Englishहिन्दीമലയാളംதமிழ்తెలుగు

2ನೇ ಟೆಸ್ಟ್ : ಭಾರತಕ್ಕೆ 5 ವಿಕೆಟ್ ಭರ್ಜರಿ ಜಯ

Posted by:
Updated: Monday, September 3, 2012, 17:46 [IST]
 

2ನೇ ಟೆಸ್ಟ್ : ಭಾರತಕ್ಕೆ 5 ವಿಕೆಟ್ ಭರ್ಜರಿ ಜಯ
 

ಬೆಂಗಳೂರು, ಸೆ.3: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ 261 ರನ್ ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನವೇ ಗುರಿ ಮುಟ್ಟಿ ಭರ್ಜರಿ ಜಯ ದಾಖಲಿಸಿದೆ. ಹೈದರಾಬಾದ್ ಟೆಸ್ಟ್ ಸುಲಭವಾಗಿ ಗೆದ್ದಿದ್ದ ಭಾರತ, ಬೆಂಗಳೂರು ಟೆಸ್ಟ್ ಪಂದ್ಯವನ್ನು 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ 2-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದೆ.

ಭಾರತದ ಇನ್ನಿಂಗ್ಸ್ :261 ರನ್ ಗಳ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಕಂಡಿತು ಗೌತಮ್ ಹಾಗೂ ಸೆಹ್ವಾಗ್ ತಲಾ 7 ಬೌಂಡರಿ ಬಾರಿಸಿ ಕಿವೀಸ್ ಬೌಲರ್ ಗಳನ್ನು ಕಾಡಿಸಿದರು. ಆದರೆ, ತಂಡದ ಮೊತ್ತ 77 ರನ್ ಆಗಿದ್ದಾಗ ಅನಗತ್ಯ ಹೊಡೆತ ಯತ್ನಿಸಿದ ಸೆಹ್ವಾಗ್ ಪಟೇಲ್ ಗೆ ಕ್ಲೀನ್ ಬೋಲ್ಡ್ ಆದರು. ಸೆಹ್ವಾಗ್ 38 ರನ್ ಗಳಿಸಿದ್ದರು. 1 ಭರ್ಜರಿ ಸಿಕ್ಸರ್ ಕೂಡಾ ಬಾರಿಸಿದ್ದರು.

ನಂತರ, 34 ರನ್ ಗಳಿಸಿದ್ದ ಗಂಭೀರ್ ಅವರು ಬೌಲ್ಟ್ ಗೆ ಔಟಾದರು. ಈ ಮೂಲಕ 83 ರನ್ನಿಗೆ ಭಾರತ 2 ವಿಕೆಟ್ ಕಳೆದುಕೊಂಡು ಆತಂಕ ಅನುಭವಿಸಿತ್ತು. ಅದರೆ, ನಂತರ ಬಂದ ಚೇತೇಶ್ವರ್ ಪೂಜಾರಾ ತಾಳ್ಮೆಯ ಆಟವಾಡಿ ಲಂಚ್ ತನಕ ವಿಕೆಟ್ ಕಾಯ್ದುಕೊಂಡರು.

ಆರಂಭಿಕ ಆಟಗಾರರನ್ನು ಕಳೆದುಕೊಂಡ ನಂತರ ಚೇತೇಶ್ವರ್ ಪೂಜಾರಾ ಹಾಗೂ ಸಚಿನ್ ತೆಂಡೂಲ್ಕರ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ಸೋಮವಾರ ಮಧ್ಯಾಹ್ನ ಮಳೆಯ ಕಾರಣ ಆಟ ನಿಂತಾಗ[ಸಮಯ 13.20] ಭಾರತಕ್ಕೆ ಎರಡನೇ ಟೆಸ್ಟ್ ಗೆಲ್ಲಲು 114 ರನ್ ಬೇಕಿತ್ತು. ಚೇತೇಶ್ವರ್ ಪೂಜಾರಾ 41ರನ್(6 ಬೌಂಡರಿ), ಸಚಿನ್ 23 ರನ್ (4 ಬೌಂಡರಿ) ಗಳಿಸಿ ಕ್ರೀಸ್ ನಲ್ಲಿದ್ದರು.ಭಾರತದ ಮೊತ್ತ 147/2, ಭಾರತ ಸುಲಭ ಗೆಲುವಿನ ಕನಸು ಕಾಣುತ್ತಿತ್ತು.

ಆದರೆ, ಕೆಲ ಹೊತ್ತಿನ ನಂತರ ಪಂದ್ಯ ಮತ್ತೆ ಆರಂಭಗೊಂಡಾಗ. ಸಚಿನ್ ತಮ್ಮ ಮೊತ್ತ 4 ರನ್ ಸೇರಿಸಿ ಮತ್ತೊಮ್ಮೆ ಕೆಟ್ಟದಾಗಿ ಬೋಲ್ಡ್ ಆದರು. ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಪೂಜಾರಾ 48 ರನ್ ಗಳಿಸಿ ಪಟೇಲ್ ಬೌಲಿಂಗ್ ನಲ್ಲಿ ಔಟಾದರು.

ನಂತರ ಬಂದ ಸುರೇಶ್ ರೈನಾ ಕೂಡಾ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದೆ ಶೂನ್ಯ ಸುತ್ತಿ ಪೆವಿಲಿಯನ್ ಗೆ ಮರಳಿದರು. ತಂಡದ ಮೊತ್ತ ಹೆಚ್ಚಿಸುವ ಜವಾಬ್ದಾರಿ ಹೊತ್ತ ನಾಯಕ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ತೋರಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮೂರನೇ ದಿನದ ಅಂತ್ಯಕ್ಕೆ 232/9 ಮಾಡಿದ್ದ ಕಿವೀಸ್ ತಂಡ ಸೋಮವಾರ (ಸೆ.3) 248 ರನ್ ಗಳಿಗೆ ಆಲೌಟ್ ಆಯಿತು.

ಸಂಕ್ಷಿಪ್ತ ಸ್ಕೋರ್:
ನಾಲ್ಕನೇ ದಿನದ ಆಟ : ಸುಮಾರು 36 ಓವರ್ ಬಾಕಿ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 365/10
ಎರಡನೇ ಇನ್ನಿಂಗ್ಸ್: 248 [ಸ್ಕೋರ್ ಕಾರ್ಡ್ ನೋಡಿ]
ಭಾರತ: 353/10
ಎರಡನೇ ಇನ್ನಿಂಗ್ಸ್ : 262 / 5 63.2 ಓವರ್

Story first published:  Monday, September 3, 2012, 12:37 [IST]
English summary
India survived some tough moments on Monday(Sep.3) to complete a 2-0 clean sweep of New Zealand by winning the second Test by five wickets here at the M Chinnaswamy Stadium. Before victory was achieved, Indian batsmen were tested by Kiwi fast bowlers.
ಅಭಿಪ್ರಾಯ ಬರೆಯಿರಿ