Englishहिन्दीമലയാളംதமிழ்తెలుగు

ಪೂಜಾರ ಸ್ಕೋರ್ ದಾಟದ ಕಿವೀಸ್ ಇನ್ನಿಂಗ್ಸ್

Posted by:
Updated: Saturday, August 25, 2012, 14:01 [IST]
 

ಹೈದರಾಬಾದ್, ಆ. 25 : ರವಿಚಂದ್ರನ್ ಅಶ್ವಿನ್ ಮತ್ತು ಪ್ರಗ್ಯಾನ್ ಓಝಾ ಅವರ ಮಾಂತ್ರಿಕ ಸ್ಪಿನ್ ದಾಳಿಗೆ ತಕ್ಕ ಉತ್ತರ ನೀಡಲು ವಿಫಲವಾದ ನ್ಯೂಜಿಲೆಂಡ್, ಭಾರತದ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 159 ರನ್ನಿಗೆ ಆಲೌಟಾಯಿತು. ಭಾರತದ ಮೊದಲ ಇನ್ನಿಂಗ್ಸ್ ಮೊತ್ತವಾದ 438 ರನ್ನುಗಳಿಂದ 279 ರನ್ ಹಿಂದುಳಿದ ನ್ಯೂಜಿಲೆಂಡಿಗೆ ಫಾಲೋಆನ್ ನೀಡಲಾಗಿದೆ.

ಪೂಜಾರ ಸ್ಕೋರ್ ದಾಟದ ಕಿವೀಸ್ ಇನ್ನಿಂಗ್ಸ್

ನ್ಯೂಜಿಲೆಂಡಿನ ಇಡೀ ಇನ್ನಿಂಗ್ಸ್ ಮೊತ್ತ, ಭಾರತದ ಶತಕವೀರ ಚೇತೇಶ್ವರ್ ಪೂಜಾರಾ ಅವರ ವೈಯಕ್ತಿಕ ಮೊತ್ತ(159)ವನ್ನು ಕೂಡ ದಾಟಲಿಲ್ಲ. ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದ ಮೂರನೇ ದಿನ ತನ್ನ ಕೊನೆಯ 5 ವಿಕೆಟ್‌ಗಳನ್ನು ಬಹುಬೇಗನೆ ಕಳೆದುಕೊಂಡಿತು. ಎರಡನೇ ದಿನದ ಕೊನೆಗೆ ನ್ಯೂಜಿಲೆಂಡ್ 5 ವಿಕೆಟ್‌ಗೆ 106 ರನ್ ಗಳಿಸಿತ್ತು. [ಸ್ಕೋರ್ ವಿವರ]

ಭಾರತ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ರವಿಚಂದ್ರನ್ ಅಶ್ವಿನ್ ಅವರು 16.3 ಓವರುಗಳಲ್ಲಿ 31 ರನ್ ನೀಡಿ 6 ವಿಕೆಟ್ ಕಬಳಿಸಿ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಪ್ರಗ್ಯಾನ್ ಓಝಾ 21 ಓವರುಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಉಳಿದ ಒಂದು ವಿಕೆಟ್ಟನ್ನು ಯಾದವ್ ಪಡೆದರು.

ನ್ಯೂಜಿಲೆಂಡ್ ಪರ 43 ರನ್ ಗಳಿಸಿದ ಫ್ರಾಂಕ್ಲಿನ್ ಅತಿ ಹೆಚ್ಚು ಓಟ ಗಳಿಸಿದ ಬ್ಯಾಟ್ಸಮನ್ ಎನಿಸಿದರು. ಅವರನ್ನು ಬಿಟ್ಟರೆ ವಿಲಿಯಂಸ್ ಮಾತ್ರ ಭಾರತದ ಬೌಲರುಗಳನ್ನು ವಿಶ್ವಾಸದಿಂದ ಎದುರಿಸಿದರು. ಉಳಿದವರು ತರಗೆಲೆಗಳಂತೆ ಉದುರಿಹೋದರು. ನ್ಯೂಜಿಲೆಂಡಿಗೆ ಫಾಲೋಆನ್ ನೀಡಲು ಧೋನಿ ಹಿಂದೆ ಮುಂದೆ ನೋಡಲಿಲ್ಲ. ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಇನ್ನಿಂಗ್ಸ್ ಜಯಗಳಿಸುವ ವಿಶ್ವಾಸದಲ್ಲಿ ಧೋನಿ ಪಡೆ ದಾಳಿ ನಡೆಸಿದೆ.

Story first published:  Saturday, August 25, 2012, 13:34 [IST]
English summary
Team India had an amazing outing at Rajiv Gandhi Cricket Stadium on Day Three as they bundled out New Zealand for 159 despite a delayed start, and enforce follow-on as New Zealand are trailing by 279 runs. R Ashwin took 6 and Ozha took 3 wickets.
ಅಭಿಪ್ರಾಯ ಬರೆಯಿರಿ