Englishहिन्दीമലയാളംதமிழ்తెలుగు

ಟಿ20 ಕನಸು ಭಗ್ನ, ವಿನಯ್ ಸಕತ್ ಬೇಸರ

Posted by:
Published: Friday, August 10, 2012, 22:19 [IST]
 

ಟಿ20 ಕನಸು ಭಗ್ನ, ವಿನಯ್ ಸಕತ್ ಬೇಸರ
 

ಬೆಂಗಳೂರು, ಅ.10: ಫಿಟ್ ನೆಸ್ ನಲ್ಲಿ ಓಕೆ ಆದರೂ, ಆಯ್ಕೆದಾರರ ಕೃಪೆ ಸಿಗದೆ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಅವಕಾಶ ವಂಚಿತರಾಗಿದ್ದಕ್ಕೆ ವಿನಯ್ ಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ (ಆ.10) ನ್ಯೂಜಿಲೆಂಡ್ ಟೆಸ್ಟ್ ಸರಣಿ ಹಾಗೂ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ಹೊರ ಬೀಳುತ್ತಿದ್ದಂತೆ ದಾವಣಗೆರೆ ಏಕ್ಸ್ ಪ್ರೆಸ್ ವಿನಯ್ ಅವರನ್ನು ದಟ್ಸ್ ಕ್ರಿಕೆಟ್ ಸಂಪರ್ಕಿಸಿತು.

ಸಹಜವಾಗಿ ನನಗೆ ಬೇಸರವಾಗಿದೆ. ಆದರೆ, ಇದೇ ಕೊನೆಯಲ್ಲ. ನಾನು ಮತ್ತೆ ತಂಡಕ್ಕೆ ಮರಳುತ್ತೇನೆ ಎಂಬ ವಿಶ್ವಾಸವಿದೆ ಎಂದು ವಿನಯ್ ಹೇಳಿದರು.

ಕೆಎಸ್ ಸಿಎ XI ಹಾಗೂ ಬಾಂಗ್ಲಾದೇಶ ಎ ತಂಡದ ನಡುವಿನ ನಾಲ್ಕು ದಿನಗಳ ಪಂದ್ಯಗಳಲ್ಲಿ ನಾನು ಆಡಿ ನನ್ನ ದೈಹಿಕ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೇನೆ. ಆದರೆ, ಫಿಟ್ ನೆಸ್ ಸರಿ ಇದ್ದರೂ ತಂಡಕ್ಕೆ ಆಯ್ಕೆಯಾಗದಿರುವುದು ತುಂಬಾ ಬೇಸರ ತಂದಿದೆ ಎಂದು ವಿನಯ್ ದುಃಖ ವ್ಯಕ್ತಪಡಿಸಿದರು.

ನ್ಯೂಜಿಲೆಂಡ್ ವಿರುದ್ಧ ವಿನಯ್ : ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ. ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವ ಭಾರತ ಎ ತಂಡಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ.

ಭಾರತದ ಪರ ಆಡುವುದು ಯಾವತ್ತಿದ್ದರೂ ಸಂತೋಷದ ವಿಷಯ. ಯಾವ ಸ್ತರದಲ್ಲಾದರೂ ಸರಿಯೇ ನಾನು ಉತ್ತಮ ಪ್ರದರ್ಶನ ನೀಡುತ್ತೇನೆ ಎಂದರು.

ಭಾರತ ಹಾಗೂ ನ್ಯೂಜಿಲೆಂಡ್ ತಂಡ 2 ಟೆಸ್ಟ್ ಹಾಗೂ ಟಿ20 ಪಂದ್ಯ ಆಡಲಿದೆ. ಈ ಸರಣಿ ಆ.23 ರಂದು ಹೈದರಾಬಾದಿನಲ್ಲಿ ಆರಂಭವಾಗಲಿದೆ.

ದಾವಣಗೆರೆಯ 28 ವರ್ಷದ ವೇಗಿ ವಿನಯ್ ಕುಮಾರ್ ಅವರು ನ್ಯೂಜಿಲೆಂಡ್ ಸರಣಿ ಹೊತ್ತಿಗೆ ತಯಾರಾಗುವ ವಿಶ್ವಾಸ ಹೊಂದಿದ್ದರು.

ಈ ವರೆಗೂ ವಿನಯ್ ಭಾರತ ಪರ 1 ಟೆಸ್ಟ್ ಹಾಗೂ 22 ಏಕದಿನ ಪಂದ್ಯಗಳನ್ನಾಡಿದ್ದಾರೆ. 22 ಏಕದಿನ ಕ್ರಿಕೆಟ್ ವಿಕೆಟ್ ಹಾಗೂ ಟೆಸ್ಟ್ ನಲ್ಲಿ 1 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಸರಣಿ ನಂತರ ಟೆಸ್ಟ್ ಪಂದ್ಯವನ್ನಾಡಿಲ್ಲ.

ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲಿ ಬೌಲ್ ಮಾಡಬೇಕಿದ್ದ ವಿನಯ್ ಗೆ ಈಗ ನ್ಯೂಜಿಲೆಂಡ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಚೆಂಡು ಎಸೆಯುವ ಅವಕಾಶ ಸಿಕ್ಕಿದೆ. ಉತ್ತಮ ಪ್ರದರ್ಶನ ಮೂಲಕ ಟೀಂ ಇಂಡಿಯಾ ಸೇರುವ ವಿನಯ್ ನಿರೀಕ್ಷೆ ನಿಜವಾಗಲಿ ಎಂದು ದಟ್ಸ್ ಕ್ರಿಕೆಟ್ ಹಾರೈಸುತ್ತದೆ.

English summary
Fit-again paceman Vinay Kumar is disappointed on missing out on India squads for New Zealand series and the ICC World Twenty20 2012. When ThatsCricket contacted the bowler on Friday, he expressed his disappointment at missing out. "Obviously, I am disappointed to miss out," he said.
ಅಭಿಪ್ರಾಯ ಬರೆಯಿರಿ