Englishहिन्दीമലയാളംதமிழ்తెలుగు

ಟಿ20 ವಿಶ್ವಕಪ್ ತಂಡಕ್ಕೆ ಯುವರಾಜ್ ಸಿಂಗ್ ಆಯ್ಕೆ

Posted by:
Updated: Friday, August 10, 2012, 15:54 [IST]
 

 ಟಿ20 ವಿಶ್ವಕಪ್ ತಂಡಕ್ಕೆ ಯುವರಾಜ್ ಸಿಂಗ್ ಆಯ್ಕೆ
 

ಮುಂಬೈ, ಆ.10: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸದಸ್ಯರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಆಯ್ಕೆ ಮಾಡಿದ್ದು ತಂಡಕ್ಕೆ ಹೆಚ್ಚಿನ ಬಲ ತಂದಿದೆ. ಇದೇ ರೀತಿ ಐಸಿಸಿ ಟಿ20 ವಿಶ್ವಕಪ್ ತಂಡಕ್ಕೆ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಅವರನ್ನು ಆಯ್ಕೆ ಮಾಡಿ ಆಚ್ಚರಿ ಮೂಡಿಸಲಾಗಿದೆ.

ಕ್ರಿಸ್ ಶ್ರೀಕಾಂತ್ ಅವರ ನೇತೃತ್ವದ ಆಯ್ಕೆ ಸಮಿತಿ ಮುಂಬೈನಲ್ಲಿ ಶುಕ್ರವಾರ (ಆ.10) ಸಭೆ ಸೇರಿ ನ್ಯೂಜಿಲೆಂಡ್ ಟೆಸ್ಟ್ ಸರಣಿ ಹಾಗೂ ಐಸಿಸಿ ವಿಶ್ವಕಪ್ ಟಿ20 ಟೂನಿಗೆ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಯುವರಾಜ್ ಜೊತೆಗೆ ಹರ್ಭಜನ್ ಸಿಂಗ್, ಲಕ್ಷ್ಮಿಪತಿ ಬಾಲಾಜಿ ಹಾಗೂ ಪಿಯೂಶ್ ಚಾವ್ಲಾ ಟಿ20 ತಂಡಕ್ಕೆ ಮರಳಿದ್ದಾರೆ.

2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆಡಿದ್ದ ಯುವರಾಜ್ ಸಿಂಗ್ ನಂತರ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು. ಅಮೆರಿಕಕ್ಕೆ ತೆರಳಿ ಕಿಮೋಥೆರಪಿ ಪಡೆದು ಕ್ಯಾನ್ಸರ್ ರೋಗದಿಂದ ಗುಣಮುಖರಾದ ಮೇಲೆ ಇತ್ತೀಚೆಗೆ ಬೆಂಗಳೂರಿನಲ್ಲಿ 19 ವರ್ಷ ವಯೋಮಿತಿಯೊಳಗಿನ ವಿಶ್ವಕಪ್ ಆಟಗಾರರ ಜೊತೆ ಕ್ರಿಕೆಟ್ ಪಂದ್ಯವಾಡಿದ್ದರು.

30 ವರ್ಷದ ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ಅವರನ್ನು ಆಯ್ಕೆ ಮಾಡುವ ಮೊದಲು ಬಿಸಿಸಿಐ ವೈದ್ಯರಿಂದ ಪರೀಕ್ಷೆ ನಡೆಸಿ, ಫಿಟ್ನೆಸ್ ಪ್ರಮಾಣ ಪತ್ರ ಪಡೆಯಲಾಗಿತ್ತು. ಯುವರಾಜ್ ಸಿಂಗ್ ಅವರ ಆಯ್ಕೆ ನಿರೀಕ್ಷೆ ಹೊತ್ತಿದ್ದ ಮಾಧ್ಯಮ ಪ್ರತಿನಿಧಿಗಳು ಯುವರಾಜ್ ಸಿಂಗ್ ಅವರ ಮನೆ ಮುಂದೆ ಜಮಾಯಿಸಿದ್ದರು.

ಪ್ರವಾಸಿ ನ್ಯೂಜಿಲೆಂಡ್ ಟೆಸ್ಟ್ ಸರಣಿ ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆ.23 ರಿಂದ ಆರಂಭವಾಗಲಿದೆ. ಎರಡನೇ ಟೆಸ್ಟ್ ಬೆಂಗಳೂರಿನಲ್ಲಿ ಆ.31ರಂದು ನಡೆಯಲಿದೆ.

ವಿಶ್ವಕಪ್ ಟಿ20 ಪಂದ್ಯ ಶ್ರೀಲಂಕಾದಲ್ಲಿ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 7 ರ ತನಕ ನಡೆಯಲಿದೆ. 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಅನ್ನು ಧೋನಿ ನೇತೃತ್ವದ ಟೀಂ ಇಂಡಿಯಾ ಗೆದ್ದುಕೊಂಡಿತ್ತು.

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಆಯ್ಕೆಯಾದ ಭಾರತ ತಂಡ ಇಂತಿದೆ:

* ಎಂಎಸ್ ಧೋನಿ (ನಾಯಕ),
* ವಿರೇಂದ್ರ ಸೆಹ್ವಾಗ್,
* ಗೌತಮ್ ಗಂಭೀರ್,
* ಸಚಿನ್ ತೆಂಡೂಲ್ಕರ್,
* ವಿವಿಎಸ್ ಲಕ್ಷ್ಮಣ್,
* ಚೇತೇಶ್ವರ ಪೂಜಾರಾ,
* ವಿರಾಟ್ ಕೊಹ್ಲಿ,
* ಆರ್ ಅಶ್ವಿನ್,
* ಜಹೀರ್ ಖಾನ್,
* ಪ್ರಜ್ಞಾನ್ ಓಜಾ,
* ಉಮೇಶ್ ಯಾದವ್,
* ಅಜಿಂಕ್ಯ ರಹಾನೆ,
* ಪಿಯೂಶ್ ಚಾವ್ಲಾ,
* ಇಶಾಂತ್ ಶರ್ಮ,
* ಸುರೇಶ್ ರೈನಾ

ಐಸಿಸಿ ಟಿ20 ವಿಶ್ವಕಪ್ ಗೆ ತಂಡ:
* ಎಂಎಸ್ ಧೋನಿ(ನಾಯಕ),
* ವಿರೇಂದ್ರ ಸೆಹ್ವಾಗ್,
* ಗೌತಮ್ ಗಂಭೀರ್,
* ಸುರೇಶ್ ರೈನಾ,
* ವಿರಾಟ್ ಕೊಹ್ಲಿ
* ಯುವರಾಜ್ ಸಿಂಗ್,
* ಇರ್ಫಾನ್ ಪಠಾಣ್,
* ಆರ್ ಅಶ್ವಿನ್,
* ಜಹೀರ್ ಖಾನ್,
* ಎಲ್ ಬಾಲಾಜಿ,
* ಅಶೋಕ್ ದಿಂಡಾ,
* ರೋಹಿತ್ ಶರ್ಮ,
* ಪಿಯೂಶ್ ಚಾವ್ಲಾ,
* ಹರ್ಭಜನ್ ಸಿಂಗ್,
* ಮನೋಜ್ ತಿವಾರಿ

Story first published:  Friday, August 10, 2012, 15:11 [IST]
English summary
The BCCI selectors picked the Test squad for the Test series against New Zealandand team for ICC T20 World cup in Mumbai on Aug 10. VVS Laxman and Sachin Tendulkar included in Test Squad. Yuvraj and Bhajji come back to T20 Squad.
ಅಭಿಪ್ರಾಯ ಬರೆಯಿರಿ