Englishहिन्दीമലയാളംதமிழ்తెలుగు

ಇರಾನಿ ಕಪ್ : ಬಿನ್ನಿ ಅಯ್ಕೆ, ಪೂಜಾರಾ ನಾಯಕ

Posted by:
Updated: Monday, September 10, 2012, 16:04 [IST]
 

ಇರಾನಿ ಕಪ್ : ಬಿನ್ನಿ ಅಯ್ಕೆ, ಪೂಜಾರಾ ನಾಯಕ
 

ಬೆಂಗಳೂರು, ಸೆ.10: ರಣಜಿ ಟ್ರೋಫಿ ಚಾಂಪಿಯನ್ ರಾಜಸ್ಥಾನ್ ವಿರುದ್ಧ ನಡೆಯುವ ಇರಾನಿ ಕಪ್ 2012ಕ್ಕೆ ಇತರೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಸ್ಟುವರ್ಟ್ ಬಿನ್ನಿ ತಂಡಕ್ಕೆ ಆಯ್ಕೆಯಾಗಿದ್ದು, ಚೇತೇಶ್ವರ ಪೂಜಾರಾ ನಾಯಕರಾಗಿದ್ದಾರೆ.

ಆದರೆ, ಕಳಪೆ ಫಾರ್ಮ್ ನಲ್ಲಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಂಡಳಿ ಆಯ್ಕೆ ಮಾಡದೆ ಅಚ್ಚರಿ ಮೂಡಿಸಿದೆ.

ತಂಡದಲ್ಲಿ ಇಬ್ಬರು ಕನ್ನಡಿಗರಿದ್ದು ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ.

ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದಲ್ಲಿ ತಮ್ಮ ಮೊದಲ ಶತಕ ದಾಖಲಿಸಿದ ಸೌರಾಷ್ಟ್ರದ ಚೇತೇಶ್ವರ್ ಪೂಜಾರಾ ಅವರಿಗೆ ಇತರೆ ಭಾರತ ತಂಡದ ನಾಯಕನ ಹೊಣೆ ನೀಡಲಾಗಿದೆ.

ಉಳಿದಂತೆ 19 ವರ್ಷ ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದಿಂದ ಎಡಗೈ ಸ್ಪಿನ್ನರ್ ಹರ್ಮೀತ್ ಸಿಂಗ್ ಆಯ್ಕೆಯಾಗಿರುವುದು ವಿಶೇಷ. ಈ ಬಾರಿ ಇರಾನಿ ಕಪ್ 2012 ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸೆ.21 ರಿಂದ 25 ರವರೆಗೆ ಕ್ರೀಡಾಭಿಮಾನಿಗಳ ಮನ ತಣಿಸಲಿದೆ.

ಇರಾನಿ ಕಪ್ 2012ನೊಂದಿಗೆ ದೇಶಿ ಕ್ರಿಕೆಟ್ ಋತು ಕೂಡಾ ಆರಂಭಗೊಳ್ಳಲಿದೆ. ಇರಾನಿ ಕಪ್ 2012ಕ್ಕೆ ಆಯ್ಕೆಯಾದ 15 ಮಂದಿ ಇತರೆ ಭಾರತ ತಂಡ ಇಂತಿದೆ:

ಇತರೆ ಭಾರತ ತಂಡ : ಚೇತೇಶ್ವರ ಪೂಜಾರಾ(ನಾಯಕ), ಮುರಳಿ ವಿಜಯ್, ಅಜಿಂಕ್ಯ ರಹಾನೆ, ಎಸ್ ಬದರಿನಾಥ್, ದಿನೇಶ್ ಕಾರ್ತಿಕ್, ವೃದ್ಧಿಮಾನ್ ಸಹಾ, ಯೂಸುಫ್ ಪಠಾಣ್, ಪ್ರಜ್ಞಾನ್ ಓಜಾ, ಪರ್ವಿಂದರ್ ಅವಾನಾ, ಇಶಾಂತ್ ಶರ್ಮ, ಉಮೇಶ್ ಯಾದವ್, ಶಿಖರ್ ಧವನ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ಹಾಗೂ ಹರ್ಮಿತ್ ಸಿಂಗ್

Story first published:  Monday, September 10, 2012, 16:02 [IST]
English summary
Cheteshwar Pujara has been named captain of Rest of India for the Irani Cup 2012 tie against Ranji Trophy champions Rajasthan. However, the selectors, on Monday(Sep.10), did not pick Sachin Tendulkar, who has been out of form recently.
ಅಭಿಪ್ರಾಯ ಬರೆಯಿರಿ