Englishहिन्दीമലയാളംதமிழ்తెలుగు

ಡೆಕ್ಕನ್ ತಂಡ ಸಲ್ಮಾನ್ ಖಾನ್ ಖರೀದಿಸಿಲ್ಲ

Posted by:
Published: Thursday, September 6, 2012, 16:34 [IST]
 

ಡೆಕ್ಕನ್ ತಂಡ ಸಲ್ಮಾನ್ ಖಾನ್ ಖರೀದಿಸಿಲ್ಲ
 

ಹೈದರಾಬಾದ್, ಸೆ.5: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮಾರಾಟಕ್ಕೆ ಸಿದ್ಧವಾಗಿರುವ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಖರೀದಿಸಿದ್ದಾರೆ ಎಂಬ ಊಹಾಪೋಹ ಸುದ್ದಿಯನ್ನು ತಂಡದ ಒಡತಿ ಗಾಯತ್ರಿ ರೆಡ್ಡಿ ಅಲ್ಲಗೆಳೆದಿದ್ದಾರೆ.

ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಾಯತ್ರಿ,  Gayatri Reddy ‏@GayatriReddyDC1 : Some reports say IPL team Deccan Chargers already sold to Salman Khan. That is not true. We still in are touch with everybody.ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಮುನ್ನ It is confirmed that IPL team Deccan Chargers up for Sale. Winning bid and more info to be announced on september 13. Will miss #IPL ಎಂದು ಗಾಯತ್ರಿ ಟ್ವೀಟ್ ಮಾಡಿದ್ದರು.

ಬಿಸಿಸಿಐನಿಂದ ಅನುಮತಿ ಪಡೆದ ನಂತರ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿ(DHCL) ಸಂಸ್ಥೆ ಡೆಕ್ಕನ್ ಚಾರ್ಜರ್ಸ್ ತಂಡದ ಮಾರಾಟಕ್ಕೆ ಟೆಂಡರ್ ಕರೆದು ಪತ್ರಿಕಾ ಪ್ರಕಟಣೆ ಹೊರಡಿಸಿದೆ. DHCL ಹೆಸರಿನಲ್ಲಿ 5 ಲಕ್ಷ ರು ಡಿಡಿ ಅಥವಾ ಪೇ ಆರ್ಡರ್ ತೆಗೆದುಕೊಂಡು ಸೆ.7 ರಿಂದ ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಟೆಂಡರ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಸೆ.12 ಕ್ಕೆ ಬಿಡ್ಡಿಂಗ್ ಮುಕ್ತಾಯವಾಗಲಿದ್ದು, ಸೆ.13ರಂದು ಚೆನ್ನೈನ ಶೆರಾಟನ್ ಪಾರ್ಕ್ ಹೋಟೆಲ್ ನಲ್ಲಿ ಹೊಸ ಮಾಲೀಕರನ್ನು ಘೋಷಿಸಲಾಗುತ್ತದೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಿಯಮದ ಪ್ರಕಾರ ಬಿಡ್ಡಿಂಗ್ ನ ಶೇ 5 ರಷ್ಟು ಮೊತ್ತ ಬಿಸಿಸಿಐ ಪಾಲಾಗಲಿದೆ. ಖರೀದಿದಾರರಿಗೆ ಡೆಕ್ಕನ್ ಚಾರ್ಜರ್ಸ್ ತಂಡ ಈಗ ಹೇಗಿದೆಯೋ ಹಾಗೆ ದೊರೆಯಲಿದೆ. ಡೆಕ್ಕನ್ ಚಾರ್ಜರ್ಸ್ ಬ್ರಾಂಡ್ ನೇಮ್ ಬದಲಿಸಲು ಸಾಧ್ಯವಿಲ್ಲ.

ಡೆಕ್ಕನ್ ಚಾರ್ಜರ್ಸ್ ಮಾರಾಟ, ಬಿಡ್ಡಿಂಗ್ ವ್ಯವಹಾರಗಳನ್ನು ಬ್ಯಾಂಕಿಂಗ್ ಸಂಸ್ಥೆ ರೆಲಿಗೇರ್ ಗೆ ವಹಿಸಲಾಗಿದೆ.

ಡೆಕ್ಕನ್ ಚಾರ್ಜರ್ಸ್ ತಂಡ ಐಪಿಎಲ್ 5 ರಲ್ಲಿ ಭಾಗವಹಿಸಿ, ಕಳಪೆ ಸಾಧನೆ ತೋರಿತ್ತು. ತಂಡದ ಆಟಗಾರರಿಗೆ ಸಂಬಳ ನೀಡದೆ ಬಾಕಿ ಉಳಿಸಿಕೊಂಡಿತ್ತು. ಹೊಸ ಮಾಲೀಕರು ಆಟಗಾರರ ಬಾಕಿ ಮೊತ್ತವನ್ನು ನೀಡಬೇಕಾಗುತ್ತದೆ.

ಡೆಕ್ಕನ್ ಚಾರ್ಜರ್ಸ್ ತಂಡ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಳಪೆ ಸಾಧನೆ ಮುಂದುವರೆಸಿತ್ತು.

English summary
It is official now. Deccan Chargers will have new owners as Deccan Chronicle Holdings Limited (DCHL), on Thursday(Sep.6), invited bids from prospective buyers for the Indian Premier League franchisee.
ಅಭಿಪ್ರಾಯ ಬರೆಯಿರಿ