಾದ ಟಿ20 ಟೂರ್ನಿ ಬಿಗ್ ಬಾಶ್ ಲೀಗ್ ನಲ್ಲಿ ಆಡುತ್ತಿದ್ದರು. ಬ್ರಿಸ್ಬೇನ್ ಹಿಟ್ ತಂಡದ ಪರ ಆಡುತ್ತಿದ್ದ ಹೇಡನ್ ಅವರು ತಮ್ಮ ನಿವೃತ್ತಿ ಹೊಂದಿತ್ತಿರುವುದಾಗಿ ಬಗ್ಗೆ ತಮ್ಮ ತಂಡಕ್ಕೆ ತಿಳಿಸಿದ್ದಾರೆ.

40 ವರ್ಷದ ಹೇಡನ್ ಅವರು ಮೂರು ವರ್ಷದ ಕೆಳಗೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ನಂತರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈಸೂಪರ್ ಕಿಂಗ್ಸ್ ಪರ ಮೂರನೇ ಸಿಸನ್ ನಲ್ಲಿ ಕಾಣಿಸಿಕೊಂಡಿದ್ದರು.

ಐಪಿಎಲ್ ನಲ್ಲಿ ಚಾಲ್ತಿಯಲ್ಲಿರುವ ಕ್ರಿಕೆಟ್ ಬ್ಯಾಟ್ ಗಳ ಬದಲಿಗೆ ಮೊಟ್ಟಮೊದಲ ಬಾರಿಗೆ 'ಮಂಗೂಸ್' ಬ್ಯಾಟ್ ಗಳನ್ನು ಬಳಸಿ ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿದ್ದರು.

ನಂತರ 2011ರಲ್ಲಿ ಬಿಗ್ ಬಾಶ್ ಲೀಗ್ ಮೊದಲ ಬಾರಿಗೆ ಮ್ಯಾಥ್ಯೂ ಹೇಡನ್ ಆಡಿದ್ದರು. ಆಸ್ಟ್ರೇಲಿಯಾ ಪರ 103 ಟೆಸ್ಟ್ ಹಾಗೂ 161 ಏಕದಿನ ಕ್ರಿಕೆಟ್ ಆಡಿರುವ ಹೇಡನ್ ಕ್ರಮವಾಗಿ 8625 ರನ್ ಹಾಗೂ 6133 ರನ್ ಗಳಿಸಿದ್ದಾರೆ.

ಫಿನಿಕ್ಸ್ ನಂತೆ ಮೇಲೆದ್ದ ಹೇಡನ್: 1994ರಲ್ಲೇ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ಹೇಡನ್ ದಕ್ಷಿಣ ಆಫ್ರಿಕಾ ವಿರುದ್ಧ 15 ಹಾಗೂ 5 ರನ್ ಮಾತ್ರ ಗಳಿಸಿದ್ದರು. ನಂತರ 1996-97ರಲ್ಲಿ ವಿಂಡೀಸ್, ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಕಳಪೆ ಸರಾಸರಿ(21.7) ಹೊಂದಿದ್ದ ಹೇಡನ್ ವೃತ್ತಿ ಬದುಕು ಅಂತ್ಯವಾಡಲು ಹಲವರು ಯತ್ನಿಸಿದರು.

ಇಂಗ್ಲೆಂಡಿನ ಗ್ರಹಾಂ ಹಿಕ್ ರಂತೆ ದೇಶಿಯ ಕ್ರಿಕೆಟ್ ನಲ್ಲಿ ಮಾತ್ರ ಹೇಡನ್ ಆಡಲು ಸಾಧ್ಯ ಎಂದು ಮೂದಲಿಸಲಾಗಿತ್ತು. ಆದರೆ, ಸಿಡಿದೆದ್ದ ಹೇಡನ್ ಗೆ ಭಾರತ ವಿರುದ್ಧದ 2000-01 ಸರಣಿ ವರದಾನವಾಯಿತು. 3 ಟೆಸ್ಟ್ ಗಳಲ್ಲಿ ದಾಖಲೆಯ 549 ರನ್ ಸಿಡಿಸಿದ ಹೇಡನ್ ಮತ್ತೆ ಹಿಂತಿರುಗಿ ನೋಡಲಿಲ್ಲ.

ಸತತವಾಗಿ 2001,02,03,04 ಹಾಗೂ 2005ರ ಕ್ರಿಕೆಟ್ ವರ್ಷದಲ್ಲಿ 1000ರನ್ ಸಿಡಿಸಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಆಗಿ ಹೇಡನ್ ಬೆಳೆದರು. 2003ರಲ್ಲಿ ವಿಸ್ಡನ್ ವರ್ಷದ ಕ್ರಿಕೆಟರ್ ಆದರು.

ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ 380 ರನ್ (2003ರಲ್ಲಿ ಜಿಂಬಾಬ್ವೆ ವಿರುದ್ಧ) ಗಳಿಸಿದ ಆಟಗಾರ ಎಂಬ ದಾಖಲೆ ಹೇಡನ್ ಹೆಸರಲ್ಲೇ ಇದೆ.

2007ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 181 ರನ್ ಸಿಡಿಸಿದ ಹೇಡನ್, ನಂತರ ಟಿ20 ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡಿದರು.

ಮ್ಯೂಥ್ಯೂ ಹೇಡನ್ ಅವರುಆಸ್ಟ್ರೇಲಿಯಾದ ಖಾಸಗಿ ಲೈಫ್ ಸ್ಟೈಲ್ ವಾಹಿನಿಯಲ್ಲಿ ತಮ್ಮ ಅಡುಗೆ ಅಭಿರುಚಿಯನ್ನು ಪ್ರದರ್ಶಿಸುವ ಕಾರ್ಯಕ್ರಮ ಕೂಡಾ ಜನಪ್ರಿಯತೆ ಗಳಿಸಿದೆ.

English summary
Australian great Matthew Hayden opting out of Australia's domestic Big Bash League, cricketing career on Thursday, according to a statement. The 40 year old, quit Test cricket three years ago, while he continued to play for Chennai Super Kings in India's domestic T20 league, Indian Premier League.
ಅಭಿಪ್ರಾಯ ಬರೆಯಿರಿ