Englishहिन्दीമലയാളംதமிழ்తెలుగు

ರೋಹಿತ್ ಶರ್ಮ ವಿಶಿಷ್ಟ ಸಾಧನೆ ಬಹು ಪರಾಕ್

Posted by:
Published: Sunday, August 5, 2012, 16:03 [IST]
 

ರೋಹಿತ್ ಶರ್ಮ ವಿಶಿಷ್ಟ ಸಾಧನೆ ಬಹು ಪರಾಕ್
 

ಪಲ್ಲಕೆಲೆ, ಆ.5: ನಿರೀಕ್ಷೆಯಂತೆ ಭಾರತ ತಂಡ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು 4-1 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಸರಣಿಯಲ್ಲಿ ಭಾರತದ ಪ್ರಮುಖ ಬ್ಯಾಟ್ಸ್ ಮನ್ ಗಳು ವಿಜೃಂಭಿಸಿದರೆ, ರೋಹಿತ್ ಶರ್ಮ ಮಾತ್ರ ಕಳಪೆ ಸಾಧನೆ ನಡುವೆಯೂ ಅವಕಾಶದ ಮೇಲೆ ಅವಕಾಶ ಗಿಟ್ಟಿಸಿಕೊಂಡ ಸಾಧನೆ ಮೆರೆದರು.

# ಐದು ಇನ್ನಿಂಗ್ಸ್ ನಲ್ಲಿ ಕೇವಲ 2.60 ರನ್ ಸರಾಸರಿಯಂತೆ 13 ರನ್ ಗಳಿಸಿದ ರೋಹಿತ್ ಶರ್ಮ, ಅತ್ಯಂತ ಕಳಪೆ ಸಾಧನೆ ಮಾಡಿದ ಬ್ಯಾಟ್ಸ್ ಮನ್ ಎಂದ ಸಾಧನೆ ಮೆರೆದರು. 5 ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಕ್ರಮಾಂಕ 1 ರಿಂದ 7 ರೊಳಗಿನ ಬ್ಯಾಟ್ಸ್ ಮನ್ ರೊಬ್ಬರು ತೋರಿದ ಕಳಪೆ ಪ್ರದರ್ಶನ ಇದಾಗಿದೆ.

# ಆದರೆ, ರೋಹಿತ್ ಶರ್ಮ ಅತ್ಯಂತ ಕಳಪೆ ಪ್ರದರ್ಶಿತ ಆಟಗಾರ ಎಂಬ ಕುಖ್ಯಾತಿಯಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಶ್ರೀಲಂಕಾದ ರೊಮೆಶ್ ಕುಲವಿತರಣ 1996-97 ಏಷ್ಯಾಕಪ್ ನಲ್ಲಿ 5 ಇನ್ನಿಂಗ್ಸ್ ನಲ್ಲಿ ಕೇವಲ 7 ರನ್ ಗಳಿಸಿದ್ದರು.

#ಶ್ರೀಲಂಕಾ ವಿರುದ್ಧ 2000 ರನ್ ಪೂರೈಸಿದ ಎರಡನೇ ಭಾರತೀಯ ಹಾಗೂ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ನಾಯಕ ಧೋನಿ ಪಾತ್ರರಾದರು. ಲಂಕಾ ವಿರುದ್ಧ ಸಚಿನ್ ತೆಂಡೂಲ್ಕರ್(3113 ರನ್), ಇಂಜಾಮಾಮ್ ಉಲ್ ಹಕ್ (2265), ಸಯೀದ್ ಅನ್ವರ್ (2198) ರನ್ ಗಳಿಸಿದ್ದಾರೆ. ಎಂಎಸ್ ಧೋನಿ (2041 ರನ್) ಈ ಪಟ್ಟಿಗೆ ಸೇರಿದ್ದಾರೆ.

#ಪಲ್ಲಕೆಲೆಯಲ್ಲಿ ಧೋನಿ ಶ್ರೀಲಂಕಾ ವಿರುದ್ಧ 16ನೇ ಅರ್ಧಶತಕ ಹಾಗೂ ಒಟ್ಟಾರೆ 46ನೇ ಅರ್ಧಶತಕ ದಾಖಲಿಸಿದರು.
# ಶ್ರೀಲಂಕಾ ವಿರುದ್ಧ ಧೋನಿ 55 ಏಕದಿನ ಪಂದ್ಯಗಳಲ್ಲಿ 2041ರನ್ ಚೆಚ್ಚಿದ್ದು, 2 ಶತಕ, 16 ಅರ್ಧಶತಕದೊಂದಿಗೆ 60.02ರನ್ ಸರಾಸರಿ ಹೊಂದಿದ್ದಾರೆ.

English summary
India completed a 4-1 demolition of Sri Lanka in the fifth and final One Day International of the series here with a 20-run win. Here are the statistical highlights of the match.
ಅಭಿಪ್ರಾಯ ಬರೆಯಿರಿ