Englishहिन्दीമലയാളംதமிழ்తెలుగు

ವಿಶ್ವಕಪ್ ಟಿ20 ದಾಖಲೆ: ಯುವಿ ಸಿಕ್ಸರ್ ಕಿಂಗ್

Posted by:
Updated: Tuesday, September 11, 2012, 16:14 [IST]
 

ವಿಶ್ವಕಪ್ ಟಿ20 ಹತ್ತಿರವಾಗುವುದಕ್ಕೂ ಮೊದಲು ಕಣಕ್ಕಿಳಿಯುತ್ತಿರುವ ಯುವರಾಜ್ ಸಿಂಗ್ ಈಗಲೂ ಟಿ20 ಕ್ರಿಕೆಟ್ ನಲ್ಲಿ ತಮ್ಮ ದಾಖಲೆಗಳ ಮೂಲಕ ಸಮರ್ಥ ಆಟಗಾರ ಎನಿಸಿದ್ದಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ವಿಶ್ವಕಪ್ ಟಿ20ಗೂ ಮುನ್ನ(2007 ರಿಂದ 2012) ಈವರೆಗಿನ ಭಾರತೀಯ ಆಟಗಾರರ ಸಾಧನೆಯತ್ತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ...

ವಿಶ್ವಕಪ್ ಟಿ20 ದಾಖಲೆ: ಯುವಿ ಸಿಕ್ಸರ್ ಕಿಂಗ್

* ಐಸಿಸಿ ವಿಶ್ವ ಟಿ20 ಪಂದ್ಯಗಳಲ್ಲಿ ಭಾರತದ ಅತ್ಯಧಿಕ ಮೊತ್ತ 218/4, ಇಂಗ್ಲೆಂಡ್ ವಿರುದ್ಧ, ಡರ್ಬನ್, ಸೆಪ್ಟೆಂಬರ್ 2007
* ವಿಶ್ವ ಟಿ20 ರಲ್ಲಿ 16 ಪಂದ್ಯಗಳಲ್ಲಿ 29.60ರನ್ ಸರಾಸರಿಯಂತೆ 444 ರನ್ ಗಳಿಸಿರುವ ಗೌತಮ್ ಗಂಭೀರ್ ಅತ್ಯಧಿಕ ರನ್ ಗಳಿಸಿರುವ ಬ್ಯಾಟ್ಸ್ ಮನ್.
* ಅತ್ಯಧಿಕ ಸಿಕ್ಸರ್ ಸಿಡಿಸಿದ ಕೀರ್ತಿ ಯುವರಾಜ್ ಸಿಂಗ್ ಗೆ ಸಲ್ಲುತ್ತದೆ 2007ರಿಂದ ಇಲ್ಲಿವರೆಗೂ 16 ಪಂದ್ಯಗಳಲ್ಲಿ 24 ಸಿಕ್ಸ್ ಸಿಡಿಸಿದ್ದಾರೆ.
* ಭಾರತದ ಪರ ಗಂಭೀರ್ 4 ಅರ್ಧಶತಕ ಬಾರಿಸಿ, ಹೆಚ್ಚು ಬಾರಿ 50 ರನ್ ಗಡಿ ದಾಟಿದ್ದಾರೆ.
* ಸುರೇಶ್ ರೈನಾ ವಿಶ್ವ ಟಿ20ಯಲ್ಲಿ ಶತಕ ಗಳಿಸಿದ ಏಕೈಕ ಭಾರತೀಯ ಕ್ರಿಕೆಟರ್ ಆಗಿದ್ದಾರೆ. ಈವರೆಗೂ ಒಟ್ಟು 239 ರನ್ ಗಳಿಸಿದ್ದಾರೆ.
* ಹರ್ಭಜನ್ ಸಿಂಗ್ ಹಾಗೂ ಎಂಎಸ್ ಧೋನಿ ಅತಿ ಹೆಚ್ಚು ಪಂದ್ಯ(17)ಗಳನ್ನು ಆಡಿದ್ದಾರೆ.
* ಆರ್ ಪಿ ಸಿಂಗ್ ಅತ್ಯಧಿಕ ವಿಕೆಟ್ (14) ಗಳಿಸಿದ ಆಟಗಾರ ಎನಿಸಿದ್ದಾರೆ.
* ಟಿ20 ವಿಶ್ವಕಪ್ ನಲ್ಲಿ ಯಾವೊಬ್ಬ ಭಾರತೀಯ ಆಟಗಾರ ಕೂಡಾ ಪಂದ್ಯವೊಂದರಲ್ಲಿ 5 ವಿಕೆಟ್ ಉದುರಿಸಿಲ್ಲ. ಆರ್ ಪಿ ಸಿಂಗ್, ಜಹೀರ್ ಖಾನ್ ಹಾಗೂ ಪಿ ಓಜಾ 4 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ.
* ಹರ್ಭಜನ್ ಸಿಂಗ್ 12 ಹಾಗೂ ಇರ್ಫಾನ್ ಪಠಾಣ್ 11 ವಿಕೆಟ್ ಪಡೆದು ಅತ್ಯಧಿಕ ವಿಕೆಟ್ ಪಡೆದ ಭಾರತೀಯರೆನಿಸಿದ್ದಾರೆ.
* ಹರ್ಭಜನ್ ಸಿಂಗ್, ಶ್ರೀಶಾಂತ್ ತಲಾ ಎರಡು ಮೇಡನ್ ಓವರ್ ಎಸೆದಿದ್ದಾರೆ. ಇರ್ಫಾನ್ ಪಠಾಣ್ ಹಾಗೂ ರವೀಂದ್ರ ಜಡೇಜ ತಲಾ 1 ಮೇಡನ್ ಓವರ್ ಹಾಕಿದ್ದಾರೆ.
* ಯುವರಾಜ್ ಸಿಂಗ್ ಒಂದೇ ಇನ್ನಿಂಗ್ಸ್ ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಈ ಪ್ರದರ್ಶನ ನೀಡಿದ್ದಾರೆ.
* ಯುಸುಫ್ ಪಠಾಣ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಒಟ್ಟಾರೆ 6 ಕ್ಯಾಚ್ ಪಡೆದು ಅತ್ಯಧಿಕ ಕ್ಯಾಚ್ ಪಡೆದ ಪಟ್ಟಿಯಲ್ಲಿದ್ದಾರೆ.
* ವೀರೇಂದರ್ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಮೊದಲ ವಿಕೆಟ್ ಗೆ ಇಂಗ್ಲೆಂಡ್ ವಿರುದ್ಧ ಸೆ. 2007ರ ಪಂದ್ಯದಲ್ಲಿ 136 ರನ್ ಗಳಿಸಿದ್ದು ಈ ವರೆಗಿನ ಅತ್ಯಧಿಕ ಜೊತೆಯಾಟ ಎನಿಸಿದೆ.
* ಗೌತಮ್ ಗಂಭೀರ್ ಒಂದೇ ಸರಣಿಯಲ್ಲಿ 7 ಪಂದ್ಯದಲ್ಲಿ 222 ರನ್ ಗಳಿಸಿದ್ದಾರೆ. 2007ರ ದಕ್ಷಿಣ ಅಫ್ರಿಕಾ ಟಿ20 ವಿಶ್ವಕಪ್ ನಲ್ಲಿ ಈ ಸಾಧನೆ ಮಾಡಿದ್ದರು.
* ಇತ್ತೀಚೆಗೆ ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ರೋಹಿತ್ ಶರ್ಮ ವಿಶ್ವಕಪ್ ಟಿ20ಯಲ್ಲಿ ಉತ್ತಮ ಸರಾಸರಿ ಹೊಂದಿದ್ದಾರೆ. 60.60 ರನ್ ಸರಾಸರಿಯೊಂದಿಗೆ 12 ಪಂದ್ಯದಲ್ಲಿ 303ರನ್ ಗಳಿಸಿದ್ದಾರೆ.
* ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ನಲ್ಲಿ ಡರ್ಬನ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಟೈ ಆಗಿತ್ತು.

Story first published:  Tuesday, September 11, 2012, 13:13 [IST]
English summary
Despite his current form, Gautam Gambhir continues to lead the table for the most runs in World T20 by an Indian while Yuvraj continues to rule, as he is the 'King of Sixes'. With a few days to go for World T20 to begin in Sri Lanka, here are a few stats that give an India about how Indians have performed
ಅಭಿಪ್ರಾಯ ಬರೆಯಿರಿ