Englishहिन्दीമലയാളംதமிழ்తెలుగు

ವ್ಯಾಟ್ಸನ್ ಅಮೋಘ ಆಟ, ಆಸೀಸ್ ಭರ್ಜರಿ ಜಯ

Posted by:
Updated: Wednesday, September 19, 2012, 21:06 [IST]
 

ವ್ಯಾಟ್ಸನ್ ಅಮೋಘ ಆಟ, ಆಸೀಸ್ ಭರ್ಜರಿ ಜಯ
 

ಕೊಲಂಬೋ, ಸೆ.19: ಶೇನ್ ವ್ಯಾಟ್ಸನ್ ಆಲ್ ರೌಂಡರ್ ಆಟ(3/26 ಹಾಗೂ 51 ರನ್ )ದ ಮೂಲಕ ಆಸ್ಟ್ರೇಲಿಯಾ ವಿಶ್ವ ಟಿ 20 ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಬುಧವಾರ(ಸೆ.19) ನಡೆದ ಸಿ ಗುಂಪಿನ ಪಂದ್ಯದ ಮುಖ್ಯಾಂಶಗಳು ಇಲ್ಲಿದೆ.

# ಐರ್ಲೆಂಡ್ ನಾಯಕ ವಿಲಿಯಮ್ ಪೊರ್ಟರ್ ಫೀಲ್ಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
# ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕಿಳಿದ ನಾಯಕ ಪೊರ್ಟರ್ ಫೀಲ್ಡ್ ಇನ್ನಿಂಗ್ಸ್ ನ ಮೊದಲ ಎಸೆತದಲ್ಲೇ ಶೇನ್ ವ್ಯಾಟ್ಸನ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ತೆರಳಿದರು.[ಸ್ಕೋರ್ ಕಾರ್ಡ್]
# ಇದು ಆಸ್ಟ್ರೇಲಿಯಾ ಹಾಗೂ ಐರ್ಲೆಂಡ್ ನಡುವಿನ ಮೊದಲ ಪಂದ್ಯವಾಗಿದೆ.
# ವಿಶ್ವ ಟಿ20 ಟೂರ್ನಿಯ ಅತ್ಯಂತ ಹಿರಿಯ ಆಟಗಾರ ಬ್ರಾಡ್ ಹಾಗ್ (41 ವರ್ಷ) ತನ್ನ ಓವರ್ ನ ಎರಡನೇ ಎಸೆತದಲ್ಲೇ ವಿಕೆಟ್ ಪಡೆದರು.
# 41 ವರ್ಷ 226 ದಿನಗಳನ್ನು ಫೂರೈಸಿರುವ ಬ್ರಾಡ್ ಹಾಗ್ ವಿಶ್ವ ಟಿ 20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು.
# ಮೊದಲ ಹತ್ತು ಓವರ್ ಗಳಲ್ಲಿ ಐರ್ಲೆಂಡ್ 46 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ದುಃಸ್ಥಿತಿ ತಲುಪಿತ್ತು.

# ನಂತರ ನಿಲ್ ಹಾಗೂ ಕೆವಿನ್ ಓ'ಬ್ರಿಯಾನ್ ಐದನೇ ವಿಕೆಟ್ ಗೆ 52 ರನ್ ಸೇರಿಸಿ ಉತ್ತಮ ಜೊತೆಯಾಟವಾಡಿದರು.
# ಆದರೆ, 15ನೇ ಓವರ್ ನಲ್ಲಿ ಬ್ರಿಯಾನ್ ಸೋದರರಿಬ್ಬರು ವ್ಯಾಟ್ಸನ್ ಗೆ ಬಲಿಯಾದರು.
# ವ್ಯಾಟ್ಸನ್ 4 ಓವರ್ ನಲ್ಲಿ 26 ರನ್ನಿತ್ತು 3 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 2, ಹಾಗ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಕಿತ್ತರು.
# ಐರ್ಲೆಂಡ್ ತನ್ನ ಇನ್ನಿಂಗ್ಸ್ ನಲ್ಲಿ 1 ಸಿಕ್ಸ್ ಸಿಡಿಸಿತು. ಅದು ಇನ್ನಿಂಗ್ಸ್ ಕೊನೆ ಓವರ್ ಎಸೆದ ವ್ಯಾಟ್ಸನ್ ಗೆ ನಿಗೆಲ್ ಜೋನ್ಸ್ ಸಿಕ್ಸ್ ಹೊಡೆದರು.

# ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಟಿ20 ಪಂದ್ಯದಲ್ಲಿ 1000 ರನ್ ಗಡಿ ದಾಟಿದ ಮೂರನೇ ಆಟಗಾರ ಎನಿಸಿದರು. ಬ್ರೆಂಡನ್ ಮೆಕಲಮ್ ಹಾಗೂ ಕೆವಿನ್ ಪೀಟರ್ಸನ್ ಇನ್ನಿಬ್ಬರು ಆಟಗಾರರಾಗಿದ್ದಾರೆ.
# ಟಿ20ಯಲ್ಲಿ ವಾರ್ನರ್ ಹಾಗೂ ವ್ಯಾಟ್ಸನ್ ಉತ್ತಮ ಜೊತೆಯಾಟ ಹೊಂದಿರುವ ಆಟಗಾರರಾಗಿದ್ದಾರೆ.
# ಈ ಇಬ್ಬರು 26 ಇನ್ನಿಂಗ್ಸ್ ನಲ್ಲಿ 8 ಬಾರಿ 50ಕ್ಕೂ ರನ್ ಜೊತೆಯಾಟ ದಾಖಲಿಸಿದ್ದಾರೆ. ಇದರಲ್ಲಿ 2 ಶತಕಗಳ ಜೊತೆಯಾಟವೂ ಸೇರಿದೆ.
# ವ್ಯಾಟ್ಸನ್ 3 ಸಿಕ್ಸರ್ ಹಾಗೂ 5 ಬೌಂಡರಿಯೊಂದಿಗೆ 30 ಎಸೆತದಲ್ಲಿ 51 ರನ್ ಬಾರಿಸಿದ್ದು, ಇದು ಅವರ 8ನೇ ಟಿ20 ಅರ್ಧಶತಕವಾಗಿದೆ.
# ಐರ್ಲೆಂಡ್ 20 ಓವರ್ ಗಳಲ್ಲಿ 123/7 ಗಳಿಸಿದ್ದನ್ನು ಆಸೀಸ್ 15.1 ಓವರ್ ಗಳಲ್ಲಿ 125/3 ಗುರಿ ಮುಟ್ಟಿತು.

Story first published:  Wednesday, September 19, 2012, 20:17 [IST]
English summary
Shane Watson's fine all-round performances (3/26 and 51) powered Australia to a commanding seven-wicket victory over Ireland in a Group C match at the ICC World Twenty20 2012 here on Wednesday night.
ಅಭಿಪ್ರಾಯ ಬರೆಯಿರಿ