Englishहिन्दीമലയാളംதமிழ்తెలుగు

ಪದ್ಮ ಪ್ರಶಸ್ತಿಗೆ ರಾಹುಲ್, ಗಂಭೀರ್ ಹೆಸರು ಶಿಫಾರಸು?

Posted by:
Published: Monday, August 27, 2012, 21:38 [IST]
 

ಪದ್ಮ ಪ್ರಶಸ್ತಿಗೆ ರಾಹುಲ್, ಗಂಭೀರ್ ಹೆಸರು ಶಿಫಾರಸು?
 

ನವದೆಹಲಿ, ಆ.27: 'ಕ್ರಿಕೆಟ್ ಜಗತ್ತಿನ ಮಹಾನ್ ಗೋಡೆ' ರಾಹುಲ್ ದ್ರಾವಿಡ್ ಹಾಗೂ ಭರವಸೆ ಆಟಗಾರ ಗೌತಮ್ ಗಂಭೀರ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲು ಬಿಸಿಸಿಐ ಶಿಫಾರಸು ಮಾಡಿದೆ ಎಂಬ ಸುದ್ದಿ ಬಂದಿದೆ.

ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟಿನಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ದೇಶದ ಮೂರನೇ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶಿಫಾರಸು ಮಾಡಿದೆ.

ದ್ರಾವಿಡ್ ಕಳೆದ ಮಾರ್ಚ್ ನಲ್ಲಿ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದರು. ಆರಂಭಿಕ ಆಟಗಾರ ಗೌತಮ್ ಗಂಭೀರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಬಿಬಿಸಿಐ ಕೇಂದ್ರಕ್ಕೆ ಶಿಫಾರಸು ಕಳಿಸಿದೆ.

ಕರ್ನಾಟಕದ ಆಟಗಾರ ರಾಹುಲ್ ದ್ರಾವಿಡ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರನ್ ಮಾಡಿದ ಸಾಧನೆ ಮಾಡಿದ್ದಾರೆ. ಭಾರತ ತಂಡದ ನಾಯಕತ್ವನ್ನು ವಹಿಸಿದ್ದ ದ್ರಾವಿಡ್ ಹಲವಾರು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ದ್ರಾವಿಡ್ ಸುಮಾರು 16 ವರ್ಷಗಳ ಕಾಲ ಭಾರತದ ಪರ ಆಡಿದ್ದಾರೆ. ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ ಎಂದು ಬಿಸಿಸಿಐ ಶಿಫಾರಸು ಪತ್ರದಲ್ಲಿ ಹೇಳಿದೆ.

ದೆಹಲಿ ಆಟಗಾರ ಗೌತಮ್ ಗಂಭೀರ್ ಕಳೆದ 9 ವರ್ಷಗಳಿಂದ ತಂಡದಲ್ಲಿ ಆಡುತ್ತಿದ್ದು, ವಿಶ್ವಕಪ್ ಸೇರಿದಂತೆ ಹಲವಾರು ಟೂರ್ನಮೆಂಟ್ ಗಳಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಆದರೆ ಸಚಿನ್ ತೆಂಡೂಲ್ಕರ್ ಮಾತ್ರ ಪದ್ಮವಿಭೂಷಣ ಪಡೆದ ಏಕೈಕ ಆಟಗಾರ. ಸುನಿಲ್ ಗಾವಸ್ಕರ್, ಕಪಿಲ್ ದೇವ್, ವಿನೂ ಮಂಕಡ್ ಮತ್ತು ಲಾಲಾ ಅಮರನಾಥ್ ಸಹಿತ ಒಟ್ಟು 9 ಮಂದಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಯಾವುದೇ ಕ್ರಿಕೆಟರ್ ಹೆಸರನ್ನು ಸೂಚಿಸದೆ ಅವಕಾಶ ವಂಚಿತವಾಗಿದ್ದ ಬಿಸಿಸಿಐ ಈಗ ಪದ್ಮ ಪ್ರಶಸ್ತಿಗಳಿಗೆ ಈ ಇಬ್ಬರು ಆಟಗಾರರ ಹೆಸರನ್ನು ಸೂಚಿಸುವ ತನ್ನ ತಪ್ಪನ್ನು ಮರೆಮಾಚುವ ಯತ್ನದಲ್ಲಿದೆ.

English summary
According to sources, 'The Wall of Indian Cricket', Rahul Dravid and opener Gautam Gambhir will be nominated by the BCCI for Padma Bhushan and Padma Sri awards respectively.
ಅಭಿಪ್ರಾಯ ಬರೆಯಿರಿ