Englishहिन्दीമലയാളംதமிழ்తెలుగు

1st ಟೆಸ್ಟ್: ಕಿವೀಸ್ ಮೇಲೆ ಭಾರತಕ್ಕೆ ಭರ್ಜರಿ ಜಯ

Posted by:
Updated: Sunday, August 26, 2012, 17:02 [IST]
 

ಹೈದರಾಬಾದ್, ಆ.26: ಆರ್ ಅಶ್ವಿನ್ ಕೇರಂ ಬಾಲ್ ಎಸೆತಕ್ಕೆ ತಕ್ಕ ಉತ್ತರ ನೀಡಲಾಗದ ನ್ಯೂಜಿಲೆಂಡ್ ತಂಡ ಭಾರತಕ್ಕೆ ತಲೆಬಾಗಿದೆ. ಮಳೆಯಿಂದ ತೊಂದರೆಗೆ ಸಿಲುಕಿದ್ದ ಮೊದಲ ಟೆಸ್ಟ್ ಪಂದ್ಯದಿಂದ ಕೊನೆಗೂ ಫಲಿತಾಂಶ ಹೊರಬಿದ್ದಿದೆ. ಕಿವೀಸ್ ವಿರುದ್ಧ ಭಾರತ ತಂಡ ಇನ್ನಿಂಗ್ಸ್ ಹಾಗೂ 115 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

85 ರನ್ ನೀಡಿ 12 ವಿಕೆಟ್ ಉದುರಿಸಿದ ಆರ್ ಅಶ್ವಿನ್ ಪಂದ್ಯ ಶ್ರೇಷ್ಠ ಎನಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಯಾವುದೇ ಬೌಲರ್ ಮಾಡದ ಸಾಧನೆ ಬರೆದ ಅಶ್ವಿನ್ ಈ ಪಂದ್ಯದಲ್ಲಿ ಪಡೆದ 12 ವಿಕೆಟ್ ಗಳು ಭಾರತಕ್ಕೆ ಜಯ ತಂದು ಕೊಡುವಲ್ಲಿ ಯಶಸ್ವಿಯಾಗಿದೆ.

7 ಪಂದ್ಯಗಳಲ್ಲಿ 43 ವಿಕೆಟ್ ಕಬಳಿಸಿರುವ ಆರ್ ಅಶ್ವಿನ್ ಮತ್ತೊಮ್ಮೆ ಧೋನಿ ಅವರು ಇಟ್ಟ ಭರವಸೆಗೆ ತಕ್ಕ ಆಟ ಪ್ರದರ್ಶಿಸಿದರು.

1st ಟೆಸ್ಟ್: ಕಿವೀಸ್ ಮೇಲೆ ಭಾರತಕ್ಕೆ ಭರ್ಜರಿ ಜಯ

ಫಾಲೋ ಆನ್ ಪಡೆದ ನ್ಯೂಜಿಲೆಂಡ್ ತಂಡ ನಾಲ್ಕನೇ ದಿನದ ಆಟವನ್ನು ಅಳುಕಿನಿಂದಲೆ ಆರಂಭಿಸಿತು. ಮೊದಲ ಮೂವರು ಬ್ಯಾಟ್ಸ್ ಮನ್ ಗಳು ಬಿಟ್ಟರೆ ಉಳಿದವರು ಹೆಚ್ಚು ಕಾಲ ಕ್ರೀಸ್ ನಲ್ಲಿ ಉಳಿಯುವ ಧೈರ್ಯ ತೋರಲಿಲ್ಲ.

ಮೊದಲ ಇನ್ನಿಂಗ್ಸ್ ನಲ್ಲಿ 159 ರನ್ ಗಳಿಗೆ ಆಲೌಟ್ ಆಗಿದ್ದ ಕಿವೀಸ್ ಪಡೆ, ಎರಡನೇ ಇನ್ನಿಂಗ್ಸ್ ನಲ್ಲಿ 164 ರನ್ ಗಳಿಗೆ ಸರ್ವಪತನ ಕಂಡಿತು. [ಸ್ಕೊರ್ ಕಾರ್ಡ್ ನೋಡಿ]

ಮಾರ್ಟಿನ್ ಗಪ್ಟಿಲ್ 16 ರನ್, ಮೆಕಲಮ್ 42 ರನ್ ಹಾಗೂ ಕೇನ್ ವಿಲಿಯಮ್ಸನ್ 52 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ನಾಯಕ ರಾಸ್ ಟೇಲರ್ ಮತ್ತೊಮ್ಮೆ ವಿಫಲರಾಗಿ ಕೇವಲ 7 ರನ್ ಗಳಿಸಿ ಔಟಾದರು.

ರವಿಚಂದ್ರನ್ ಅಶ್ವಿನ್ ಈ ಇನ್ನಿಂಗ್ಸ್ ನಲ್ಲಿ 54 ರನ್ ನೀಡಿ 6 ವಿಕೆಟ್ ಗಳಿಸಿದರು. ಅಶ್ವಿನ್ ಗೆ ಉತ್ತಮ ಸಾಥ್ ನೀಡಿದ ಪಿ. ಓಜಾ 48 ರನ್ ನೀಡಿ 3 ವಿಕೆಟ್ ಗಳಿಸಿದರು. ಉಮೇಶ್ ಯಾದವ್ ಕೂಡಾ 1 ವಿಕೆಟ್ ಪಡೆದರು. ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ 31 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಓಜಾ 3 ವಿಕೆಟ್ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನ್ನಿಂಗ್ಸ್: 438 / 10
* ಚೇತೇಶ್ವರ್ ಪೂಜಾರಾ 159, ಜತೀನ್ ಪಟೇಲ್ 100/4

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ : 159 / 10
* ಕೇನ್ ವಿಲಿಯಮ್ಸನ್ 32 ರನ್, ಆರ್ ಅಶ್ವಿನ್ 31/6

ಎರಡನೇ ಇನ್ನಿಂಗ್ಸ್:
164/10
*  ಕೇನ್ ವಿಲಿಯಮ್ಸನ್ 52 ರನ್,ಆರ್ ಅಶ್ವಿನ್ 54/6

Story first published:  Sunday, August 26, 2012, 16:47 [IST]
English summary
NZ tour of India: R Ashwin recorded a stunning 12 for 85 as India beat New Zealand by an innings and 115 runs in the first Test at the Rajiv Gandhi International Stadium in Hyderabad.
ಅಭಿಪ್ರಾಯ ಬರೆಯಿರಿ