Englishहिन्दीമലയാളംதமிழ்తెలుగు

ದ್ರಾವಿಡ್ ಗೆ ರಾಜ್ಯದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ

Posted by:
Updated: Tuesday, September 11, 2012, 17:49 [IST]
 

ದ್ರಾವಿಡ್ ಗೆ ರಾಜ್ಯದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ
 

ಬೆಂಗಳೂರು, ಸೆ.11: ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಬಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರಿಗೆ ಬೆಂಗಳೂರಿನ ಕ್ರೀಡಾ ಬರಹಗಾರರ ಒಕ್ಕೂಟ (SWAB) ನೀಡುವ ವಾರ್ಷಿಕ ಕ್ರೀಡಾ ಪ್ರಶಸ್ತಿಗಳನ್ನು ಬುಧವಾರ(ಸೆ.12) ಪ್ರದಾನ ಮಾಡಲಾಗುತ್ತದೆ ಎಂದು ಕಾರ್ಯದರ್ಶಿ ಗರುಡ ಅವರು ದಟ್ಸ್ ಕ್ರಿಕೆಟ್ ಗೆ ತಿಳಿಸಿದ್ದಾರೆ.

ಕರ್ನಾಟಕದ ಕ್ರೀಡಾಪಟುಗಳ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸಲು ಪ್ರತಿವರ್ಷ ಕ್ರೀಡಾ ಬರಹಗಾರರು ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. 2011ನೇ ಸಾಲಿನ ಪ್ರಶಸ್ತಿಗೆ ರಾಹುಲ್ ದ್ರಾವಿಡ್ ಹಾಗೂ ಅಶ್ವಿನಿ ಪೊನ್ನಪ್ಪ ಆಯ್ಕೆಯಾಗಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ರಾಹುಲ್ ದ್ರಾವಿಡ್ ವಿದಾಯ ಹೇಳಿದ್ದಾರೆ. 2011ನೇ ಸಾಲಿನ ಕ್ಯಾಸ್ಟ್ರಾಲ್ ವರ್ಷದ ಶ್ರೇಷ್ಠ ಟೆಸ್ಟ್‌ ಬ್ಯಾಟ್ಸ್‌ಮನ್‌ ಪ್ರಶಸ್ತಿ ಕೂಡಾ ದ್ರಾವಿಡ್‌ ಪಾಲಾಗಿದೆ.

ಐಪಿಎಲ್ ಐದನೇ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಕೋಚ್ ಆಗಲು ಸಿದ್ಧ ಎಂದು ಸುಳಿವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಅತ್ಯುತ್ತಮ ಆಟಗಾರ ಎನಿಸಿದ್ದ ರಾಹುಲ್ ದ್ರಾವಿಡ್ 164 ಟೆಸ್ಟ್ ಗಳಿಂದ 13,288 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 344 ಏಕದಿನ ಕ್ರಿಕೆಟ್ ಆಡಿ 10,889ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ.

ಅಶ್ವಿನಿ ಪೊನ್ನಪ್ಪ ಅವರು ಲಂಡನ್ ಒಲಿಂಪಿಕ್ಸ್ 2012ರಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ಜ್ವಾಲಾ ಗುಟ್ಟಾ ಜೊತೆಗೂಡಿ 2010ರ ಕಾಮನ್ ವೆಲ್ತ್ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಕ್ರಿಕೆಟ್ ನ ದಂತಕತೆ ಜಿಆರ್ ವಿಶ್ವನಾಥ್ ಅವರಿಗೆ 2011ನೇ ಸಾಲಿನ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ.

* ಶ್ರೇಷ್ಠ ಕ್ರೀಡಾಪಟು(ಪುರುಷ) : ರಾಹುಲ್ ದ್ರಾವಿಡ್ (ಕ್ರಿಕೆಟ್)
* ಶ್ರೇಷ್ಠ ಕ್ರೀಡಾಪಟು(ಮಹಿಳೆ) : ಅಶ್ವಿನಿ ಪೊನ್ನಪ್ಪ(ಬಾಡ್ಮಿಂಟನ್)
* ಶ್ರೇಷ್ಠ ಜೂ. ಕ್ರೀಡಾಪಟು(ಪುರುಷ) : ಎಸ್ ಚಿಕ್ಕರಂಗಪ್ಪ(ಗಾಲ್ಫ್)
* ಶ್ರೇಷ್ಠ ಜೂ. ಕ್ರೀಡಾಪಟು(ಮಹಿಳೆ) : ವರ್ಷ ಸಂಜೀವ್ (ಸ್ನೂಕರ್)
* ಶ್ರೇಷ್ಠ ಕೋಚ್: ಪ್ರದೀಪ್ ಕುಮಾರ್ (ಈಜು)
* ಶ್ರೇಷ್ಠ ತಂಡ: ರಾಜ್ಯ ಹಿರಿಯರ ಈಜು ತಂಡ
* ಜೀವಮಾನದ ಸಾಧನೆ: ಜಿಆರ್ ವಿಶ್ವನಾಥ್ (ಕ್ರಿಕೆಟ್)

Story first published:  Tuesday, September 11, 2012, 17:46 [IST]
English summary
Former India captain Rahul Dravid will receive the "Best Sportsperson (Male)" award from Sports Writers' Association of Bangalore (SWAB) on Wednesday (September 12).
ಅಭಿಪ್ರಾಯ ಬರೆಯಿರಿ