Englishहिन्दीമലയാളംதமிழ்తెలుగు

ವಾಸಿಯಾಗದ ಹುಚ್ಚು ಬರಿಸಿಕೊಂಡ ರೋಹಿತ್

Posted by:
Published: Friday, August 17, 2012, 14:27 [IST]
 

ವಾಸಿಯಾಗದ ಹುಚ್ಚು  ಬರಿಸಿಕೊಂಡ ರೋಹಿತ್
 

ಮುಂಬೈ, ಆ.17: ಮೈದಾನಕ್ಕಿಳಿದರೆ ಸರಿಯಾಗಿ ಬ್ಯಾಟ್ ಹಿಡಿದು ಕ್ಷಣ ಕಾಲ ನಿಲ್ಲಲು ಆಗದೆ ತಿಣುಕಾಡುತ್ತಿದ್ದ ರೋಹಿತ್, ರಾತ್ರಿ ವೇಳೆ ಮಾತ್ರ ಚೆಂದದ ಬೆಡಗಿ ಜೊತೆ ಚೆಂಡಾಟವಾಡುತ್ತಿದ್ದ ಎಂದು ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿದೆ.

ಕಳಪೆ ಫಾರ್ಮ್ ನಲ್ಲೂ ಬಿಸಿಸಿಐ ಆಯ್ಕೆದಾರರ ಕೃಪೆಗೆ ಒಳಗಾಗಿ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ರೋಹಿತ್ ಯಶಸ್ವಿಯಾಗಿದ್ದಾರೆ. ಈಗ ರೋಹಿತ್ ಗೆ ವಾಸಿಯಾಗದ ಹುಚ್ಚು ಎಂದೇ ಕರೆಯಲ್ಪಡುವ ಪ್ರೇಮ ಜ್ವರಕ್ಕೆ ರೋಹಿತ್ ಶರ್ಮ ತುತ್ತಾಗಿದ್ದಾರೆ ಎಂದು ಮೂಲಗಳು ಹೇಳುತ್ತಿದೆ.

ರೋಹಿತ್ ಶರ್ಮಾ ಆಂಗ್ಲೋ ಇಂಡಿಯನ್ ನಟಿ ಸೋಫಿಯಾ ಹಯಾತ್ ಜೊತೆ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2011ರ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆಡಲು ಹೋಗಿದ್ದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಲೇಟ್ ನೈಟ್ ಪಾರ್ಟಿಯಲ್ಲಿ ಸೋಫಿಯಾ ಜೊತೆ ಅಗತ್ಯಕ್ಕಿಂತ ಹೆಚ್ಚು ಸಲುಗೆಯಿಂದ ಕುಣಿದು ಕುಪ್ಪಳಿಸಿದ್ದರು.

ಬ್ರಿಟಿಷ್  ಮೂಲದ ಬಣ್ಣದ ಚಿಟ್ಟೆ ಸೋಫಿಯಾ ಹಯಾತ್ ಪರಿಚಯ ಮಾಡಿಕೊಂಡ ವಿರಾಟ್ ಕೊಹ್ಲಿ ನಂತರ ರೋಹಿತ್ ಗೆ ಪರಿಚಯಿಸಿದ್ದಾರೆ. ಈಗ ಸೋಫಿಯಾ ಸಂಗ ಬಿಟ್ಟಿರುವ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆದರೆ, ಆಂಗ್ಲೋ ಇಂಡಿಯನ್ ನಟಿ ಸೋಫಿಯಾ ಹಯಾತ್ ಜತೆ ರೋಹಿತ್ ಹೆಚ್ಚು ಸಮಯ ಕಳೆಯುತ್ತಿದ್ದು, ತಮ್ಮ ಪ್ಲೇಬಾಯ್ ಇಮೇಜ್ ಮುಂದುವರೆಸಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಗಾಢವಾಗಿದೆ. ಅದನ್ನು ಅವರಿಬ್ಬರೇ ಬಹಿರಂಗಪಡಿಸಲಿ ನಾನು ಏಕೆ ಹೇಳಲಿ ಎಂದು ಸೋಫಿಯಾ ಗೆಳತಿ ಯೊಬ್ಬರು ಹೇಳಿದ್ದಾರೆ.

ಸೋಫಿಯಾ ಡೈರೀಸ್ ಆಫ್ ಎ ಬಟರ್ ಫ್ಲೈ ಕಾರ್ಯಕ್ರಮದಲ್ಲಿ ಕೊನೆಯ ಸಲ ಕಾಣಿಸಿಕೊಂಡಿದ್ದ ಸೋಫಿಯಾ, ಸೂಪರ್ ಸ್ಟಡ್ ರಿಯಾಲಿಟಿ ಶೋದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾಳೆ. ನಟನೆಗಿಂತ ಮೈಮಾಟಕ್ಕೆ ಹೆಚ್ಚು ಫೇಮಸ್ ಆದ ಸೋಫಿಯಾ ಅಂಗಾಂಗ ನೋಡಿ ರೋಹಿತ್ ಪುಳಕಿತರಾಗಿದ್ದಾರಂತೆ.

ರೋಹಿತ್ ಮತ್ತು ಸೋಫಿಯಾ ಕಳೆದ ಕೆಲ ದಿನಗಳಿಂದ ಮುಂಬೈನ ಕಾಫಿ ಡೇ, ಹೋಟೆಲ್, ಕ್ಯಾಂಡಲ್ ಲೈಟ್ ಡಿನ್ನರ್ ಎಂದು ತಿರುಗುತ್ತಿದ್ದಾರೆ. ಇತ್ತೀಚೆಗೆ ಜುಹೂ ರೆಸ್ಟೋರೆಂಟ್ ಒಂದರಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದ್ದಾರೆ. ಆದರೆ ತಮ್ಮ ಸಂಬಂಧದ ಬಗ್ಗೆ ರೋಹಿತ್ ಮತ್ತು ಸೋಫಿಯಾ ಬಾಯಿ ಬಿಟ್ಟಿಲ್ಲ. ಅವರಿಬ್ಬರ ನಿಕಟ ಮೂಲಗಳು ಮಾತ್ರ ಕ್ರಿಕೆಟಿಗ ಮತ್ತು ನಟಿ ಮಧ್ಯೆ ಕುಚ್ ಕುಚ್ ಇದೆ ಎನ್ನುತ್ತಿದ್ದಾರೆ.

English summary
Rohit Sharma might have lost the confidence of playing innings in the pitch but, post disastrous Sri Lankan tour his innings with British-Indian actress Sofia Hayat is booming. The duo found dating, chatting, roaming in Mumbai Cafes and nightclub parties.
ಅಭಿಪ್ರಾಯ ಬರೆಯಿರಿ