Englishहिन्दीമലയാളംதமிழ்తెలుగు

ಭಾರತದ ಸ್ಪಿನ್ ದಾಳಿಗೆ ಕಿವೀಸ್ ತತ್ತರ

Posted by:
Updated: Sunday, August 26, 2012, 16:27 [IST]
 

ಭಾರತದ ಸ್ಪಿನ್ ದಾಳಿಗೆ ಕಿವೀಸ್ ತತ್ತರ
 

ಹೈದರಾಬಾದ್, ಆ.24: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 438 ರನ್ ಪೇರಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿದೆ. ಚೇತೇಶ್ವರ ಪೂಜಾರ ಶತಕ ಮತ್ತು ಧೋನಿ ಅರ್ಧಶತಕ ಭಾರತದ ಮೊತ್ತಕ್ಕೆ ಉತ್ತಮ ಕೊಡುಗೆಯಾಯಿತು.

ಎರಡನೇ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡದ ಮೊತ್ತ 106/5, ಫ್ರಾಂಕ್ಲಿನ್(31), ವಾನ್ ವಿಕ್ (೦) ಕ್ರೀಸ್ ನಲ್ಲಿದ್ದಾರೆ. ಕಿವೀಸ್ 332 ರನ್ ಹಿನ್ನೆಡೆ ಅನುಭವಿಸಿದ್ದಾರೆ. ನ್ಯೂಜಿಲೆಂಡ್ ತಂಡ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 133 ರನ್ ಅವಶ್ಯಕತೆ ಇದೆ.

ಟೀಂ ಇಂಡಿಯಾದ ಮೊತ್ತಕ್ಕೆ ಸರಿಯಾದ ಪ್ರತ್ಯುತ್ತರ ನೀಡಲಾಗದೆ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿದೆ. ಬ್ರೆಂಡನ್ ಮೆಕಲಮ್ ಬಿರುಸಿನ ಆಟ ಪ್ರದರ್ಶಿಸಿದರೂ ಸ್ಪಿನ್ ದಾಳಿ ಆರಂಭವಾಗುತ್ತಿದ್ದಂತೆ ಕುಸಿದು ಬಿದ್ದರು.

ಮೆಕಲಮ್ 22 ರನ್ (3 ಬೌಂಡರಿ) ಗಳಿಸಿ ಔಟಾಗುತ್ತಿದ್ದಂತೆ, ಇನ್ನೊಬ್ಬ ಅರಂಭಿಕ ಆಟಗಾರ ಗುಪ್ಟಿಲ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. 10 ಓವರ್ ಗಳಲ್ಲಿ 29 ರನ್ ಗೆ 2 ವಿಕೆಟ್ ಕಳೆದುಕೊಂಡು ದುಃಸ್ಥಿತಿಗೆ ನ್ಯೂಜಿಲೆಂಡ್ ತಂಡ ತಲುಪಿತ್ತು. [ಸ್ಕೋರ್ ಕಾರ್ಡ್ ನೋಡಿ] | [ಮೊದಲ ದಿನದ ವರದಿ ಓದಿ]

ನಂತರ ಆಡಲು ಬಂದ ಕೇನ್ ವಿಲಿಯಮ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅದರೆ, ಇನ್ನೊಂದು ತುದಿಯಲ್ಲಿ ನಾಯಕ ರಾಸ್ ಟೇಲರ್ ಅವರು ಅಶ್ವಿನ್ ಸ್ಪಿನ್ ಬಲೆಗೆ ಬಿದ್ದರು. ಟೇಲರ್ ನಂತರ ಡೇನಿಯಲ್ ಫಿನ್ ಕೂಡಾ ಅಶ್ವಿನ್ ಗೆ ಬಲಿಯಾದರು.

ಭಾರತದ ಸ್ಪಿನ್ ಜೋಡಿಗೆ ವಿಕೆಟ್ ಗಳು ಬೀಳುತ್ತಿದ್ದರೂ ವಿಲಿಯಮ್ಸನ್ ಹಾಗೂ ಆಲ್ ರೌಂಡರ್ ಫ್ರಾಂಕ್ಲಿನ್ ಉತ್ತಮ ಜೊತೆಯಾಟ ಪ್ರದರ್ಶಿಸಿ ತಂಡದ ಮೊತ್ತ ನಿಧಾನಗತಿಯಲ್ಲಿ 100 ರನ್ ಗಡಿ ಹತ್ತ್ತಿರಕ್ಕೆ ತಂದರು. ನ್ಯೂಜಿಲೆಂಡ್ ತಂಡ ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 139 ರನ್ ಅವಶ್ಯಕತೆ ಇದೆ. ಆರ್ ಅಶ್ವಿನ್ ಉತ್ತಮ ಬೌಲಿಂಗ್ ಪ್ರದರ್ಶಿಸಿ 3 ವಿಕೆಟ್ ಗಳಿಸಿದರೆ, ಓಜಾ 2 ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್ : ಎರಡನೇ ದಿನದ ಟೀ ವಿರಾಮಕ್ಕೆ ಮೊದಲೇ ಭಾರತ ಆಲೌಟ್ ಆಗಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಮೊದಲ ದಿನ ಶತಕ ಪೂರೈಸಿದ್ದ ಚೇತೇಶ್ವರ ಪೂಜಾರ 159 ರನ್ ಮಾಡಿ ಔಟ್ ಆದರು. ಇದರ ಬಳಿಕ ಸತತವಾಗಿ ವಿಕೆಟ್ ಉದುರತೊಡಗಿತು. ಶತಕ ಗಳಿಸುವ ಅವಕಾಶವಿದ್ದ ಧೋನಿ 73 ರನ್ ಮಾಡಿ ಜೀತನ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು.

ಆರ್. ಅಶ್ವಿನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 37 ರನ್ ಮಾಡಿ ಪಟೇಲ್ ನಾಲ್ಕನೇ ಬಲಿಯಾದರು. ಜಹೀರ್ ಖಾನ್ (0), ಯಾದವ್(4) ಗಳಿಸಿದರು. ಕಿವೀಸ್ ಪರ ಪಟೇಲ್ ನಾಲ್ಕು, ಬೌಲ್ಟ್ ಮೂರು ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ನ ಯಶಸ್ವಿ ಬೌಲರ್ ಎನಿಸಿದರು.

Story first published:  Friday, August 24, 2012, 17:09 [IST]
English summary
India's spin duo R Ashwin and P Ojha were outstanding in the third session on Day two as they reduced New Zealand to 106/5 at stumps, as they trailed by 332 runs in the first Test at Hyderabad on Friday(Aug.24).
ಅಭಿಪ್ರಾಯ ಬರೆಯಿರಿ