Englishहिन्दीമലയാളംதமிழ்తెలుగు

ಅಫ್ಘನ್ ವಿರುದ್ಧ ಭಾರತ ಗೆಲ್ಲೋದು ಏನ್ ಮಹಾ!

Posted by:
Updated: Thursday, September 20, 2012, 14:15 [IST]
 

ಅಫ್ಘನ್ ವಿರುದ್ಧ ಭಾರತ ಗೆಲ್ಲೋದು ಏನ್ ಮಹಾ!
 

ಕೊಲಂಬೋ, ಸೆ.19:ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ(ಸೆ.19) ರಾತ್ರಿ ನಡೆದಿರುವ ವಿಶ್ವ ಟಿ20ಯ ಎ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ಮೇಲೆ ಭಾರತ ಜಯಗಳಿಸಿ ಶುಭಾರಂಭ ಮಾಡಿದೆ. ಭಾರತ 23 ರನ್ ಗಳಿಂದ ಜಯ ದಾಖಲಿಸಿದೆ.

ಟೀಂ ಇಂಡಿಯಾ ಒಡ್ಡಿದ್ದ 160 ರನ್ ಮೊತ್ತವನ್ನು ಬೆನ್ನು ಹತ್ತಿದ ಅಫ್ಘಾನ್ ತಂಡ ಪಂದ್ಯದ ಕೊನೆ ಓವರ್ ನಲ್ಲಿ 24 ರನ್ ಹೊಡೆಯುವ ಸವಾಲು ಎದುರಿಸಿ ಸೋಲುಂಡಿದೆ. ಅಫ್ಘಾನಿಸ್ತಾನ ತಂಡ 19.3ಓವರ್ ಗಳಲ್ಲಿ 136 ರನ್ ಮಾತ್ರ ಗಳಿಸಿ ಸೋಲು ಕಂಡಿದೆ.

ಅಫ್ಘಾನ್ ಪರ ಬ್ಯಾಟಿಂಗ್ ಆರಂಭಿಸಿದ ಮಹಮ್ಮದ್ ಶಹಜಾದ್, ನಾಯಕ ಮಂಗಳ್ ಉತ್ತಮ ಆಟವಾಡಿದರೂ ಜೊತೆಯಾಟ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಶಹಜಾದ್ 16 ಎಸೆತದಲ್ಲಿ 18 ರನ್ (3 ಬೌಂಡರಿ), ಮಂಗಳ್ 18 ಎಸೆತದಲ್ಲಿ 22 ರನ್ (1 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರೂ ನಂತರ ಸಾದಿಕ್ 26 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.

ಮಹಮ್ಮದ್ ನಬಿ ಕೊನೆವರೆಗೂ ಹೋರಾಟ ಕಾಯ್ದುಕೊಂಡು 17 ಎಸೆತದಲ್ಲಿ 31ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿ ಟೀಂ ಇಂದಿಯಾಗೆ ಕೆಲ ಕಾಲ ಆತಂಕ ತಂದಿತ್ತರು. [ಸ್ಕೋರ್ ಕಾರ್ಡ್ ನೋಡಿ]

ಅದರೆ, ಇನ್ನೊಂದು ತುದಿಯಲ್ಲಿ ನಬಿಗೆ ಯಾರ ಬೆಂಬಲವೂ ಸಿಗದ ಕಾರಣ ಅಫ್ಘಾನ್ ಹೋರಾಟ ಮುಂದುವರೆಯಲಿಲ್ಲ. ಭಾರತದ ಪರ ಜಹೀರ್ ಖಾನ್ ಮತ್ತೊಮ್ಮೆ ವಿಫಲರಾಗಿ 3 ಓವರ್ ಗಳಲ್ಲಿ 32 ರನ್ ಹೊಡೆಸಿಕೊಂಡರು.

ಉಳಿದಂತೆ ಯುವರಾಜ್ 24 ರನ್ನಿತ್ತು 3 ವಿಕೆಟ್ ಹಾಗೂ ಬಾಲಾಜಿ 19 ರನ್ನಿತ್ತು 3 ವಿಕೆಟ್ ಪಡೆದರೆ, ಅಶ್ವಿನ್ 2 ಹಾಗೂ ಇರ್ಫಾನ್ 1 ವಿಕೆಟ ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಅವರನ್ನು ಪಂದ್ಯಶ್ರೇಷ್ಠ ಎಂದು ಘೋಷಿಸಲಾಯಿತು.

ಭಾರತ ಇನ್ನಿಂಗ್ಸ್ : ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನದ ವಿರುದ್ಧ ಭಾರತ ತಂಡ 159/5 ರನ್ ಗಳಿಸಿದೆ. ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದಿರುವ ವಿಶ್ವ ಟಿ20ಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಮುಗ್ಗರಿಸಿತು. ಗೌತಮ್ ಗಂಭೀರ್ ಕೇವಲ 10 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ವೀರೇಂದರ್ ಸೆಹ್ವಾಗ್ ಕೂಡಾ 8 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.

ನಂತರ, ಬಂದ ವಿರಾಟ್ ಕೊಹ್ಲಿ ಉತ್ತಮ ಆಟ ಪ್ರದರ್ಶಿಸಿ 39 ಎಸೆತದಲ್ಲಿ 50 ರನ್(4 ಬೌಂಡರಿ, 2 ಸಿಕ್ಸರ್) ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು. ಯುವರಾಜ್ ಆರಂಭದಲ್ಲೇ ಜೀವದಾನ ಪಡೆದರೂ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 18 ರನ್ ಗಳಿಸಿ ಯುವಿ ಔಟಾದರು.

ನಂತರ ಸುರೇಶ್ ರೈನಾ ಹಾಗೂ ನಾಯಕ ಎಂಎಸ್ ಧೋನಿ ಉತ್ತಮ ಜೊತೆಯಾಟದ ಮೂಲಕ ತಂಡದ ಮೊತ್ತವನ್ನು 150ರನ್ ಗಡಿ ದಾಟಿಸಿದರು. ರೈನಾ 33 ಎಸೆತದಲ್ಲಿ 38 ರನ್ (6ಬೌಂಡರಿ) ಗಳಿಸಿ ಪೆವಿಲಿಯನ್ ಗೆ ಮರಳಿದರು.

ಧೋನಿ 9 ಎಸೆತದಲ್ಲಿ 2 ಬೌಂಡರಿ, 1 ಸಿಕ್ಸರ್ ಮೂಲಕ 18 ರನ್ ಗಳಿಸಿ ತಂಡದಮೊತ್ತವನ್ನು 159/5 ಕ್ಕೆ ತಂದು ನಿಲ್ಲಿಸಿದರು.

ಅಫ್ಘಾನ್ ಪರ ಶಾಪೂರ್ ಜದ್ರಾನ್ 2, ಸಾದಿಕ್, ನಬಿ, ದಾವ್ಲತ್ ಜದ್ರಾನ್ ತಲಾ 1 ವಿಕೆಟ್ ಗಳಿಸಿದರು.

Story first published:  Wednesday, September 19, 2012, 21:36 [IST]
English summary
Virat Kohli's half century helped India post 159/5 in 20 overs against Afghanistan in their Group A match of ICC World Twenty20 2012 at the R Premadasa Stadium here on Wednesday night.
ಅಭಿಪ್ರಾಯ ಬರೆಯಿರಿ