Englishहिन्दीമലയാളംதமிழ்తెలుగు

ಸಚಿನ್ ಸಾವಿನ ಗುಂಡಿ ತೋಡಿದ್ದು ಯಾರಿಗಾಗಿ?

Posted by:
Updated: Thursday, August 23, 2012, 12:11 [IST]
 

ಸಚಿನ್ ಸಾವಿನ ಗುಂಡಿ ತೋಡಿದ್ದು ಯಾರಿಗಾಗಿ?
 

ನವದೆಹಲಿ, ಆ.22: ಸಂಸದ ಸಚಿನ್ ತೆಂಡೂಲ್ಕರ್ ಅವರು ಅಂತಿಮ ಸಂಸ್ಕಾರ ಮಾಡುತ್ತಿರುವ ದೃಶ್ಯಗಳಿರುವ ಜಾಹೀರಾತು ಕೋಲಾಹಲ ಎಬ್ಬಿಸಿದೆ. ರೀಟೇಲ್ ಮಾರುಕಟ್ಟೆಗೆ ಸಹಾರಾ ಸಂಸ್ಥೆ ತನ್ನ 'ಕ್ಯೂ' ಶಾಪ್ ಮಳಿಗೆಗಳ ಮೂಲಕ ಭರ್ಜರಿಯಾಗಿ ಎಂಟ್ರಿ ನೀಡುತ್ತಿದೆ. ಈ ಸಂದರ್ಭದಲ್ಲಿ ಭಾರತದ ಪ್ರಮುಖ ಕ್ರಿಕೆಟರ್ ಗಳನ್ನು ಬಳಸಿ ವಿಚಿತ್ರವಾದ ಜಾಹೀರಾತು ಹೊರಬಿಟ್ಟಿದೆ.

ಜಾಹೀರಾತಿನ ಸ್ಕ್ರಿಪ್ಟ್ ಹಾಗೂ ಅದು ಹೊರಬಿದ್ದ ನಂತರ ಅಗಬಹುದಾದ ಇರಸು ಮುರುಸಿನ ಬಗ್ಗೆ ತಲೆ ಕೆಡಿಸಿಕೊಳ್ಳದ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಈಗ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಬಹುಶಃ ಈ ಸುದ್ದಿ ಓದುವ ಹೊತ್ತಿಗೆ ಯೂಟ್ಯೂಬ್ ನಲ್ಲಿದ್ದ ಸಹರಾ ಕ್ಯೂ ಶಾಪ್ ಜಾಹೀರಾತಿನ ವಿಡಿಯೋ ಮಾಯವಾಗಿರುತ್ತದೆ.

ಸಚಿನ್ ಅವರು ಅಂತಿಮ ಸಂಸ್ಕಾರ ಆಚರಣೆ ವಿಡಿಯೋ ಬಗ್ಗೆ ಬಿಸಿಸಿಐಗೆ ಅನೇಕ ದೂರುಗಳು ಬಂದಿದೆ. ಸಚಿನ್ ತೆಂಡೂಲ್ಕರ್ ಅಲ್ಲದೆ ಯುವರಾಜ್ ಸಿಂಗ್ ಕೂಡಾ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಗೋರಿ ತೋಡುವ ಕೆಲಸ ಮಾಡುತ್ತಾರೆ. ಸಹಾರಾ ಕ್ಯೂ ಶಾಪ್ ನಲ್ಲಿ ಖರೀದಿಸದಿದ್ದರೆ ಗ್ರಾಹಕರು ಇದೇ ಗೋರಿಗೆ ಬೀಳಬೇಕಾಗುತ್ತದೆ. ಸಹಾರಾದಲ್ಲಿ ಖರೀದಿಸದಿದ್ದರೆ ಸಾವು ಖಚಿತ ಎಂದು ಸೂಚ್ಯವಾಗಿ ಹೇಳಲಾಗಿದೆ.

ಎಂಎಸ್ ಧೋನಿ, ವಿರೇಂದರ್ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ಅವರು ವೀಲ್ ಚೇರ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ಸಚಿನ್ ತೆಂಡೂಲ್ಕರ್ ಅವರಿರುವ ಭಾಗವನ್ನು ಮಾತ್ರ ತೆಗೆದುಹಾಕಲಾಗುತ್ತದೆ. ಯುವರಾಜ ಸಿಂಗ್ ಅವರಿರುವ ಕ್ಲಿಪಿಂಗ್ ಅನ್ನು ಹಾಗೆ ಉಳಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಬಂದಿದೆ.

350 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಸಂಪೂರ್ಣ ಕಲಬೆರಕೆ ರಹಿತ ಪದಾರ್ಥಗಳನ್ನು ನೀಡುವ ಏಕೈಕ ಮಳಿಗೆ ಎಂಬ ಅಡಿ ಬರಹದೊಂದಿಗೆ ಸಹಾರಾ ಸಂಸ್ಥೆ ತನ್ನ Q ಶಾಪ್ ಗಳನ್ನು ರೀಟೇಲ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಜಾಹೀರಾತಿನ ಹಿಂದೆ ಬಿದ್ದ ಕ್ರಿಕೆಟರ್ ಗಳು ಹಲವು ಅನರ್ಥಕ್ಕೆ ಈಡಾಗಿದ್ದು ಇದೆ. ಬ್ರಾಂಡ್ ಮೌಲ್ಯ ಹೆಚ್ಚಳ ಪೈಪೋಟಿಯಲ್ಲಿ ಸಚಿನ್ ಹಾಗೂ ಎಂಎಸ್ ಧೋನಿ ಎಲ್ಲರಿಗಿಂತ ಮುಂದಿದ್ದಾರೆ.

ಸಚಿನ್ ಬಳಿ ಐಟಿಸಿಯ ಸನ್ ಫೀಸ್ಟ್, ಅಡಿಡಾಸ್, Audemars Piguet(ಸ್ವಿಸ್ ಕೈ ಗಡಿಯಾರ ತಯಾರಕರು), ಕ್ಯಾನನ್, ಅವಿವಾ ಜೀವ ವಿಮೆ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್, ತೋಷಿಬಾ ಮುಂತಾದ 14 ಬ್ರ್ಯಾಂಡ್ ಗಳಿವೆ.

ಎಂಎಸ್ ಧೋನಿ 2 ಕೋಟಿ 65 ಲಕ್ಷ ಯುಎಸ್ ಡಾಲರ್ ಸಂಪಾದಿಸಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದಿದ್ದಾರೆ. ಈ ಮೊತ್ತದಲ್ಲಿ 2 ಕೋಟಿ 30 ಲಕ್ಷ ಡಾಲರ್ ಜಾಹೀರಾತುಗಳಿಂದ ಬಂದಿದ್ದಾಗಿದೆ. ಉಳಿದ 35 ಲಕ್ಷ ಡಾಲರ್ ಗಳನ್ನು ಕ್ರಿಕೆಟ್ ವೃತ್ತಿಯಿಂದ ಗಳಿಸಿದ್ದಾರೆ.

Story first published:  Wednesday, August 22, 2012, 18:41 [IST]
English summary
A Sahara Q shop advertisement showing Sachin Tendulkar performing last rites has triggered a storm, with the Board of Control for Cricket in India (BCCI) getting flooded with complaints.
ಅಭಿಪ್ರಾಯ ಬರೆಯಿರಿ