Englishहिन्दीമലയാളംதமிழ்తెలుగు

ಯುವರಾಜನ ಬ್ರಾಂಡ್ ಮೌಲ್ಯ ಎತ್ತರೆತ್ತರಕ್ಕೆ

Posted by:
Published: Monday, August 13, 2012, 16:14 [IST]
 

ಯುವರಾಜನ ಬ್ರಾಂಡ್ ಮೌಲ್ಯ ಎತ್ತರೆತ್ತರಕ್ಕೆ
 

ನವದೆಹಲಿ, ಆ.13: ಐಸಿಐ ವಿಶ್ವ ಟಿ 20 ತಂಡಕ್ಕೆ ಯುವರಾಜ್ ಸಿಂಗ್ ಆಯ್ಕೆಯಾದ ಬೆನ್ನಲ್ಲೇ ಅವರ ಮಾರುಕಟ್ಟೆ ಮೌಲ್ಯ ಭರ್ಜರಿಯಾಗಿ ಏರಿಕೆ ಕಂಡಿದೆ. ಭಾರತದ ಭರವಸೆಯ ಸ್ಫೋಟಕ ಬ್ಯಾಟ್ಸ್ ಮನ್ ಯುವಿ ಪ್ರಮುಖ ಕಂಪನಿಗಳ ರಾಯಭಾರಿಯಾಗಿ ಮತ್ತೊಮ್ಮೆ ಮೆರೆಯುವ ದಿನಗಳು ದೂರವಿಲ್ಲ.

ಪ್ರಾಣಕಾರಕ ಕ್ಯಾನ್ಸರ್ ಪೀಡೆಯಿಂದ ಹೊರ ಬಂದಿರುವ ಯುವರಾಜ್ ಸಿಂಗ್ ಯುವಜನತೆಗೆ ಮೈದಾನದ ಹೊರಗೂ ಒಳಗೂ ಪ್ರೇರಕ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ.

ಯುವರಾಜ್ ಸಿಂಗ್ ಅವರು 'ಫಿಟ್ ಅಂಡ್ ಫೈನ್' ಎಂದು ವೈದ್ಯರು ಹೇಳಿದ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ಟಿ20 ತಂಡಕ್ಕೆ ಯುವರಾಜ್ ಸಿಂಗ್ ರನ್ನೇ ಮೊದಲಿಗೆ ಆಯ್ಕೆ ಮಾಡಿದರಂತೆ.

ಯುವರಾಜ್ ಸಿಂಗ್ ಅವರ ಎಡೆಬಿಡದ ಅಭ್ಯಾಸದ ನಡುವೆ ಅವರಿಗೆ ಅನೇಕ ಜಾಹೀರಾತುಗಳಲ್ಲಿ ನಟಿಸುವ ಹಾಗೂ ಕಂಪನಿಗಳ ಉತ್ಪನ್ನಗಳಿಗೆ ರಾಯಭಾರಿಯಾಗುವ ಆಫರ್ ಗಳು ಹರಿದು ಬರುತ್ತಿದೆ. ಕನಿಷ್ಠ ಪಕ್ಷ ಇನ್ನು 6 ತಿಂಗಳು ಯುವರಾಜ್ ಮನೆ ಮುಂದೆ ಕಂಪನಿಗಳು ಸಾಲು ಸಾಲಾಗಿ ನಿಲ್ಲುವ ಲಕ್ಷಣಗಳು ಕಂಡು ಬಂದಿದೆ ಎಂದು ಯುವರಾಜ್ ಸಿಂಗ್ ಅವರ ಜಾಹೀರಾತು ಒಪ್ಪಂದಗಳನ್ನು ನಿರ್ವಹಿಸುವ ಕಂಪನಿಯ ಸಿಇಒ ಬಂಟಿ ಸಜ್ದೇಶ್ ಹೇಳಿದ್ದಾರೆ.

ಯುವರಾಜ್ ಅವರ ಆಯ್ಕೆ ಹಾಗೂ ಆದ್ಯತೆ ಮೇರೆಗೆ ಕಂಪನಿಗಳೊಡನೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ನಿರೀಕ್ಷೆಯಂತೆ ಯುವರಾಜ್ ಸಿಂಗ್ ಗೆ ಸಿಗುವ ಸಂಭಾವನೆ ದ್ವಿಗುಣಗೊಳ್ಳಲಿದೆ. ಯುವರಾಜ್ ಸಿಂಗ್ ಕಡೆಯಿಂದ ಯಾವುದೇ ಬೇಡಿಕೆ ಬಂದಿಲ್ಲವಾದರೂ ಕಂಪನಿಗಳು ಅವರ ಬ್ರಾಂಡ್ ಮೌಲ್ಯವನ್ನು ದಿಢೀರ್ ಏರಿಕೆ ಮಾಡುತ್ತಿಚೆ ಎಂದು ಸಜ್ಡೇಶ್ ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋಟಿಗಟ್ಟಲೇ ಹಣದ ಹೊಳೆ: ಸಜ್ದೇಶ್ ಹೇಳಿಕೆ ಪ್ರಕಾರ ಯುವರಾಜ್ ಸಿಂಗ್ ಅವರು ಸದ್ಯ 5 ಪ್ರಮುಖ ಬ್ರಾಂಡ್ ಗಳೊಡನೆ ಒಪ್ಪಂದ ಮಾಡಿಕೊಂಡಿದ್ದು 5 ಕೋಟಿ ರು ಪ್ರತಿ ವರ್ಷದಂತೆ ಪಡೆಯುತ್ತಿದ್ದಾರೆ. ಈಗ ಈ ಮೊತ್ತ ದ್ವಿಗುಣಗೊಳ್ಳುವ ಸಾಧ್ಯತೆಯಿದೆ.

ಅನುಕಂಪದ ಅಲೆಯ ಮೇಲೆ ತೇಲುವುದೆಲ್ಲ ಹಾಟ್ ಆಗಿರುತ್ತದೆ ಎಂದು jwt ಜಾಹೀರಾತು ಕಂಪನಿಯ ಉಪಾಧ್ಯಕ್ಷ ನವಿನೊಲ್ ಚಟರ್ಜಿ ಅಭಿಪ್ರಾಯಪಟ್ಟಿದ್ದಾರೆ. ಕ್ಯಾನ್ಸರ್ ಕರಾಳ ಕನಸಿನ ನಂತರ ಹೊಸ ಜೀವನ ಆರಂಭಿಸಿರುವ ಯುವರಾಜ್ ಸಿಂಗ್ ಹೋರಾಟಕ್ಕೆ ಸೂಕ್ತ ಮನ್ನಣೆ ಸಿಗುತ್ತಿದ್ದು, ಯುವರಾಜ್ ಸಿಂಗ್ ಮೌಲ್ಯ ವ್ಯಕ್ತಿಯಾಗಿ, ಬ್ರಾಂಡ್ ಆಗಿ ಬೆಳೆಯುತ್ತಿದೆ.

ಕೈಲಿರುವ ಬ್ರಾಂಡ್ ಗಳು: ಮೈಕ್ರೋಸಾಫ್ಟ್ ಸಂಸ್ಥೆ ತನ್ನ Xbox 360 ವಿಡಿಯೋ ಗೇಮ್ಸ್ ಕನ್ಸೋಲ್ ಗೆ 2006ರಿಂದ ಯುವರಾಜ್ ಸಿಂಗ್ ರನ್ನೇ ರಾಯಭಾರಿಯಾಗಿ ಉಳಿಸಿಕೊಂಡಿದೆ ಉಳಿದಂತೆ ಪೆಪ್ಸಿ, ಹೀರೋ ಹೊಂಡಾ, ಎಸ್ ಬಿಐ ಕಾರ್ಡ್ಸ್, ಸೀಗ್ರಾಮ್, ಟ್ರೆಂಟ್, ಮಾರಿಕೊ ಮತ್ತು ರಿಬಾಕ್ ಸಂಸ್ಥೆ ಜಾಹೀರಾತುಗಳಲ್ಲಿ ಯುವಿ ಕಾಣಿಸಿಕೊಂಡಿದ್ದಾರೆ.

English summary
Ever since he was picked for the final squad for ICC World T20, India's flamboyant batsman has been on cloud nine, as he has been highly successful in making a comeback to the national side after recovering from the dreaded disease.
ಅಭಿಪ್ರಾಯ ಬರೆಯಿರಿ