Englishहिन्दीമലയാളംதமிழ்తెలుగు

ಸಚಿನ್ ಈಗ ಗುಡ್ ಬೈ ಹೇಳಬಾರ್ದು ಏಕೆ?

Posted by:
Updated: Wednesday, September 5, 2012, 18:16 [IST]
 

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 23 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ 'ವಿ' ಫಾರ್ ವಿಕ್ಟರಿ ಎಂಬ ಪದ ಅವರ ಕಿವಿಗೆ ಸದಾ ಕೇಳಿಸುತ್ತಿತ್ತು.

ಅದರೆ, ಸತತವಾಗಿ ಕ್ಲೀನ್ ಬೋಲ್ಡ್ ಆಗಿ 51 ಬಾರಿ ಬೋಲ್ಡ್ ಆಗಿ ದಾಖಲೆ ನಿರ್ಮಿಸಿರುವ ಸಚಿನ್ ಕಿವಿಗೆ ಈಗ 'ವಿ' ಎಂದರೆ ವಿದಾಯ ಅಥವಾ 'R' retirement ಪದ ಈಗ ಹೆಚ್ಚಾಗಿ ಕಿವಿಯಲ್ಲಿ ಗುಂಗುಡುತ್ತಿದೆ.

ಸಚಿನ್ ಈಗ ಗುಡ್ ಬೈ ಹೇಳಬಾರ್ದು ಏಕೆ?

ಆದರೆ, ಎಂದಿನಂತೆ ಸಚಿನ್ ತಮ್ಮ ಮನಸ್ಸನ್ನು ಮತ್ತೆ ಕ್ರಿಕೆಟ್ ನತ್ತ ಹರಿಸುತ್ತಾ, ಟೀಕೆಗಳಿಗೆ ಅಂಜದೆ ನೆಲಕಚ್ಚಿ ನಿಂತಿದ್ದಾರೆ.

ಈಗ ಸಚಿನ್ ನಿವೃತ್ತಿ ಹೊಂದಿದರೆ ಭಾರತ ತಂಡದ ಸಮತೋಲನ ಹದಗೆಡವುದರಲ್ಲಿ ಸಂಶಯವಿಲ್ಲ. ಸಚಿನ್ ಗೆ 39 ವರ್ಷ ವಯಸ್ಸಾದರೂ ಆಡುವ ಉತ್ಸಾಹ ಕಮ್ಮಿಯಾಗಿಲ್ಲ.

ಇನ್ನೊಬ್ಬ ಸಚಿನ್ ಹುಡುಕುವುದು ಭಾರತಕ್ಕೆ ಸದ್ಯಕ್ಕೆ ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರ ಸ್ಥಾನ ತುಂಬಬಲ್ಲ ಆಟಗಾರರು ಬೇಕಿದ್ದಾರೆ.

ವಿರಾಟ್ ಕೊಹ್ಲಿಯಂತೆ ಮುಂದಿನ ಸಚಿನ್, ಚೇತೇಶ್ವರ ಪೂಜಾರಾ ಅವರನ್ನು ಮುಂದಿನ ದ್ರಾವಿಡ್ ಎಂದು ಈಗಲೇ ಘೋಷಿಸುವುದು ಬಾಲಿಶವಾಗುತ್ತದೆ. ಈ ಇಬ್ಬರು ಪ್ರತಿಭಾವಂತ ಆಟಗಾರರು ಉತ್ತಮ ಲಯದಲ್ಲಿದ್ದು, ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಆದರೆ, ಇದೇ ಆಟವನ್ನು ವಿದೇಶದಲ್ಲೂ ತೋರಿ ತಮಗೆ ನೀಡಿರುವ ಟ್ಯಾಗ್ ಅನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಈ ವರ್ಷವಂತೂ ಭಾರತ ತಂಡ ವಿದೇಶದಲ್ಲಿ ಟೆಸ್ಟ್ ಆಡುವ ಲಕ್ಷಣಗಳಿಲ್ಲ.

ಸಚಿನ್ ಫಾರ್ಮ್ ಗೆ ಏನಾಯ್ತು?: ಸತತವಾಗಿ 25 ಇನ್ನಿಂಗ್ಸ್ ನಿಂದ ಒಂದೇ ಒಂದು ಶತಕ ಬಾರಿಸದ ಸಚಿನ್ ಅವರಿಗೆ 190 ಟೆಸ್ಟ್ ಗಳ ಅನುಭವವಿದೆ. ಆದರೆ, ಸದ್ಯಕ್ಕೆ ಅವರ ಫುಟ್ ವರ್ಕ್ ನಲ್ಲಿ ಕೊಂಚ ವ್ಯತ್ಯಾಸವಾಗಿರುವುದರಿಂದ ಕಳಪೆಯಾಗಿ ಬೋಲ್ಡ್ ಆಗುತ್ತಿದ್ದಾರೆ.

ಉಳಿದಂತೆ ಸುರೇಶ್ ರೈನಾ ಮೈ ಮೇಲೆ ಬಿಳಿ ಜರ್ಸಿ ಹೆಚ್ಚು ಕಾಲ ನಿಲ್ಲುತ್ತಿಲ್ಲ. ಹೊಸಬರಿಗೆ ಅವಕಾಶ ಸಿಗುತ್ತಿಲ್ಲ. ರೋಹಿತ್ ಶರ್ಮ ಟೆಸ್ಟ್ ಕತೆ ಬಿಡಿ, ಏಕದಿನ ಕ್ರಿಕೆಟ್ ನಲ್ಲಿ ದೊಡ್ಡ ಜೋಕ್ ಆಗಿ ಪರಿಣಮಿಸಿದ್ದಾರೆ.

ಅಜಿಂಕ್ಯಾ ರಹಾನೆ ದೇಶಿ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದರೂ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ಕೊರತೆ ಎದುರಿಸುತ್ತಿದ್ದಾರೆ. ಮನೋಜ್ ತಿವಾರಿ ಹಾಗೂ ಎಸ್ ಬದರಿನಾಥ್ ಇಬ್ಬರು ಪ್ರತಿಭಾವಂತರು ಇನ್ನೂ ಎಲ್ಲೂ ಒಗ್ಗಿಕೊಂಡಿಲ್ಲ.

ಪರಿಸ್ಥಿತಿ ಹೀಗಿರುವಾಗ ಏಕಾಏಕಿ ಸಚಿನ್ ತಂಡವನ್ನು ತೊರೆದರೆ, ಟೀಂ ಇಂಡಿಯಾ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.

ವೆಸ್ಟ್ ಇಂಡೀಸ್ ಹಾಗಿರಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಪಿಚ್ ನಲ್ಲಿ ಆಡುವ ಅನುಭವ ಇನ್ನೂ ನಮ್ಮ ಬ್ಯಾಟ್ಸ್ ಮನ್ ಗಳಿಗೆ ಇಲ್ಲ ಎನ್ನುವುದನ್ನು ನಾಚಿಕೆ ಇಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ.

ಬೇರೆ ದೇಶದ ಆಟಗಾರರನ್ನು ಇಲ್ಲಿಗೆ ಕರೆಸಿಕೊಂಡು ಐಪಿಎಲ್ ಎಂಬ ಟಿ20 ಮೋಜಿನಾಟದಲ್ಲಿ ತೊಡಗುವುದರ ಬದಲು ನಮ್ಮ ಆಟಗಾರರನ್ನು ಬೌನ್ಸಿ ಪಿಚ್ ಗಳಿರುವ ದೇಶಗಳಿಗೆ ಒಂದಷ್ಟು ಕಾಲ ತರಬೇತಿಗೆ ಕಳಿಸುವುದು ಒಳ್ಳೆಯದು.

ನಮ್ಮ ದೇಶದಲ್ಲಂತೂ ವೇಗದ ಪಿಚ್ ಗಳನ್ನು ಇನ್ನು 10 ವರ್ಷವಾದರೂ ತಯಾರಿಸುವುದಿಲ್ಲ. ಹೀಗಾಗಿ ಸಚಿನ್ ತಂಡವನ್ನು ತೊರೆಯದೆ ನವೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವುದು ಉತ್ತಮ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ಗೆ ಬ್ಯಾಟಿಂಗ್ ಬಗ್ಗೆ ಮಾಧ್ಯಮಗಳು ಪಾಠ ಮಾಡಬೇಕಿಲ್ಲ. ಗವಾಸ್ಕರ್ ಏನೇ ಹೇಳಿದರೂ ಅದು ಸಚಿನ್ ಅವರ ಬ್ಯಾಟಿಂಗ್ ನಲ್ಲಿನ ತಾಂತ್ರಿಕ ದೋಷವನ್ನು ತೋರಿಸಲು ಮಾತ್ರ.

ಸದಾ ಯುವಕರ ಪರ ನಿಲ್ಲುವ ಎಂಎಸ್ ಧೋನಿ ಕೂಡಾ ಸಚಿನ್ ತಂಡದಲ್ಲಿ ಇರಬೇಕು ಎನ್ನುತ್ತಿರುವಾಗ ಯಾರೇನು ಮಾಡಲಾಗುವುದಿಲ್ಲ. ಹಾಗೂ ನಿವೃತ್ತಿ ಎಂಬುದು ಸಚಿನ್ ಬಾಯಿಂದ ಸದ್ಯಕ್ಕಂತೂ ಹೊರಬರದಿರಲಿ.

Story first published:  Wednesday, September 5, 2012, 14:56 [IST]
English summary
Is it really time for Sachin Tendulkar to put an end to his 23-year-old international cricket journey? This is the million-dollar question doing the rounds in certain parts of the country. But the man himself, as he has been doing over the years, has chosen to remain unfazed and rightly so.
ಅಭಿಪ್ರಾಯ ಬರೆಯಿರಿ