Englishहिन्दीമലയാളംதமிழ்తెలుగు

ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ

Posted by:
Updated: Monday, September 3, 2012, 19:00 [IST]
 

ಬೆಂಗಳೂರು, ಸೆ.3: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶಿಷ್ಟ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ಕ್ಲೀನ್ ಬೋಲ್ಡ್ ಆಗುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ಬೌಲ್ಡ್ ಆದ ಮೂರನೇ ಬ್ಯಾಟ್ಸ್ ಮನ್ ಎಂಬ ದಾಖಲೆ ಸಚಿನ್ ಪಾತ್ರರಾಗಿದ್ದು, ಶೀಘ್ರವೇ ನಂ.1 ಸ್ಥಾನಕ್ಕೇರುವ ಲಕ್ಷಣಗಳಿದೆ.

ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಬ್ರೆಸ್ ವೇಲ್ ಎಸೆತದಲ್ಲಿ ಬೋಲ್ಡ್ ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಸೌಥಿಗೆ ಬಲಿಯಾಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಬೌಲ್ಡ್ ಆದ ಮೂರನೇ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ಕ್ಲೀನ್ ಬೋಲ್ಡ್ ದಾಖಲೆ

ಸಚಿನ್ ಈ ವರೆಗೂ 51 ಬಾರಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಸಚಿನ್ ವಿಕೆಟ್ ಪಡೆದ ಬ್ರೆಸ್ ವೇಲ್ ಕೂಡಾ ದಾಖಲೆಯ ಪುಟ ಸೇರಿದ್ದು, ಸಚಿನ್ ಅವರನ್ನು ಬೌಲ್ಡ್ ಮಾಡಿದ ವಿಶ್ವದ 150ನೇ ಬೌಲರ್ ಎಂಬ ವಿಶೇಷ ಗೌರವ ಪಡೆದಿದ್ದಾರೆ. [ಸಚಿನ್ ಕ್ರಿಕೆಟ್ ಅಂಕಿ ಅಂಶ ನೋಡಿ]

ಅತಿ ಹೆಚ್ಚು ಬಾರಿ ಕ್ಲೀನ್ ಬೋಲ್ಡ್ ಆಗಿರುವ ದಾಖಲೆಯನ್ನು ವಿಶ್ವದ ಅಗ್ರಗಣ್ಯ ಬ್ಯಾಟ್ಸ್ ಮನ್ ಗಳಾದ ಭಾರತದ ರಾಹುಲ್ ದ್ರಾವಿಡ್ (55) ಮತ್ತು ಆಸ್ಟ್ರೇಲಿಯಾದ ಅಲನ್ ಬಾರ್ಡರ್ (53) ಹೊಂದಿದ್ದಾರೆ. ಸಚಿನ್ ಆಡುತ್ತಿರುವ ರೀತಿ ನೋಡಿದರೆ ಶೀಘ್ರವೇ ದ್ರಾವಿಡ್ ದಾಖಲೆ ಮುರಿಯುವ ಸಾಧ್ಯತೆಯಿದೆ.

ಬೌಂಡರಿ ದಾಖಲೆ: ಮೊದಲ ಇನ್ನಿಂಗ್ಸ್ ನಲ್ಲಿ ಮಧ್ಯಮ ವೇಗಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಸತತ ಎರಡನೇ ಬೌಂಡರಿ ಬಾರಿಸಿದ ಸಚಿನ್ ಟೆಸ್ಟ್ ನಲ್ಲಿ 2000 ಬೌಂಡರಿ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರು. ಆದರೆ ಮರು ಓವರ್ ನಲ್ಲೇ ಡಗ್ ಬ್ರೇಸ್ವೆಲ್ ಎಸೆತದಲ್ಲಿ ಬೌಲ್ಡ್ ಆದ ಸಚಿನ್ ಬೌಲ್ಡ್ ಆಗುವುದರಲ್ಲಿ ಅರ್ಧಶತಕ ಪೂರೈಸಿದ್ದು ದುರಂತ.

ನಾಲ್ಕನೇ ತಲೆಮಾರು ಕಂಡ ಸಚಿನ್: ಸಚಿನ್ ತೆಂಡೂಲ್ಕರ್ ಈಗ ನಾಲ್ಕು ತಲೆಮಾರುಗಳನ್ನು ಕಂಡ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗ ಕಪಿಲ್ ದೇವ್, ಸುನೀಲ್ ಗವಾಸ್ಕರ್, ಹಾಲಿ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಕ್ರಿಸ್ ಶ್ರೀಕಾಂತ್ ಅವರೊಂದಿಗೆ ಆಡಿದ್ದರು.

ನಂತರದ ತಲೆಮಾರಿನಲ್ಲಿ ಮೊಹಮದ್ ಅಜರುದ್ದೀನ್, ಅಜಯ್ ಜಡೇಜಾ, ಸಂಜಯ್ ಮಂಜ್ರೇಕರ್, ನವ ಜ್ಯೋತ್ ಸಿಂಗ್ ಸಿದು ಅವರೊಂದಿಗೆ ಆಡಿದ್ದರು.

ನಂತರ ಇತ್ತೀಚೆಗೆ ನಿವೃತ್ತಿ ಹೇಳಿದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಆಡಿದರು. ಇದೀಗ ಧೋನಿ, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಅವರೊಂದಿಗೆ ಸಚಿನ್ ತೆಂಡೂಲ್ಕರ್ ಆಡುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್ ಕಣಕ್ಕಿಳಿದರೆ ಸಾಕು ದಾಖಲೆಗಳು ಒಂದೊಂದಾಗಿ ಹುಡುಕಿಕೊಂಡು ಬರುತ್ತದೆ ಎಂಬ ಮಾತಿದೆ. ಆದರೆ, 39 ವರ್ಷದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ಇತ್ತೀಚಿನ ಕಳಪೆ ಫಾರ್ಮ್ ಬಗ್ಗೆ ಸುನಿಲ್ ಗವಾಸ್ಕರ್ ಕೂಡಾ ಚಿಂತೆ ವ್ಯಕ್ತಪಡಿಸಿದ್ದು, 'big gap between the bat and pad..''ಸಚಿನ್ ಫುಟ್ ವರ್ಕ್ ಸರಿಯಿಲ್ಲ' ಎಂದು ಸಚಿನ್ ಔಟಾದ ರೀತಿಯನ್ನು ವಿಶ್ಲೇಷಿಸಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ ಸತತವಾಗಿ ಬೋಲ್ಡ್ ಆಗಿ ಔಟ್ ಆಗುತ್ತಿದ್ದ ರಾಹುಲ್ ದ್ರಾವಿಡ್ ನಂತರ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Story first published:  Monday, September 3, 2012, 15:25 [IST]
English summary
Sachin Tendulkar gets bowled again. For the second time in the 2nd match against New Zealand. Sachin hold unique record of scoring 2000 runs in boundaries and getting out himself clean bowled 50 times in Test Cricket. Sachin the player played along 4 generation of Indian cricket.
ಅಭಿಪ್ರಾಯ ಬರೆಯಿರಿ