Englishहिन्दीമലയാളംதமிழ்తెలుగు

ಲಕ್ಷ್ಮಣ್ ವೆರಿ ವೆರಿ ಸ್ಪೆಷಲ್ 10 ಇನ್ನಿಂಗ್ಸ್

Posted by:
Updated: Saturday, August 18, 2012, 20:18 [IST]
 

ಲಕ್ಷ್ಮಣ್ ವೆರಿ ವೆರಿ ಸ್ಪೆಷಲ್ 10 ಇನ್ನಿಂಗ್ಸ್
 

ಬೆಂಗಳೂರು, ಆ.18: ಭಾರತದ ಅಗ್ರಗಣ್ಯ ಟೆಸ್ಟ್ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಅವರು ಟೆಸ್ಟ್ ಕ್ರಿಕೆಟ್ ಗೆ ಶನಿವಾರ ಸಂಜೆ 4 ಗಂಟೆಗೆ ಹೈದರಾಬಾದಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ವಿದಾಯ ಹೇಳಿದ್ದಾರೆ.

1996ರಲ್ಲಿ ಅಹಮದಾಬಾದಿನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಲಕ್ಷ್ಮಣ್ ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.  ಭಾರತದ ಪರ ನೂರಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿರುವ 37 ವರ್ಷ ವಯಸ್ಸಿನ ಕಲಾತ್ಮಕ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಅವರು 134 ಟೆಸ್ಟ್ ಗಳಲ್ಲಿ 17 ಆಕರ್ಷಕ ಶತಕಗಳನ್ನು ಸಿಡಿಸಿದ್ದಾರೆ.

ಇದರಲ್ಲಿ ಹಲವು ಶತಕಗಳು ಭಾರತದ ಮಾನ ಉಳಿಸಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದ ಲಕ್ಷ್ಮಣ್ ಹಲವು ಆಕರ್ಷಕ ಇನ್ನಿಂಗ್ಸ್ ಆಡಿದ್ದಾರೆ.

16 ವರ್ಷದ ವೃತ್ತಿ ಜೀವನದಲ್ಲಿ ಲಕ್ಷ್ಮಣ್ ಅವರ ಆಡಿದ ಅತ್ಯುತ್ತಮವಾದ 10 ಇನ್ನಿಂಗ್ಸ್ ಗಳನ್ನು ದಟ್ಸ್ ಕ್ರಿಕೆಟ್ ಆಯ್ಕೆ ಮಾಡಿ ನಿಮ್ಮ ಮುಂದಿಟ್ಟಿದೆ. [ಇದನ್ನೂ ಓದಿ: ಲಕ್ಷ್ಮಣ್ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ]

* 281 (ಎರಡನೇ ಇನ್ನಿಂಗ್ಸ್) vs ಆಸ್ಟ್ರೇಲಿಯಾ, ಈಡೆನ್ ಗಾರ್ಡನ್, ಕೋಲ್ಕತ್ತಾ, 2001
ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಈ ಇನ್ನಿಂಗ್ಸ್ ಟೆಸ್ಟ್ ಇತಿಹಾಸದಲ್ಲೇ ಉತ್ತಮ ತಿರುವು ನೀಡಿದ ಇನ್ನಿಂಗ್ಸ್ ಆಗಿ ಪರಿಗಣಿಸಲ್ಪಟ್ಟಿದೆ. ಲಕ್ಷ್ಮಣ್ ಗೆ ರಾಹುಲ್ ದ್ರಾವಿಡ್ (180) ಉತ್ತಮ ಸಾಥ್ ನೀಡಿ ಬಲಿಷ್ಠ ಆಸೀಸ್ ತಂಡವನ್ನು ಬಗ್ಗು ಬಡಿದಿದ್ದರು.

* 148 (ಮೊದಲ ಇನ್ನಿಂಗ್ಸ್) vs ಆಸ್ಟ್ರೇಲಿಯಾ, ಅಡಿಲೇಡ್, 2003 [ಸ್ಕೋರ್ ಕಾರ್ಡ್]
ಕೋಲ್ಕತ್ತಾ ಇನ್ನಿಂಗ್ಸ್ ನಂತರ ಮತ್ತೊಮ್ಮೆ ರಾಹುಲ್ ದ್ರಾವಿಡ್ ಜೊತೆಗೂಡಿ ಆಸೀಸ್ ತಂಡವನ್ನು ಕಾಡಿದರು. ಅಡಿಲೇಡ್ ನಲ್ಲಿ ಭಾರತ ಐತಿಹಾಸಿಕ ಜಯ ದಾಖಲಿಸಿತು.

* 96 (ಎರಡನೇ ಇನ್ನಿಂಗ್ಸ್) vs ದಕ್ಷಿಣ ಆಫ್ರಿಕಾ, ಡರ್ಬನ್, 2010 [ಸ್ಕೋರ್ ಕಾರ್ಡ್]
ದಕ್ಷಿಣ ಆಫ್ರಿಕಾ ವಿರುದ್ಧ ಅಪರೂಪದ ಜಯಕ್ಕೆ ಕಾರಣವಾದ ಈ ಇನ್ನಿಂಗ್ಸ್ ಲಕ್ಷ್ಮಣ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಲಕ್ಷ್ಮಣ್ ಹೊರತುಪಡಿಸಿದರೆ ಸೆಹ್ವಾಗ್ ಮಾತ್ರ 32 ರನ್ ಗಳಿಸಿ ದ. ಆಫ್ರಿಕಾ ವಿರುದ್ಧ ಪ್ರತಿರೋಧದ ಆಟ ಪ್ರದರ್ಶಿಸಿದ್ದರು.

* 167 (ಎರಡನೇ ಇನ್ನಿಂಗ್ಸ್) vs ಆಸ್ಟ್ರೇಲಿಯಾ, ಸಿಡ್ನಿ, 1999 [ಸ್ಕೋರ್ ಕಾರ್ಡ್]
ಭಾರತ ತಂಡ ತನ್ನ ಕಳಪೆ ಫಾರ್ಮ್ ನಲ್ಲಿ ಆಸೀಸ್ ವಿರುದ್ಧ ೦-3 ಅಂತರದ ಸೋಲು ಅನುಭವಿಸಿದ ಸರಣಿಯಲ್ಲಿ ಲಕ್ಷ್ಮಣ್ ಆರಂಭಿಕ ಆಟಗಾರನ ಪಾತ್ರವನ್ನು ವಹಿಸಿ ಉತ್ತಮ ಆಟ ಪ್ರದರ್ಶಿಸಿದ್ದರು.

* 200 ನಾಟೌಟ್ (ಮೊದಲ ಇನ್ನಿಂಗ್ಸ್) vs ಆಸ್ಟ್ರೇಲಿಯಾ, ನವದೆಹಲಿ, 2008 [ಸ್ಕೋರ್ ಕಾರ್ಡ್]
ಆಸೀಸ್ ವಿರುದ್ಧ ಕೋಲ್ಕತ್ತಾ ಇನ್ನಿಂಗ್ಸ್ ನಂತರ ಫಿರೋಜ್ ಶಾ ಕೋಟ್ಲಾದಲ್ಲಿ ಲಕ್ಷ್ಮಣ್ ತಮ್ಮ ಎರಡನೇ ದ್ವಿಶತಕ ಬಾರಿಸಿದರು. ಪಂದ್ಯ ಡ್ರಾನಲ್ಲಿ ಅಂತಗೊಂಡಿತು.

* 73 ನಾಟೌಟ್ (ಎರಡನೇ ಇನ್ನಿಂಗ್ಸ್) vs ಆಸ್ಟ್ರೇಲಿಯಾ, ಮೊಹಾಲಿ, 2010 [ಸ್ಕೋರ್ ಕಾರ್ಡ್]
ಗೆಲುವಿಗೆ 216 ರನ್ ಚೇಸ್ ಮಾಡುತ್ತಿದ್ದ ಭಾರತ 124/8 ಸ್ಕೋರ್ ಹೊಡೆದು ಕಷ್ಟದ ಸ್ಥಿತಿಯಲ್ಲಿ ಇಶಾಂತ್ ಶರ್ಮ(31) ನಿಲ್ಲಿಸಿಕೊಂಡು ಆಸೀಸ್ ಗೆಲುವನ್ನು ಲಕ್ಷ್ಮಣ್ ಕಸಿದುಕೊಂಡರು.

* 103 ನಾಟೌಟ್ (ಎರಡನೇ ಇನ್ನಿಂಗ್ಸ್) vs ಶ್ರೀಲಂಕಾ, ಕೊಲೊಂಬೊ, 2010 [ಸ್ಕೋರ್ ಕಾರ್ಡ್]
ಎರಡನೇ ಇನ್ನಿಂಗ್ಸ್ ಕಿಂಗ್ ಲಕ್ಷ್ಮಣ್ ಮತ್ತೊಮ್ಮೆ ಭಾರತದ ರನ್ ಚೇಸ್ ಸಮರ್ಥವಾಗಿ ನಿಭಾಯಿಸಿದರು. 217 ರನ್ ಬೆನ್ನತ್ತಿದ ಲಂಕಾ ತಂಡವನ್ನು ಮಣಿಸಿದ ಭಾರತ ಸರಣಿ ಸಮ ಮಾಡಿಕೊಂಡಿತು.

* 176 ನಾಟೌಟ್ (ಮೊದಲ ಇನ್ನಿಂಗ್ಸ್) vs ವೆಸ್ಟ್ ಇಂಡೀಸ್, ಕೋಲ್ಕತ್ತಾ, 2011 [ಸ್ಕೋರ್ ಕಾರ್ಡ್]
ಕೋಲ್ಕತ್ತಾದ ಫೇವರೀಟ್ ಪಿಚ್ ನಲ್ಲಿ ಲಕ್ಷ್ಮಣ್ ಮೊದಲ ಇನ್ನಿಂಗ್ಸ್ ನಲ್ಲಿ ಹೊಡೆದ ಭರ್ಜರಿ ಶತಕದ ನೆರವಿನಿಂದ ಭಾರತ ಭರ್ಜರಿ ಜಯ ದಾಖಲಿಸಿತ್ತು. ಇದು ಲಕ್ಷ್ಮಣ್ ಅವರ ಕೊನೆ ಶತಕವಾಗಿದೆ.

* 143 ನಾಟೌಟ್ (ಮೊದಲ ಇನ್ನಿಂಗ್ಸ್) vs ದಕ್ಷಿಣ ಆಫ್ರಿಕಾ, ಕೋಲ್ಕತ್ತಾ, 2010 [ಸ್ಕೋರ್ ಕಾರ್ಡ್]
ಭಾರತದ ಬೃಹತ್ 643/6 ಮೊತ್ತಕ್ಕೆ ಲಕ್ಷ್ಮಣ್ ಕೂಡಾ ಶತಕದ ನೆರವು ನೀಡಿದರು. ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ವೀರೇಂದರ್ ಸೆಹ್ವಾಗ್ ಕೂಡ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ತಂಡವನ್ನು ಭಾರತ 57 ರನ್ ಗಳಿಂದ ಸೋಲಿಸಿತ್ತು.

* 178 (ಮೊದಲ ಇನ್ನಿಂಗ್ಸ್) vs ಆಸ್ಟ್ರೇಲಿಯಾ, ಸಿಡ್ನಿ, 2004 [ಸ್ಕೋರ್ ಕಾರ್ಡ್]
ಸಚಿನ್ ತೆಂಡೂಲ್ಕರ್ 241 ರನ್ ಹಾಗೂ ಲಕ್ಷ್ಮಣ್ ಅವರ 178 ರನ್ ಬಾರಿಸಿ ಆಸೀಸ್ ವಿರುದ್ಧ ಟೀಂ ಇಂಡಿಯಾ 705/7 ಬೃಹತ್ ಮೊತ್ತ ದಾಖಲಿಸಿತ್ತು. ಸ್ಟೀವ್ ವಾ ಅವರ ಕಟ್ಟ ಕಡೆಯ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

Story first published:  Saturday, August 18, 2012, 13:13 [IST]
English summary
VVS Laxman, one of India's most stylish batsmen, quits international cricket on Saturday, in Hyderabad. We look at 10 best Test knocks of Laxman during his illustrious 16-year-old journey with the Indian team. Till date he has played 134 Tests and scored 8,781 runs.
ಅಭಿಪ್ರಾಯ ಬರೆಯಿರಿ