Englishहिन्दीമലയാളംதமிழ்తెలుగు

ಬೆಂಗಳೂರು ಟೆಸ್ಟ್: ಟಿಕೆಟ್ ಬೇಕಾ ಟಿಕೆಟ್

Posted by:
Updated: Wednesday, August 29, 2012, 15:26 [IST]
 

ಬೆಂಗಳೂರು ಟೆಸ್ಟ್: ಟಿಕೆಟ್ ಬೇಕಾ ಟಿಕೆಟ್
 

ಬೆಂಗಳೂರು, ಆ.29: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಹಾಗೂ ಭಾರತ ತಂಡದ ನಡುವೆ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆ.31ರಿಂದ ಆರಂಭವಾಗಲಿದೆ. ಮಂಗಳವಾರ (ಆ.28) ದಿಂದ ವಿವಿಧ ಕೌಂಟರ್ ಗಳಲ್ಲಿ ಟಿಕೆಟ್ ಮಾರಾಟ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೆಎಸ್ ಸಿಎ ಹೇಳಿದೆ.

ಎರಡು ತಂಡಗಳು ಮಂಗಳವಾರವೇ ಬೆಂಗಳೂರಿಗೆ ಆಗಮಿಸಿದ್ದು ಐಟಿಸಿ ಗಾರ್ಡೇನಿಯಾ ರಾಯಲ್ ಹೋಟೆಲ್ ನಲ್ಲಿ ತಂಗಿದ್ದಾರೆ. ಆ.31 ರಿಂದ ಸೆ.4ರ ತನಕ ಟೆಸ್ಟ್ ಪಂದ್ಯನಡೆಯಲಿದ್ದು, ಮೊದಲ ಎರಡು ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಮಳೆರಾಯ ಮಧ್ಯಾಹ್ನದ ನಂತರ ಕಾಟ ಕೊಡುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಹೇಳಿದೆ.

ಕನಿಷ್ಠ 50 ರು. ದರದಿಂದ 2,000 ರು ತನಕ ಟಿಕೆಟ್ ಬೆಲೆಯನ್ನು ನಿಗದಿಪಡಿಸಲಾಗಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರನ್ನು ನಿರೀಕ್ಷಿಸಲಾಗಿದೆ. ಕೌಂಟರ್ 5,6 ಹಾಗೂ 7 ರಲ್ಲಿ ಟಿಕೆಟ್ ನೀಡಲಾಗುತ್ತಿದೆ. ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದವರು ಕೌಂಟರ್ 8 ರಲ್ಲಿ ತಮ್ಮ ಟಿಕೆಟ್ ಕನಫರ್ಮ್ ಮಾಡಿಕೊಳ್ಳಬಹುದು ಎಂದು ಕೆಎಸ್ ಸಿಎ ಅಧಿಕಾರಿಗಳು ಹೇಳಿದ್ದಾರೆ.

ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು www.kyazoonga.com ವೆಬ್ ತಾಣ ಬಳಸಲು ಸೂಚಿಸಲಾಗಿದೆ. ಹೈದರಾಬಾದಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡ ಇನ್ನಿಂಗ್ಸ್ ಹಾಗೂ 115 ರನ್ ಗಳಿಂದ ಗೆದ್ದಿರುವುದರಿಂದ ಈ ಪಂದ್ಯ ಇನ್ನಷ್ಟು ರೋಚಕವಾಗಿರುವ ಸಾಧ್ಯತೆಯಿದೆ.

ಟಿಕೆಟ್ ದರ ವಿವರ ಪಟ್ಟಿ: [ ಗೇಟ್ ಸಂಖ್ಯೆ, ಪ್ರವೇಶ ದ್ವಾರ, ಸ್ಟ್ಯಾಂಡ್ ಹೆಸರು, ಟಿಕೆಟ್ ದರ(ರು.ನಲ್ಲಿ)]
* 2- ಕ್ವೀನ್ಸ್ ರಸ್ತೆ-ಪೆವಿಲಿಯನ್ upper-2000
2, ಕ್ವೀನ್ಸ್ ರಸ್ತೆ, ಪೆವಿಲಿಯನ್ ಟೆರೇಸ್ 1,000
2, ಕ್ವೀನ್ಸ್ ರಸ್ತೆ, ಪೆವಿಲಿಯನ್ ಕಾರ್ಪೊರೇಟ್ 1,500
5, ಕ್ವೀನ್ಸ್ ರಸ್ತೆ, ಎ ಎಕ್ಸಿಕ್ಯೂಟಿವ್ 1,000
6, ಕ್ವೀನ್ಸ್ ರಸ್ತೆ, ಎ ಲೋಯರ್ 400
7& 8, ಕ್ವೀನ್ಸ್ ರಸ್ತೆ, ಎ upper 250
9, ಕ್ವೀನ್ಸ್ ರಸ್ತೆ,, ‘ಬಿ' ಲೋಯರ್ 250
9, ಕ್ವೀನ್ಸ್ ರಸ್ತೆ,, ‘ಬಿ' UPPER 250
9, ಕ್ವೀನ್ಸ್ ರಸ್ತೆ, ಎನ್ ಸ್ಟ್ಯಾಂಡ್ 400
17, ಲಿಂಕ್ ರಸ್ತೆ, ‘ಡಿ ' ಲೋಯರ್ 50
17, ಲಿಂಕ್ ರಸ್ತೆ, ‘ಡಿ ' UPPER 50

Story first published:  Wednesday, August 29, 2012, 15:21 [IST]
English summary
The sale of tickets for the second Test match between India and New Zealand is on full swing from (Aug 28) Tuesday at various counters of M Chinnaswamy Stadium. Both the team arrived and residing at ITC Royal Gardenia Hotel.
ಅಭಿಪ್ರಾಯ ಬರೆಯಿರಿ