Englishहिन्दीമലയാളംதமிழ்తెలుగు

ತಮಿಳ್ನಾಡಲ್ಲಿ ಕೇರಳವನ್ನು 'ಕುಟ್ಟಿದ' ಕರ್ನಾಟಕ

Posted by:
Updated: Tuesday, September 4, 2012, 15:07 [IST]
 

ಚೆನ್ನೈ, ಸೆ.4: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ಕಿವೀಸ್ ತಂಡವನ್ನು ಟೀಂ ಇಂಡಿಯಾ ಮಣಿಸಿ ಸಂಭ್ರಮಿಸುತ್ತಿದ್ದಂತೆ, ಅತ್ತ ಚೆನ್ನೈನಲ್ಲಿ ಕರ್ನಾಟಕದ ಹುಡುಗರು ಕೇರಳವನ್ನು ಮಣಿಸಿ ಕಪ್ ಎತ್ತಿ ಕುಣಿದಾಡಿದ್ದಾರೆ.

ಮತ್ತೊಮ್ಮೆ ಬುಚ್ಚಿ ಬಾಬು ಸ್ಮಾರಕ ಟ್ರೋಫಿ ಗೆಲ್ಲುವ ಮೂಲಕ ಕರ್ನಾಟಕ ತಂಡ ತನ್ನ ಪ್ರಭುತ್ವ ಮೆರೆದಿದೆ. ಅಲ್ಪ ಮೊತ್ತದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಹಾಗೂ ಕೆಬಿ ಪವನ್ ಜವಾಬ್ದಾರಿಯುತ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ತಮಿಳ್ನಾಡಲ್ಲಿ ಕೇರಳವನ್ನು 'ಕುಟ್ಟಿದ' ಕರ್ನಾಟಕ

138ರನ್ ಚೇಸ್ ಮಾಡಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಫೈನಲ್ ನಲ್ಲಿ ಕೇರಳ ತಂಡವನ್ನು 3 ವಿಕೆಟ್ ಗಳಿಂದ ಮಣಿಸಿದೆ.

ರಾಬಿನ್ ಉತ್ತಪ್ಪ ಹಾಗೂ ಕೆಬಿ ಪವನ್ ಅವರು ತಲಾ 32 ರನ್ ಗಳಿಸಿದರೆ, ಸಿಎಂ ಗೌತಮ್ ಹಾಗೂ ಕೆ ಗೌತಮ್ ಅವರು ಕ್ರಮವಾಗಿ 27 ಹಾಗೂ 22 ರನ್ ಗಳಿಸಿ ತಂಡಕ್ಕೆ ತಮ್ಮ ಕೊಡುಗೆ ನೀಡಿದರು.

ಕೇರಳ ನೀಡಿದ ಗುರಿಯನ್ನು 33.3 ಓವರ್ ಗಳಲ್ಲಿ ತಲುಪಿದ ಕರ್ನಾಟಕ ತಂಡಕ್ಕೆ 1 ಲಕ್ಷ ರು ಚೆಕ್ ಸಿಕ್ಕಿದೆ. ರನ್ನರ್ ಅಪ್ ಕೇರಳಕ್ಕೆ 50,000 ರು ದಕ್ಕಿದೆ.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಕೇರಳ ತಂಡ 61.2 ಓವರ್ ಗಳಲ್ಲಿ 137 ರನ್ ಮಾತ್ರ ಗಳಿಸಿ ಆಲೌಟ್ ಆಗಿತ್ತು. ಕರ್ನಾಟಕದ ಸ್ಪಿನ್ನರ್ ಕೆಪಿ ಅಪ್ಪಣ್ಣ 35 ರನ್ನಿತ್ತು 4 ವಿಕೆಟ್ ಗಳಿಸಿದರೆ, ಅಭಿಮನ್ಯು ಮಿಥುನ್ 3 ವಿಕೆಟ್ ಗಳಿಸಿದರು.

ಈ ನಡುವೆ ಹೈದರಾಬಾದಿನಲ್ಲಿ ಸೆ.6 ರಿಂದ 16ರ ತನಕ ನಡೆಯಲಿರುವ ಮೊಯಿನ್ ಉದ್ ದೌಲಾ ಗೋಲ್ಡ್ ಕಪ್ ಟೂರ್ನಿಗೆ ಸುನಿಲ್ ರಾಜು ಅವರನ್ನು ಕರ್ನಾಟಕದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಸಂಕ್ಷಿಪ್ತ ಸ್ಕೋರ್: ಕೇರಳ 137 ಅಲೌಟ್ 61.2 ಓವರ್ (ಆರ್ ಎಂ ಫರ್ನಾಂಡೀಸ್ 43, ಎಜಿ ಕೊಡತ್ 25, ಎ ಮಿಥುನ್ 3/36, ಕೆಪಿ ಅಪ್ಪಣ್ಣ 4/35)
ಕರ್ನಾಟಕ 141/7 33.3 ಓವರ್( ಕೆಬಿ ಪವನ್ 32, ಕೆ ಗೌತಮ್ 22, ರಾಬಿನ್ ಉತ್ತಪ್ಪ 32, ಸಿಎಂ ಗೌತಮ್ 27, ಶ್ರೀಜಿತ್ 4/57, ಅನೀಸ್ 2/30)

ಮೊಯಿನ್ ಉದ್ ದೌಲಾ ಗೋಲ್ಡ್ ಕಪ್ ಗೆ ಕರ್ನಾಟಕ ತಂಡ: ಸುನಿಲ್ ರಾಜು(ನಾಯಕ), ಕೆಎಲ್ ರಾಹುಲ್, ಸಮರ್ಥ್ ಆರ್, ಕರುಣ್ ನಾಯರ್, ಕುನಾಲ್ ಕಪೂರ್(ಉಪ ನಾಯಕ), ಅವಿನಾಶ್ ಕೆಸಿ(ವಿಕೆಟ್ ಕೀಪರ್), ಅದಿತ್ಯ ಸಾಗರ್, ಅಕ್ಷಯ್ ಎಸ್ ಎಲ್, ಅರ್ಜುನ್ ಶೆಟ್ಟಿ, ಕೆ ಅಬ್ಬಾಸ್, ಮೊಯಿನುದ್ದೀನ್ ಎಸ್ ಕೆ, ಪರಪ್ಪ ಎಂ ಪವನ್ ದೇಶಪಾಂಡೆ, ರೋನಿತ್ ಮೋರೆ, ಸಿದ್ಧಾರ್ಥ್ ಕೆವಿ,

ಬ್ಯಾಟಿಂಗ್ ಕೋಚ್: ಜೆ ಅರುಣ್ ಕುಮಾರ್
ಬೌಲಿಂಗ್ ಕೋಚ್ : ಮನ್ಸೂರ್ ಆಲಿ ಖಾನ್
ಮ್ಯಾನೇಜರ್ : ಸಂಜಯ್ ಎಂ ದೇಸಾಯಿ
ಫಿಜಿಯೋ: ಶ್ರವಣ್
ತರಬೇತಿದಾರ: ವಿವೇಕ್ ಆರ್
ವಿಡಿಯೋ ಅನಾಲಿಸ್ಟ್ : ಸಂತೋಷ್

(ದಟ್ಸ್ ಕ್ರಿಕೆಟ್)

Story first published:  Tuesday, September 4, 2012, 12:30 [IST]
English summary
It was a thrilling low-scoring affair and Karnataka held their nerve to win the Buchi Babu Memorial Trophy by defeating Kerala on Sunday(Sep.3).Chasing 138 for victory, Karnataka, the defending champions, retained the title by three wickets.
ಅಭಿಪ್ರಾಯ ಬರೆಯಿರಿ