Englishहिन्दीമലയാളംதமிழ்తెలుగు

ಚೇತೇಶ್ವರ ಪ್ರಥಮ ಶತಕ, ಭಾರತ ಚೇತರಿಕೆ

Posted by:
Updated: Thursday, August 23, 2012, 17:32 [IST]
 

ಹೈದರಾಬಾದ್, ಆ.23: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರಾ ಅವರು ಪ್ರಪ್ರಥಮ ಶತಕ ದಾಖಲಿಸಿ ಟೀಂ ಇಂಡಿಯಾಗೆ ಚೇತರಿಕೆ ನೀಡಿದ್ದಾರೆ. ರಾಹುಲ್ ದ್ರಾವಿಡ್ ಸ್ಥಾನದಲ್ಲಿ ಆಡಲು ಬಂದಿರುವ ಪೂಜಾರಾ ಅವರು ರಾಜೀವ್ ಗಾಂಧಿ ಸ್ಟೇಡಿಯಂನ ಬೌಂಡರಿ ಮಳೆಗೆರೆದು ಅರ್ಹ ಶತಕ ಸಂಪಾದಿಸಿದರು.

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಉತ್ತಮ ಅರಂಭದ ನಡುವೆಯೂ ಮುಗ್ಗರಿಸಿತು. ಗೌತಮ್ ಗಂಭೀರ್ ಹಾಗೂ ವೀರೇಂದರ್ ಸೆಹ್ವಾಗ್ ಭರ್ಜರಿ ಮೊತ್ತ ಕಲೆ ಹಾಕುವ ಕುರುಹು ತೋರಿದರೂ ಅಲ್ಪಮೊತ್ತಕ್ಕೆ ಔಟ್ ಆದರು.

ಚೇತೇಶ್ವರ ಪ್ರಥಮ ಶತಕ, ಭಾರತ ಚೇತರಿಕೆ

ಗೌತಮ್ ಗಂಭೀರ್ 22 ರನ್ (4 ಬೌಂಡರಿ) ಗಳಿಸಿ ಔಟಾದರು. ನಂತರ ಸೆಹ್ವಾಗ್ ಸೇರಿಕೊಂಡ ಪೂಜಾರಾ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಬಿರುಸಿನ ಆಟವಾಡಿದ ಸೆಹ್ವಾಗ್ 41 ಎಸೆತದಲ್ಲಿ 47 ರನ್ ಗಳಿಸಿ ಔಟಾದರು. ಸೆಹ್ವಾಗ್ 9 ಆಕರ್ಷಕ ಬೌಂಡರಿ ಬಾರಿಸಿದ್ದರು.

ನಂತರ ಬಂದ ಸಚಿನ್ ತೆಂದೂಲ್ಕರ್ ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿ ಕೇವಲ 19 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಹಾಗೂ ಪೂಜಾರಾ ಭಾರತದ ಮೊತ್ತವನ್ನು 250ರ ಗಡಿ ದಾಟಿಸಿ ಭರವಸೆ ಮೂಡಿಸಿದರು. [ಸ್ಕೋರ್ ಕಾರ್ಡ್ ನೋಡಿ]

ಚಹಾ ವಿರಾಮದ ವೇಳೆ 3 ವಿಕೆಟ್ ಕಳೆದು ಕೊಂಡು 182 ರನ್ ಗಳಿಸಿದ್ದ ಭಾರತ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ಅರ್ಧಶತಕ ಗಳಿಸಿ ಅಡುತ್ತಿದ್ದ ಕೊಹ್ಲಿ ಅನಗತ್ಯವಾಗಿ ಚೆಂಡನ್ನು ಕೆಣಕಿ ಔಟಾದರು.

ಕೊಹ್ಲಿ 58ರನ್(8 ಬೌಂಡರಿ) ಭಾರತಕ್ಕೆ ಆಸರೆಯಾಗಿ ನಿಂತರು. ನಂತರ ಬಂದ ಸುರೇಶ್ ರೈನಾ ಸಿಕ್ಕ ಅವಕಾಶವನ್ನು ಹಾಳುಗೆಡವಿಕೊಂಡು ಕೇವಲ 3 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು.

ಮೊದಲ ಟೆಸ್ಟ್ ನ ಮೊದಲ ದಿನದ ಆಟದ ಅಂತ್ಯಕ್ಕೆ ಪೂಜಾರಾ ಹಾಗೂ ನಾಯಕ ಧೋನಿ ಭಾರತದ ಮೊತ್ತ 300ರ ಗಡಿ ದಾಟುವಂತೆ ನೋಡಿಕೊಂಡಿದ್ದಾರೆ. ಚೇತೇಶ್ವರ್ ಪೂಜಾರಾ 119 ರನ್ (15 ಬೌಂಡರಿ, 1 ಸಿಕ್ಸರ್) ಹಾಗೂ ಎಂಎಸ್ ಧೋನಿ 29 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿ ಕ್ರೀಸ್ ನಲ್ಲಿದ್ದಾರೆ.  ಭಾರತದ ಮೊತ್ತ 307/5. [ಪೂಜಾರಾ ಟೆಸ್ಟ್ ಅಂಕಿ ಅಂಶ]

ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ಹೈದರಾಬಾದಿನ ಪಿಚ್ ನಲ್ಲಿ ಆಡಿದ್ದು ನೆರವಾಯಿತು. ಪ್ರಥಮ ಶತಕ ಯಾವಾಗಲೂ ವಿಶೇಷವಾಗಿರುತ್ತದೆ. ದ್ರಾವಿಡ್ ಸ್ಥಾನದಲ್ಲಿ ಆಡುತ್ತಿದ್ದೇನೆ ಎಂಬುದೇ ಥ್ರಿಲ್ಲಿಂಗ್ ವಿಷಯ. ಅವರ ಮಾರ್ಗದರ್ಶನ, ಆಟ ನನಗೆ ನೆರವಾಗಲಿದೆ ಎಂದು ದಿನದ ಆಟದ ನಂತರ ಮಾತನಾಡುತ್ತಾ ಪೂಜಾರಾ ಹೇಳಿದರು.

24 ವರ್ಷ ವಯಸ್ಸಿನ ಸೌರಾಷ್ಟ್ರದ ಬಲಗೈ ಬ್ಯಾಟ್ಸ್ ಮನ್ ಚೇತೇಶ್ವರ್ ಪೂಜಾರಾ ದೇಶಿ ಕ್ರಿಕೆಟ್ ನಲ್ಲಿ ನಾಲ್ಕು ಬಾರಿ 300 ರನ್ ಗಡಿ ದಾಟಿದ ಸಾಧನೆ ಮೆರೆದಿದ್ದಾರೆ.

Story first published:  Thursday, August 23, 2012, 17:04 [IST]
English summary
New zealand tour of india : Indian batsman Cheteshwar Pujara slammed his maiden century to take hosts past 300 on day 1 of the first of two-match Test series played at Rajiv Gandhi International Stadium in Hyderabad on Thursday(Aug.23).
ಅಭಿಪ್ರಾಯ ಬರೆಯಿರಿ