Englishहिन्दीമലയാളംதமிழ்తెలుగు

ಬೆಂಗಳೂರು ಟೆಸ್ಟ್: ರಾಸ್ ಟೇಲರ್ ಅಮೋಘ ಶತಕ

Posted by:
Updated: Friday, August 31, 2012, 17:34 [IST]
 

ಬೆಂಗಳೂರು, ಆ.31: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ(ಆ.31) ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ನಾಯಕ ರಾಸ್ ಟೇಲರ್ ಅಮೋಘ ಶತಕ ಸಿಡಿಸಿದ್ದಾರೆ. ಆದರೂ, ಮಳೆರಾಯ ಕೃಪೆಯೊಂದಿಗೆ ಆರಂಭವಾದ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ ಮತ್ತೊಮ್ಮೆ ತಮ್ಮ ಕೈ ಚಳಕ ತೋರಿದ್ದಾರೆ.

127 ಎಸೆತಗಳಲ್ಲಿ 113 ರನ್ ಗಳಿಸಿದ ರಾಸ್ ಟೇಲರ್ 16 ಬೌಂಡರಿ, 2 ಸಿಕ್ಸರ್ ಬಾರಿಸಿದರು. ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಶೂನ್ಯಕ್ಕೆ ಔಟಾದರೆ, ಮಾರ್ಟಿನ್ ಗುಪ್ಟಿಲ್ 53 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.

ಬೆಂಗಳೂರು ಟೆಸ್ಟ್: ರಾಸ್ ಟೇಲರ್ ಅಮೋಘ ಶತಕ

ಮಂದ ಬೆಳಕಿನ ಕಾರಣ ಅವಧಿಗೂ ಮುನ್ನ ಮೊದಲ ದಿನದ ಆಟ ಅಂತ್ಯಗೊಳಿಸಲಾಯಿತು. ನ್ಯೂಜಿಲೆಂಡ್ ಮೊತ್ತ 328/6, ವಾನ್ ವಿಕ್ 63, ಡೌಗ್ ಬ್ರಾಸ್ ವೆಲ್ 30 ರನ್ ಮಾಡಿ ಕ್ರೀಸ್ ನಲ್ಲಿದ್ದರು.

ಚಹಾ ವಿರಾಮದ ವೇಳೆಗೆ 112 ರನ್ ಗಳಿಸಿ ಔಟಾಗದೆ ಉಳಿದಿದ್ದ ರಾಸ್ ಟೇಲರ್ ಅವರ ವಿಕೆಟ್ ಉರುಳಿದೆ.ವಿಕೆಟ್ ಕೀಪರ್ ಕ್ರುಜರ್ ವಾನ್ ವಿಕ್ ಅವರು ಬ್ರೆಸ್ ವೆಲ್ ಜೊತೆ ಕ್ರೀಸ್ ನಲ್ಲಿದ್ದಾರೆ.

ಮೊದಲ ದಿನದ ಚಹಾ ವಿರಾಮದ ವೇಳೆ ನ್ಯೂಜಿಲೆಂಡ್ 240 ರನ್ ಗಳಿಸಿ 5 ವಿಕೆಟ್ ಗಳಿಸಿತ್ತು. ಭೋಜನ ವಿರಾಮದ ವೇಳೆಗೆ 108 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತ್ತು. [ಸ್ಕೋರ್ ಕಾರ್ಡ್ ನೋಡಿ]

ಭಾರತದ ಪರ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ 4, ಜಹೀರ್ ಖಾನ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಗಳಿಸಿದ್ದಾರೆ. ಶತಕವೀರ ಟೇಲರ್ ವಿಕೆಟ್ ಜೊತೆಗೆ ಕಿವೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದಿರುವ ಓಜಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.

ವಾಹನ ನಿಲುಗಡೆ: ಆ.31 ರಿಂದ ಸೆ.4ರ ವರೆಗೆ ಕೆಎಸ್ ಸಿಎ ಕ್ರೀಡಾಂಗಣದ ಸುತ್ತಮುತ್ತ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.ಬೆಳಗ್ಗೆ 9 ರಿಂದ 6 ಗಂಟೆ ತನಕ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಅನಿಲ್ ಕುಂಬ್ಳೆ ವೃತ್ತ, ಕ್ವೀನ್ಸ್ ರಸ್ತೆ, ಚಿನ್ನಸ್ವಾಮಿ ಕ್ರೀಡಾಂಗಣ ಗೇಟ್ 1 ರ ಬಳಿ, ಕಬ್ಬನ್ ಪಾರ್ಕ್, ಪ್ರೆಸ್ ಕ್ಲಬ್ ಮುಂಭಾಗ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಪಂದ್ಯ ನೋಡಲು ಬರುವವರು ತಮ್ಮ ವಾಹನಗಳನ್ನು ಯುಬಿ ಸಿಟಿ, ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿ, ಕಬ್ಬನ್ ಪಾರ್ಕ್ ಒಳಭಾಗ, ಬಿವಿಆರ್ ಮೈದಾನಗಳಲ್ಲಿ ನಿಲ್ಲಿಸಬಹುದು.

ಟಿಕೆಟ್ ಮಾರಾಟ: ಗುರುವಾರ ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ರೀಡಾಂಗಣದತ್ತ ಧಾವಿಸಿದ್ದರು. ಗೇಟ್ 5 ಹಾಗೂ 6 ರಲ್ಲಿ ಜನ ಜಂಗುಳಿ ಇತ್ತು. ಶುಕ್ರವಾರ ಈ ಸಂಖ್ಯೆ ಕೊಂಚ ಇಳಿಮುಖವಾಗಿದೆ.

ವೀಕೆಂಡ್ ನಲ್ಲಿ ಮಕ್ಕಳು ಮತ್ತು ಮಹಿಳಾ ಪ್ರೇಕ್ಷಕರನ್ನು ಸೆಳೆಯುವ ಸಾಧ್ಯತೆಯಿದ್ದು, ಭಾರತದ ಇನ್ನಿಂಗ್ಸ್ ಆರಂಭವಾಗುತ್ತಿದ್ದಂತೆ ಟಿಕೆಟ್ ಮಾರಾಟ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಕೆಎಸ್ ಸಿಎ ಅಧಿಕಾರಿಗಳು ಹೇಳಿದ್ದಾರೆ.

Story first published:  Friday, August 31, 2012, 15:20 [IST]
English summary
NZ tour of India : Day 1 of 2nd Test match Ross Taylor New Zealand skipper Ross Taylor scored a brilliant century to power Kiwis to 240 for 5 at tea at the M Chinnaswamy Stadium, Bangalore. KSCA parking restriction irks public and ticket sales report is dull on Friday(Aug.31)
ಅಭಿಪ್ರಾಯ ಬರೆಯಿರಿ