Englishहिन्दीമലയാളംதமிழ்తెలుగు

ದೇವರಿಗೆ ಮೋಡಿ ಮಾಡಿದ ಮಣ್ಣಿನ ಮಗ ಗಿರೀಶ

Written by:
Published: Thursday, September 13, 2012, 22:46 [IST]
 

ಬೆಂಗಳೂರು, ಸೆ.13: ಲಂಡನ್ನಿನಲ್ಲಿ ಜರುಗಿದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆಲ್ಲಿಸಿಕೊಟ್ಟು ವಿಶ್ವದೆತ್ತರಕ್ಕೆ ಏರಿದ ಹಾಸನದ ಮಣ್ಣಿನ ಮಗ ಗಿರೀಶ ಹೊಸನಗರ ನಾಗರಾಜೇಗೌಡ ಈಗ ಫೇಸ್ ಬುಕ್ ನಲ್ಲೂ ಫೇಮಸ್.

ಗಿರೀಶ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆ, ಉದ್ಯೋಗದ ಆಫರ್, ಹಣದ ಹೊಳೆ ಹರಿದುಬರುತ್ತಿದೆ. ಲಂಡನ್ನಿನ ರೆಡಿಂಗ್‌ನಲ್ಲಿ ಕನ್ನಡಿಗರುಯುಕೆ ಕನ್ನಡ ಕೂಟ ಸನ್ಮಾನ ಮಾಡಿ ಧನ್ಯತೆ ಅನುಭವಿಸಿದೆ.

ದೇವರಿಗೆ ಮೋಡಿ ಮಾಡಿದ ಮಣ್ಣಿನ ಮಗ ಗಿರೀಶ

ಬೆಂಗಳೂರಿನ ಬಿಐಎಎಲ್ ವಿಮಾನ ನಿಲ್ದಾಣದಲ್ಲೂ ಭವ್ಯ ಸ್ವಾಗತ ಸಿಕ್ಕಿದ್ದು, ಕರ್ನಾಟಕ ಸರ್ಕಾರ ಕೂಡಾ 20 ಲಕ್ಷ ರು ಪ್ರೋತ್ಸಾಹ ಧನ ನೀಡಿ ಗೌರವಿಸಿತು.

ಇದೆಲ್ಲಕ್ಕಿಂತ ಭಾರತದ ಕ್ರೀಡಾಭಿಮಾನಿಗಳ ಪಾಲಿನ ದೇವರು ಸಚಿನ್ ತೆಂಡೂಲ್ಕರ್ ಬುಧವಾರ ಗಿರೀಶ್ ಗೆ ಕರೆ ಮಾಡಿ ಶುಭ ಹಾರೈಸಿದ್ದರು. ಇದು ನನ್ನ ಪಾಲಿನ ಅವಿಸ್ಮರಣೀಯ ದಿನ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಇನ್ನೂ ಹೆಚ್ಚಿನ ಸಾಧನೆಗೆ ನನ್ನನ್ನು ಪ್ರೋತ್ಸಾಹಿಸಿದರು ಎಂದು ಗಿರೀಶ ಸಂತೋಷ ಹಂಚಿಕೊಂಡಿದ್ದರು.

ನಂತರ ಗಿರೀಶ ಹಾಸನ ಜಿಲ್ಲೆಯ ತನ್ನೂರಿಗೆ ಹೋಗಿ ಸಿನೀಯರ್ ಮಣ್ಣಿನ ಮಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಆಶೀರ್ವಾದ ಪಡೆದರು. ಹಾಸನ ಜಿಲ್ಲೆಯಲ್ಲಿ ಗಿರೀಶ ಅವರನ್ನು ಮೆರವಣಿಗೆ ಮಾಡಿ ಎಲ್ಲರೂ ಸಂಭ್ರಮಿಸಿದರು.

ಇತ್ತ ಗಿರೀಶ್ ಗುಂಗಿನಲ್ಳೇ ಇದ್ದ ಸಚಿನ್ ತೆಂಡೂಲ್ಕರ್ ಗಿರೀಶ್ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾ "It was wonderful speaking to Girisha on Wednesday. He is an inspiration to all of us. I wish him all the very best for coming years," ಎಂದು ಗಿರೀಶ ಅವರ ಚಿತ್ರದೊಂದಿಗೆ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಪೋಸ್ಟ್ ಮಾಡಿದ್ದರು.

ನಂತರ ನಡೆದಿದ್ದೆಲ್ಲ ಕಮಾಲ್ ಗುರುವಾರ ರಾತ್ರಿ ವೇಳೆಗೆ ಈ ಪೋಸ್ಟ್ 14,264 ಜನರಿಂದ Like ಮಾಡಲ್ಪಟ್ಟಿದೆ. 821 ಜನ share ಮಾಡಿದ್ದಾರೆ 655 ಕಾಮೆಂಟ್ ಗಳು ಬಂದಿದೆ. ಸುಮಾರು 762,000 ಜನರು ಸಚಿನ್ ತೆಂಡೂಲ್ಕರ್ ಅವರ ಫೇಸ್ ಬುಕ್ ಪುಟವನ್ನು ಮೆಚ್ಚಿದ್ದಾರೆ.

ಲಂಡನ್ ಪ್ಯಾರಾಲಂಪಿಕ್ 2012ರಲ್ಲಿ ಹೈಜಂಪ್ ವಿಭಾಗದಲ್ಲಿ 1.74 ಮೀಟರ್ ಜಿಗಿದ ಗಿರೀಶನನ್ನು ಕಂಡರೆ ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿಮುತ್ತ ಎನ್ನೋಣ ಅನ್ನಿಸುತ್ತೆ.

English summary
Sachin Tendulkar's official Facebook page post "It was wonderful speaking to Girisha on Wednesday. He is an inspiration to all of us. I wish him all the very best for coming years," goes viral making highjumper Girisha popular in Social media.
ಅಭಿಪ್ರಾಯ ಬರೆಯಿರಿ