Englishहिन्दीമലയാളംதமிழ்తెలుగు

ಟೆಸ್ಟ್ ಗೂ ಮುನ್ನ ಧೋನಿ vs ಲಕ್ಷ್ಮಣ್ ಸಮರ

Posted by:
Published: Wednesday, August 22, 2012, 17:02 [IST]
 

ಟೆಸ್ಟ್ ಗೂ ಮುನ್ನ ಧೋನಿ vs ಲಕ್ಷ್ಮಣ್ ಸಮರ
 

ಹೈದರಾಬಾದ್, ಆ.22: ನ್ಯೂಜಿಲೆಂಡ್ ವಿರುದ್ಧ ಗುರುವಾರ (ಆ.23) ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲಿ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅನುಪಸ್ಥಿತಿ ಕಾಡಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಹೇಳಿದ್ದಾರೆ. ಆದರೆ, ಲಕ್ಷ್ಮಣ್ ಹಾಗೂ ಧೋನಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ.

ನಿವೃತ್ತಿ ಬಳಿಕ ಸಹ ಆಟಗಾರರಿಗೆ ಔತಣ ನೀಡಿದ ಲಕ್ಷ್ಮಣ್ ಅವರು ಸಚಿನ್ ತೆಂಡೂಲ್ಕರ್ ಹಾಗೂ ಇತರೆ ಆಟಗಾರರಿಗೆ ಮಾತ್ರ ಆಹ್ವಾನ ನೀಡಿದ್ದಾರೆ. ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಂಎಸ್ ಧೋನಿ ಅವರಿಗೆ ಪತ್ರಕರ್ತರೊಬ್ಬರು ನೇರವಾಗಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಧೋನಿ ಕೂಡಾ ನೇರವಾಗಿ ಉತ್ತರಿಸಿದ್ದಾರೆ. ನನಗೆ ಆಹ್ವಾನ ಬಂದಿಲ್ಲ ಹಾಗಾಗಿ ನಾನು ಹೋಗಿಲ್ಲ ಎಂದಿದ್ದಾರೆ.

ಟೀಂ ಇಂಡಿಯಾದ ಉಳಿದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್, ವೀರೆಂದರ್ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ಜಹೀರ್ ಖಾನ್ ಅವರು ಭರ್ಜರಿ ಔತಣದ ರುಚಿ ಕಂಡಿದ್ದಾರೆ.

ಭರ್ಜರಿ ಊಟ ಹೊಡೆದು ಉಭಯ ಕುಶಲೋಪರಿ ನಂತರ ಸಚಿನ್ ತೆಂಡೂಲ್ಕರ್ ಅವರು "Went to VVS Laxman's house to have dinner. It is always special to meet him. Such a wonderful guy, so simple and down to earth..." ಎಂದು ಟ್ವೀಟ್ ಮಾಡಿದ್ದಾರೆ.

ಲಕ್ಷ್ಮಣ್ ಹಾಗೂ ದ್ರಾವಿಡ್ ಅನುಪಸ್ಥಿಯಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಧೋನಿ ಹೇಳಿಕೆ ನೀಡಿದ್ದಾರೆ. ದ್ರಾವಿಡ್ ರಂತೆ ಲಕ್ಷ್ಮಣ್ ಕೂಡಾ ಒತ್ತಡಕ್ಕೆ ಬಿದ್ದು ನಿವೃತ್ತಿ ಘೋಷಿಸಿರುವುದು ಗುಟ್ಟಾಗಿ ಉಳಿದಿಲ್ಲ.

ನ್ಯೂಜಿಲೆಂಡ ಸರಣಿಗಾಗಿ ಕಠಿಣ ಅಭ್ಯಾಸ ನಡೆಸಿದ್ದ ಲಕ್ಷ್ಮಣ್ ಇತ್ತೀಚೆಗೆ ಸ್ಥಳೀಯ ಪಂದ್ಯಗಳಲ್ಲಿ ಎರಡು ಶತಕ ಬಾರಿಸಿ ಭರ್ಜರಿಯಾಗಿ ತಯಾರಾಗಿದ್ದರು. ಆದರೆ, ಕಾಣದ ಕೈಗಳ ಕೈವಾಡದಿಂದ ಪ್ರತಿಭಾವಂತ ಆಟಗಾರ ಹಠಾತ್ ಆಗಿ ನಿರ್ಗಮನದ ಹಾದಿ ಹಿಡಿಯಬೇಕಾಯಿತು.

ವಿವಿಎಸ್ ಲಕ್ಷ್ಮಣ್ ಅವರು ನಿವೃತ್ತಿ ಘೋಷಣೆಗೂ ಮುನ್ನ ನಾಯಕ ಧೋನಿ ಅವರೊಟ್ಟಿಗೆ ಮಾತನಾಡಲು ಫೋನ್ ಕರೆ ಮಾಡಿದ್ದಾರೆ. ಆದರೆ, ಆ ದಿನ ಪೂರ್ತಿ ಧೋನಿ ಫೋನ್ ಕರೆ ಸ್ವೀಕರಿಸದೆ ತನ್ನ ಹಠಮಾರಿತನವನ್ನು ಮೆರೆದಿದ್ದಾರೆ.

ತನ್ನ ಆಟಗಾರರಿಗೆ ಸ್ಪಂದಿಸದವನು ಯಾವ ರೀತಿ ಕ್ಯಾಪ್ಟನ್ ಆಗಲು ಸಾಧ್ಯ. ಮೈದಾನದ ಹೊರಗೂ ಕೂಡಾ ಆಟಗಾರರ ಕಷ್ಟ ಸುಖ ಆಲಿಸುವ ಗುಣ ಇದ್ದರೆ ಮಾತ್ರ ನಾಯಕ ನಾಗಲು ಸಾಧ್ಯ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಟೀಕಿಸಿದ್ದಾರೆ.

ಅದರೆ, ಧೋನಿ ಮಾತ್ರ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುತ್ತಾ, ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ನನ್ನನ್ನು ಚೆನ್ನಾಗಿ ಬಲ್ಲವರು ಹೇಳುವ ಪ್ರಕಾರ ನನ್ನೊಂದಿಗೆ ಪಳಗುವುದು ಸ್ವಲ್ಪ ಕಷ್ಟ ನಿಜ. ಲಕ್ಷ್ಮಣ್ ಭಾಯ್ ಗೂ ಕೂಡಾ ಇದೇ ಸಮಸ್ಯೆ ಕಾಡಿರಬಹುದು. ಇದು ನನಗೆ ಹೊಸದೇನಲ್ಲ. ಬದಲಾಗಲು ಯತ್ನಿಸಿದ್ದೇನೆ. ಆದರೆ, ಬದಲಾಗಿಲ್ಲ ಎನಿಸುತ್ತದೆ ಎಂದು ಧೋನಿ ಹೇಳಿದ್ದಾರೆ.

English summary
There were speculations that VVS Laxman did not enjoy the support of India captain MS Dhoni. And to suggest that all is not well between the two, the captain was not invited by Laxman to his house dinner when the Hyderabadi decided to host Sachin Tendulkar and others on Wednesday.
ಅಭಿಪ್ರಾಯ ಬರೆಯಿರಿ