Englishहिन्दीമലയാളംதமிழ்తెలుగు

ಪೀಟರ್ಸನ್ ವೃತ್ತಿಗೆ ಅಂತ್ಯ ಹಾಡಿದ ಇಂಗ್ಲೆಂಡ್

Posted by:
Updated: Tuesday, August 21, 2012, 18:29 [IST]
 

ಪೀಟರ್ಸನ್ ವೃತ್ತಿಗೆ ಅಂತ್ಯ ಹಾಡಿದ ಇಂಗ್ಲೆಂಡ್
 

ಲಂಡನ್, ಆ.21: ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡದಿಂದ ಕೆವಿನ್ ಪೀಟರ್ಸನ್ ಕೈಬಿಡಲಾಗಿದೆ. ಈ ಮೂಲಕ ಪೀಟರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಂತ್ಯ ಹಾಡುತ್ತಿದೆ.

2010ರಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ-20 ವಿಶ್ವಕಪ್ ನ್ನು ಇಂಗ್ಲೆಂಡ್ ಗೆದ್ದಾಗ ಪೀಟರ್ಸನ್ ಸರಣಿಶ್ರೇಷ್ಠರಾಗಿದ್ದರು. ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ಕಪ್ತಾನ ಆಂಡ್ರೂ ಸ್ಟ್ರಾಸ್ ಅವರನ್ನು ಟೀಕಿಸಿ ದ. ಆಫ್ರಿಕಾದ ಆಟಗಾರರಿಗೆ ಕೆಲವು ಸಂದೇಶಗಳನ್ನು ಕೆವಿನ್ ಕಳುಹಿಸಿದ್ದರು.

ಇದರ ಬಗ್ಗೆ ಕಟು ಕ್ರಮ ತೆಗೆದುಕೊಂಡ ಇಂಗ್ಲೆಂಡ್ ಮತ್ತು ವೆಲ್ಸ್ ಕ್ರಿಕೆಟ್ ಬೋರ್ಡ್ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟೆಸ್ಟ್ ನಿಂದ ಕೆವಿನ್ ಗೆ ಗೇಟ್ ಪಾಸ್ ನೀಡಿತ್ತು. ಈ ಟೆಸ್ಟ್ ನ್ನು ಕಳಕೊಂಡು ಇಂಗ್ಲೆಂಡ್ ಟೆಸ್ಟ ಸರಣಿಯಲ್ಲಿ ಸೋಲುಂಡಿತ್ತು.[ವೇಳಾಪಟ್ಟಿ ನೋಡಿ]

ಶುಕ್ರವಾರ ಕಾರ್ಡಿಫ್ ನಲ್ಲಿ ನಡೆಯಲಿರುವ ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಕೂಡ ಕೆವಿನ್ ಕೈಬಿಡಲಾಗಿದೆ. ಇತ್ತೀಚೆಗೆ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದ ಕೆವಿನ್ ಇದರ ಬಳಿಕ ಎಲ್ಲಾ ಮಾದರಿಯ ಕ್ರಿಕೆಟಿಗೆ ಲಭ್ಯನಿದ್ದೇನೆಂದು ಹೇಳಿದ್ದರು.

31 ವರ್ಷದ ದಕ್ಷಿಣ ಆಫ್ರಿಕಾ ಮೂಲದ ಕೆವಿನ್ ಪೀಟರ್ಸನ್ 127 ಏಕದಿನ ಕ್ರಿಕೆಟ್ ಹಾಗೂ 36 ಟಿ20 ಪಂದ್ಯಗಳನ್ನಾಡಿದ್ದಾರೆ.

2004ರಲ್ಲಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಏಕದಿನ ಕ್ರಿಕೆಟ್ ನಲ್ಲಿ 42 ರನ್ ಸರಾಸರಿಯಂತೆ 4184 ರನ್ ಗಳಿಸಿದ್ದಾರೆ.

21 ಫೆಬ್ರವರಿ 2012 ರಲ್ಲಿ ಪಾಕಿಸ್ತಾನದ ವಿರುದ್ಧ ಕೊನೆ ಏಕದಿನ ಪಂದ್ಯವಾಡಿದ 24 ನಂಬರ್ ಇರುವ ಜೆರ್ಸಿ ಧರಿಸುವ 6 ಅಡಿ 4 ಇಂಚು ಎತ್ತರದ ಅಜಾನುಬಾಹು ಕೆಪಿ ಇದ್ದರೆ ತಂಡಕ್ಕೆ ಆನೆಬಲ ಇದ್ದಂತೆ.

9 ಶತಕ, 23 ಅರ್ಧಶತಕ ಸಿಡಿಸಿದ್ದಾರೆ. 130 ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ ಕೆಪಿ ಏಕದಿನ ಕ್ರಿಕೆಟ್ ನಲ್ಲಿ ಕೆಲ ದಾಖಲೆಗಳನ್ನು ಹೊಂದಿದ್ದಾರೆ.

ಅತಿ ವೇಗವಾಗಿ 1,000 ಹಾಗೂ 2,000 ರನ್ ಗಳಿಸಿದ ಆಟಗಾರ ಹಾಗೂ ಇಂಗ್ಲೆಂಡ್ ಪರ 2005ರಲ್ಲಿ vs ದಕ್ಷಿಣ ಆಫ್ರಿಕಾ ತ್ವರಿತವಾಗಿ ಶತಕ(69 ಎಸೆತದಲ್ಲಿ)

ಶ್ರೀಲಂಕಾದಲ್ಲಿ ವಿಶ್ವ ಟಿ20 ಆರಂಭಕ್ಕೂ ಮುನ್ನ ಹಾಲಿ ಟ್ವೆಂಟಿ20 ಕ್ರಿಕೆಟ್ ಚಾಂಪಿಯನ್ ಇಂಗ್ಲೆಂಡ್ ತಂಡ ತನ್ನ ಪ್ರಮುಖ ಆಟಗಾರನನ್ನು ಕಳೆದುಕೊಂಡಿದೆ. 2011ರ ವಿಶ್ವಕಪ್ ನಲ್ಲಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದ ಕೆಪಿ 2015ರ ವಿಶ್ವಕಪ್ ಗೂ ಅಲಭ್ಯರಾಗುವುದು ಅಭಿಮಾನಿಗಳಿಗೆ ನಿರಾಶೆಯಾಗಿದೆ.

ಆಟಗಾರರ ಅಗತ್ಯಕ್ಕೆ ತಕ್ಕಂತೆ ನಿಯಮ ಬದಲಾಯಿಸಲು ಒಪ್ಪದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನ ನಿಯಮಾವಳಿಗಳ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ಬೋರ್ಡ್ ಪ್ರಕಾರ ಯಾವುದೇ ಆಟಗಾರ ಏಕದಿನ ಅಥವಾ ಟಿ20 ಮಾದರಿಯಿಂದ ಹೊರಗುಳಿದರೆ ಎರಡೂ ಮಾದರಿಗಳಲ್ಲಿ ಆಡುವ ಆವಕಾಶ ಕಳೆದುಕೊಳ್ಳಬೇಕಾಗುತ್ತದೆ.

ಟಿ20 ವಿಶ್ವಕಪ್ ಗೆ ಇಂಗ್ಲೆಂಡ್ ತಂಡ: ಸ್ಟುವರ್ಟ್ ಬ್ರಾಡ್ (ನಾಯಕ), ಜಾನಿ ಬೈರ್ ಸ್ಟೋವ್, ರವಿ ಬೋಪಾರಾ, ಟಿಮ್ ಬ್ರೆಸ್ನನ್, ಡ್ಯಾನಿ ಬ್ರಿಗ್ಗ್ಸ್, ಜೊಸ್ ಬಟ್ಲರ್, ಜೇಡ್ ಡೆರ್ನ್ ಬ್ಯಾಕ್,ಸ್ಟೀವನ್ ಫಿನ್, ಅಲೆಕ್ಸ್ ಹಲ್ಸ್. ಕ್ರೆಗ್ ಕೀಸ್ವೆಟರ್, ಮೈಕಲ್ ಲಂಬ್, ಇಯಾನ್ ಮಾರ್ಗನ್, ಸಮಿತ್ ಪಟೇಲ್, ಗ್ರಹಾಂ ಸ್ವಾನ್, ಲೂಕ್ ರೈಟ್

Story first published:  Tuesday, August 21, 2012, 16:13 [IST]
English summary
Kevin Pietersen has been left out of England's squad for the ICC World Twenty20 2012 to be held in Sri Lanka from September 18. Pietersen, who had announced his retirement from the shorter formats in June and later made himself available for all cricket.
ಅಭಿಪ್ರಾಯ ಬರೆಯಿರಿ