Englishहिन्दीമലയാളംதமிழ்తెలుగు

ಆಲ್ ರೌಂಡರ್ ಬೋಲ್ಟ್ ಗೆ ಆಸೀಸ್ ಗಾಳ

Posted by:
Published: Tuesday, August 14, 2012, 12:00 [IST]
 

ಆಲ್ ರೌಂಡರ್ ಬೋಲ್ಟ್ ಗೆ ಆಸೀಸ್ ಗಾಳ
 

ಬೆಂಗಳೂರು, ಆ.14: ಜಗದೇಕ ವೇಗಿ ಲಂಡನ್ ಒಲಿಂಪಿಕ್ಸ್ 2012ರಲ್ಲಿ ಮೂರು ಚಿನ್ನದ ಪದಕ ಗೆದ್ದಿರುವ ಜಮೈಕಾದ ಉಸೇನ್ ಬೋಲ್ಟ್ ಅವರು ಮುಂಬರುವ ಆಸೀಸ್ ಟಿ20 ಟೂರ್ನಿ 'ಬಿಗ್ ಬಾಶ್ -2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರನ್ನು ಇಷ್ಟಪಡುವ ಉಸೇನ್ ಬೋಲ್ಟ್ ತನ್ನ ಸಹ ಓಟಗಾರ ಯೋಹನ್ ಬ್ಲೇಕ್ ರಂತೆ ಕ್ರಿಕೆಟ್ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಸ್ಪಿನ್ ದಂತಕಥೆ ಶೇನ್ ವಾರ್ನ್ ಅವರು ವೇಗದ ಓಟಗಾರ ಬೋಲ್ಟ್ ಗೆ ಗಾಳ ಹಾಕಿದ್ದಾರೆ. ಕ್ರಿಕೆಟ್ ನಲ್ಲಿ ಬೋಲ್ಟ್ ಗೆ ತುಂಬಾ ಆಸಕ್ತಿ ಇದೆ. ಜಮೈಕಾ ಪರ ಈಗಾಗಲೇ ಪ್ರದರ್ಶನ ಪಂದ್ಯದಲ್ಲಿ ಕ್ರಿಕೆಟ್ ಆಡಿರುವ ಬೋಲ್ಟ್, ಕ್ರಿಸ್ ಗೇಲ್ ರನ್ನು ಬೋಲ್ಡ್ ಮಾಡಿದ್ದರು. ನಂತರ ಗೇಲ್ ಬೌಲಿಂಗ್ ನಲ್ಲಿ ಸಿಕ್ಸ್ ಎತ್ತಿ ಆಲ್ ರೌಂಡರ್ ಆಟ ಮೆರೆದಿದ್ದರು.

ಬಿಗ್ ಬಾಶ್ 2 ವರ್ಷಾಂತ್ಯಕ್ಕೆ ಡಿಸೆಂಬರ್ ನಲ್ಲಿ ಆರಂಭವಾಗಲಿದ್ದು ಜನವರಿ 2013ರಲ್ಲಿ ಮುಕ್ತಾಯವಾಗಲಿದೆ. ಶೇನ್ ವಾರ್ನ್ ತಮ್ಮ ಮೇಲ್ಬೊರ್ನ್ ಸ್ಟಾರ್ಸ್ ತಂಡಕ್ಕೆ ಬೋಲ್ಟ್ ರನ್ನು ಕರೆ ತರಲು ಪ್ರಯತ್ನ ಪಡುತ್ತಿದ್ದಾರೆ.
ಸಿಡ್ನಿ ಪರ ಆಡುವ ಬೋಲ್ಟ್ ಗೆಳೆಯ ಗೇಲ್ ಗೆ ಬೋಲ್ಟ್ ಬೌಲಿಂಗ್ ಮಾಡುವುದು ನೋಡುವ ಬಯಕೆ ಇದೆ ಎಂದು ವಾರ್ನ್ ಹೇಳಿಕೊಂಡಿದ್ದಾರೆ.

"Cats out the bag, we've spoken. Olympic legend @usainbolt would like to have a crack at 20/20 for the Melb stars 2012 Please retweet guys," ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ,

ಆದರೆ, ಬೋಲ್ಟ್ ತನ್ನ ಗೆಳೆಯ ಬ್ಲೇಕ್ ರಂತೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲೇ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಬೋಲ್ಟ್ ಹಾಗೂ ಬ್ಲೇಕ್ ಕ್ರಿಕೆಟ್ ಅಂಗಳಕ್ಕೆ ಇಳಿಯುವ ಸಾಧ್ಯತೆ ನಿಚ್ಚಳವಾಗುತ್ತಿದ್ದು, ಯಾವ ಲೀಗ್ ನಲ್ಲಿ ಆಡುತ್ತಾರೆ ಕಾದು ನೋಡಬೇಕಿದೆ.

ಜಮೈಕಾ ಶ್ರೇಷ್ಠ ಕ್ರೀಡಾಪಟುಗಳ ನಾಡು ಮೈಕಲ್ ಹೋಲ್ಡಿಂಗ್, ಫ್ರಾಂಕ್ ವೋರೆಲ್, ಕರ್ಟ್ನಿ ವಾಲ್ಶ್, ಕ್ರೀಸ್ ಗೇಲ್ ರಂಥ ದೈತ್ಯ ಪ್ರತಿಭೆಗಳನ್ನು ಪ್ರಪಂಚಕ್ಕೆ ಪರಿಚಯಿಸಿದೆ. ಈಗ ಬೋಲ್ಟ್ ಹಾಗೂ ಬ್ಲೇಕ್ ಕ್ರಿಕೆಟ್ ಅಂಗಳಕ್ಕೆ ಇಳಿಯುವ ಕುರುಹು ತೋರಿದ್ದಾರೆ.

English summary
The fastest man on Earth, Usain Bolt, a famous sprinter from Jamaica who made a double at the recently concluded Olympics at London, might rock the cricket field soon as Australian great Shane Warne approached the Jamaican to play for Melbourne Stars in the Big Bash League.
ಅಭಿಪ್ರಾಯ ಬರೆಯಿರಿ