Englishहिन्दीമലയാളംதமிழ்తెలుగు

3ನೇ ದಿನದ ಅಂತ್ಯ ಕಿವೀಸ್ 244 ರನ್ ಮುನ್ನಡೆ

Posted by:
Updated: Monday, September 3, 2012, 12:32 [IST]
 

3ನೇ ದಿನದ ಅಂತ್ಯ ಕಿವೀಸ್ 244 ರನ್ ಮುನ್ನಡೆ
 

ಬೆಂಗಳೂರು, ಸೆ.2: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಟೀಂ ಇಂಡಿಯಾ ಶುಭಾರಂಭ ನಂತರ ಮುಗ್ಗರಿಸಿದೆ. ವಿರಾಟ್ ಕೊಹ್ಲಿ ಅಮೋಘ ಶತಕ, ಧೋನಿ ಅರ್ಧ ಶತಕ ಬಾರಿಸಿ ಔಟಾಗಿದ್ದು ಟೀಂ ಇಂಡಿಯಾಗೆ ಹಿನ್ನಡೆ ತಂದಿದೆ.

ಹೊಸ ಚೆಂಡಿನೊಂದಿಗೆ ಬಿರುಗಾಳಿ ವೇಗಿ ಸೌಥಿ ಕರಾರುವಾಕ್ ಬೌಲಿಂಗ್ ಗೆ ಭಾರತ ಶರಣಾಗಿದೆ. ಆದರೆ, ನಂತರ ಆರ್ ಅಶ್ವಿನ್ ತಮ್ಮ ಸ್ಪಿನ್ ಮೋಡಿಗೆ ನ್ಯೂಜಿಲೆಂಡ್ ಆಟಗಾರರನ್ನು ಸಿಲುಕಿಸಿ ಟೆಸ್ಟ್ ಪಂದ್ಯವನ್ನು ಕುತೂಹಲದ ಘಟಕ್ಕೆ ತಲುಪಿಸಿದ್ದಾರೆ.

ಕಿವೀಸ್ ಎರಡನೇ ಇನ್ನಿಂಗ್ಸ್ : ಉತ್ತಮ ಆರಂಭ ಪಡೆದ ಕಿವೀಸ್ ತಂಡ ನಂತರ ಸತತವಾಗಿ ಎರಡು ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ 23 ರನ್ , ಮಾರ್ಟಿನ್ ಗುಪ್ಟಿಲ್ 7 ರನ್ ಗಳಿಸಿ ಔಟಾಗಿದ್ದಾರೆ. ಎರಡು ವಿಕೆಟ್ ಗಳು ಉಮೇಶ್ ಯಾದವ್ ಪಡೆದಿದ್ದಾರೆ. ಕೇನ್ ವಿಲಿಯಮ್ಸ್ ವಿಕೆಟ್ ಅಶ್ವಿನ್ ಪಾಲಾಯಿತು.

ನಂತರ ನಾಯಕ ರಾಸ್ ಟೇಲರ್ 35, ಫಿನ್ 31, ಫ್ರಾಂಕ್ಲಿನ್ 41, ವಿಕೆಟ್ ಕೀಪರ್ ಕ್ರುಜರ್ ವಾನ್ ವಿಕ್ 31, ಡೌಗ್ ಬ್ರೇಸ್ ವೆಲ್ 22 ರನ್ ಗಳಿಸಿ ನ್ಯೂಜಿಲೆಂಡ್ ಮೊತ್ತ ತಮ್ಮ ಕೊಡುಗೆ ನೀಡಿದರು.

ಆದರೆ, ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದ ಕಿವೀಸ್ ಪಡೆ ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗಿದೆ. ಮೂರನೇ ದಿನದ ಅಂತ್ಯಕ್ಕೆ ಸ್ಪಿನ್ನರ್ ಜೀತನ್ ಪಟೇಲ್ 10 ರನ್ ಹಾಗೂ ಟ್ರೆಂಟ್ ಬೌಲ್ಟ್ ೦ರನ್ ಗಳಿಸಿ ಕ್ರೀಸ್ ನಲ್ಲಿದ್ದರು.

ಭಾರತದ ಪರ ಆರ್ ಅಶ್ವಿನ್ ಮತ್ತೊಮ್ಮೆ ಮಿಂಚಿ 69 ರನ್ನಿತ್ತು 5 ವಿಕೆಟ್ ಗಳಿಸಿದರು. ಉಮೇಶ್ ಯಾದವ್, ಪ್ರಜ್ಞಾನ್ ಓಜಾ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರ್:

ಮೂರನೇ ದಿನದ ಆಟ ಅಂತ್ಯ: ನ್ಯೂಜಿಲೆಂಡ್ 244 ರನ್ ಮುನ್ನಡೆ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 365/10
ಎರಡನೇ ಇನ್ನಿಂಗ್ಸ್: 232/9, 69 ಓವರ್ [ಸ್ಕೋರ್ ಕಾರ್ಡ್ ನೋಡಿ]
ಭಾರತ: 353/10

ಭಾನುವಾರ ಮುಂಜಾನೆ ಧೋನಿ ಅವರು 26ನೇ ಟೆಸ್ಟ್ ಅರ್ಧ ಶತಕ ಗಳಿಸಿ, ಕೊಹ್ಲಿ ಜೊತೆ ಉತ್ತಮ ಜೊತೆಯಾಟ ಕಾಯ್ದುಕೊಂಡರು. ನಂತರ ವಿರಾಟ್ ಕೊಹ್ಲಿ 101 ರನ್ (187 ಎಸೆತ, 14 ಬೌಂಡರಿ, 1 ಸಿಕ್ಸರ್) ಗಳಿಸಿದರು. ಕೊಹ್ಲಿ ಅವರ 2 ನೇ ಟೆಸ್ಟ್ ಶತಕ ಗಳಿಸಿದ್ದು ಉತ್ತಮ ಆಟದ ನಿರೀಕ್ಷೆಯಿತ್ತು.

ಆದರೆ, ಭಾರತದ ಸ್ಕೋರ್ 300ರ ಗಡಿ ದಾಟಿದ ಖುಷಿಯಲ್ಲೇ ಶತಕ ಬಾರಿಸಿದ್ದ ಕೊಹ್ಲಿ ವಿಕೆಟ್ ಕಳೆದುಕೊಂಡಿತು. 103ರನ್ (193 ಎಸೆತ, 14 ಬೌಂಡರಿ, 1 ಸಿಕ್ಸರ್ ) ಗಳಿಸಿದ್ದ ಕೊಹ್ಲಿ, ಟೀಮ್ ಸೌಥಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.

ನಂತರ ನಾಯಕ ಎಂಎಸ್ ಧೋನಿ 62 ರನ್(94 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿ ಸೌಥಿಗೆ ಎಲ್ ಬಿ ಆಗಿ ಔಟಾದರು. ನಂತರ ಆರ್ ಅಶ್ವಿನ್ ಕೊಂಚ ಪ್ರತಿರೋಧ ತೋರಿ 5 ಬೌಂಡರಿಯುಳ್ಳ 32 ರನ್ ಬಾರಿಸಿ ಔಟಾಗದೆ ಉಳಿದರು.

ಉಳಿದಂತೆ ಜಹೀರ್ ಖಾನ್ 7 ರನ್, ಓಜಾ 0, ಯಾದವ್ 4 ರನ್ ಗಳಿಸಿ ಔಟಾದರು. ಭಾರತ 353 ರನ್ ಗಳಿಸಿ ಆಲೌಟ್ ಆಯಿತು. ನ್ಯೂಜಿಲೆಂಡ್ ಗೆ 12 ರನ್ ಅಲ್ಪಮೊತ್ತದ ಮುನ್ನಡೆ ಸಿಕ್ಕಿತು. ಕಿವೀಸ್ ಪರ ಟೀಮ್ ಸೌಥಿ 24 ಓವರ್ ಗಳಲ್ಲಿ 6 ಮೇಡನ್ ಎಸೆದು 64/7 ವಿಕೆಟ್ ಪಡೆದು ಅಮೋಘ ಪ್ರದರ್ಶನ ನೀಡಿದರು. ಬೌಲ್ಟ್ 1, ಬ್ರೆಸ್ ವೇಲ್ 2 ವಿಕೆಟ್ ಗಳಿಸಿ ಸೌಥಿಗೆ ಸಾಥ್ ನೀಡಿದರು.

Story first published:  Sunday, September 2, 2012, 9:41 [IST]
English summary
India started third days paly trailing by 82 runs in the first innings against New Zealand, on Sunday. Bright sunshine greeted players and fans. MS Dhoni half century and Virat Kohli Century helped India
ಅಭಿಪ್ರಾಯ ಬರೆಯಿರಿ