Englishहिन्दीമലയാളംதமிழ்తెలుగు

ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ನಿವೃತ್ತಿ ಘೋಷಣೆಗೆ ಸಿದ್ಧ

Posted by:
Updated: Friday, August 17, 2012, 18:13 [IST]
 

ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ನಿವೃತ್ತಿ ಘೋಷಣೆಗೆ ಸಿದ್ಧ
 

ಬೆಂಗಳೂರು, ಆ.17: ಭಾರತದ ಅಗ್ರಗಣ್ಯ ಟೆಸ್ಟ್ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಅವರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ ಎಂದು ಹೈದರಾಬಾದಿನಿಂದ ಸುದ್ದಿ ಹೊರಬಿದ್ದಿದೆ.

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಸಜ್ಜಾಗಿರುವ ಲಕ್ಷ್ಮಣ್ ಅವರು ಶನಿವಾರ (ಆ.18) ಅಥವಾ ಭಾನುವಾರ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ಸಹಪಾಠಿ ದೀರ್ಘಕಾಲದ ಗೆಳೆಯ ರಾಹುಲ್ ದ್ರಾವಿಡ್ ಅನುಪಸ್ಥಿತಿ ನೋವು ಅನುಭವಿಸುತ್ತಿರುವ ಲಕ್ಷ್ಮಣ್ ಅವರು ನ್ಯೂಜಿಲೆಂಡ್ ಸರಣಿ ನಂತರ ವೃತ್ತಿಪರ ಕ್ರಿಕೆಟ್ ಗೆ ವಿದಾಯ ಹೇಳುವ ಸಾಧ್ಯತೆ ಹೆಚ್ಚಾಗಿದೆ. ರಾಹುಲ್ ದ್ರಾವಿಡ್ ನಿವೃತ್ತಿ ಘೋಷಿಸಿದ ನಂತರವೇ ಲಕ್ಷ್ಮಣ್ ಕೂಡಾ ನಿವೃತ್ತಿ ಹೊಂದುತ್ತಾರೆ ಎಂಬ ಸುದ್ದಿ ಹಬ್ಬಿತ್ತು.

ಆಸ್ಟ್ರೇಲಿಯಾ ಪ್ರವಾಸದ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಲಕ್ಷ್ಮಣ್ ಅವರು ಆಸೀಸ್ ಪ್ರವಾಸದಲ್ಲಿ 8 ಇನ್ನಿಂಗ್ಸ್ ನಲ್ಲಿ ಒಂದೇ ಒಂದು ಅರ್ಧ ಸೆಂಚುರಿಯೊಂದಿಗೆ 155 ರನ್ ಮಾತ್ರ ಬಾರಿಸಿದ್ದರು. ಆಸೀಸ್ ವಿರುದ್ಧ ಭಾರತ 4-0 ಅಂತರದಲ್ಲಿ ಸೋಲು ಕಂಡಿತ್ತು.

ಈಗ ಹೈದರಾಬಾದಿನ ತವರು ನೆಲದಲ್ಲಿ 37 ವರ್ಷದ ಲಕ್ಷ್ಮಣ್ ಅವರು ತಮ್ಮ ಹೊಸ ಇನ್ನಿಂಗ್ ಆಡಲಿದ್ದಾರೆ. 134ನೇ ಟೆಸ್ಟ್ ಆಡಿರುವ ಲಕ್ಷ್ಮಣ್ ಅವರು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆ.23 ರಂದು ಬ್ಯಾಟ್ ಮಾಡಲಿದ್ದಾರೆ. ಆ.31 ರಂದು ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.

ಲಕ್ಷ್ಮಣ್ ಅವರು 134 ಟೆಸ್ಟ್ ಗಳಲ್ಲಿ 8,787 ರನ್ ಗಳನ್ನು ಬಾರಿಸಿದ್ದಾರೆ. 17 ಶತಕ ಹಾಗೂ 56 ಅರ್ಧ ಶತಕಗಳನ್ನು ಚೆಚ್ಚಿದ್ದಾರೆ.

86 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 2338 ರನ್ ಗಳನ್ನು ಸಂಪಾದಿಸಿದ್ದು 6 ಶತಕ ಹಾಗೂ 10 ಅರ್ಧಶತಕಗಳನ್ನು ಗಳಿಸಿದ್ದಾರೆ.

ಬಲಗೈ ಕಲಾತ್ಮಕ ಆಟಗಾರ ಲಕ್ಷ್ಮಣ್ ಅವರು 2001ರಲ್ಲಿ ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ಅಸ್ಟ್ರೇಲಿಯಾ ವಿರುದ್ಧ 281 ರನ್ ಇನ್ನಿಂಗ್ ಅಭಿಮಾನಿಗಳ ಮನದಾಳದಲ್ಲಿ ಅಚ್ಚಳಿಯದೆ ಉಳಿದಿದೆ. 1996ರಲ್ಲಿ ಅಹಮದಾಬಾದಿನಲ್ಲಿ ದಕ್ಷಿಣ ಆಫ್ತಿಅಕ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಜೀವನ ಆರಂಭಿಸಿದ ಲಕ್ಷ್ಮಣ್ ಭಾರತ ಭರವಸೆ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ.

Story first published:  Friday, August 17, 2012, 17:43 [IST]
English summary
India Test batsman VVS Laxman is likely to announce his retirement from international cricket, according to media reports emerging from Hyderabad on Friday(Aug.17). Laxman, is due to play two-match Test series against New Zealand, could be his last. He is likely to make a formal announcement on Saturday.
ಅಭಿಪ್ರಾಯ ಬರೆಯಿರಿ