Englishहिन्दीമലയാളംதமிழ்తెలుగు

ಪಲ್ಲೆಕೆಲೆಯಲ್ಲಿ ಗೆದ್ದರೆ ಭಾರತ ವಿಶ್ವದ ನಂ.2

Posted by:
Updated: Tuesday, August 7, 2012, 17:22 [IST]
 

ಪಲ್ಲೆಕೆಲೆಯಲ್ಲಿ ಗೆದ್ದರೆ ಭಾರತ ವಿಶ್ವದ ನಂ.2
 

ಪಲ್ಲೆಕೆಲೆ, ಆ.3: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಈಗಾಗಲೇ 3-1 ರಲ್ಲಿ ಗೆದ್ದಿರುವ ಭಾರತ ತಂಡ ಶನಿವಾರ(ಅ.4) ಐದನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನಾಡಲಿದೆ. ಶನಿವಾರದ ಪಂದ್ಯದಲ್ಲಿ ರೋಹಿತ್ ಶರ್ಮ ಬದಲಿಗೆ ಯಾರು ಆಡಲಿದ್ದಾರೆ. ನಾಳಿನ ಪಂದ್ಯ ಗೆದ್ದರೆ ಭಾರತ ಐಸಿಸಿ ಶ್ರೇಯಾಂಕ ಏರಿಕೆಯಾಗುತ್ತದೆಯೇ? ಎಂಬುದು ಮಾತ್ರ ಅಭಿಮಾನಿಗಳಿಗೆ ಕುತೂಹಲ ಹುಟ್ಟಿಸಿದೆ.

ಕೊನೆಯ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಮಣಿಸಿದರೆ ಐಸಿಐ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಬಹುದಾಗಿದೆ. ಸರಣಿಯನ್ನು 4-1 ರಿಂದ ಸೋತರೆ ಶ್ರೀಲಂಕಾ ತಂಡ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿಯಲಿದೆ.

ಕಳೆದ 9 ಪಂದ್ಯಗಳಲ್ಲಿ 6 ಪಂದ್ಯ ಗೆದ್ದಿರುವ ಭಾರತ ಕೊನೆ ಪಂದ್ಯವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ. 2008 ಹಾಗೂ 2009 ರಲ್ಲಿ ಇದೇ ರೀತಿ ಸರಣಿಯ ಕೊನೆ ಪಂದ್ಯಕ್ಕೂ ಮುನ್ನವೇ ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿತ್ತು.

ಸರಣಿ ಸೋತರೂ ಲಂಕಾ ಪರ ಉಪುಲ್ ತರಂಗಾ, ದಿನೇಶ್ ಚಂಡಿಮಾಲ್, ತಿಲಕರತ್ನೆ ದಿಲ್ಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕುಮಾರ್ ಸಂಗಕ್ಕಾರ ಗಾಯಾಳುವಾಗಿದ್ದು ಮಹೇಲ ಜಯವರ್ದನೆ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಗೆ ಎದುರು ಲಂಕನ್ ವೇಗದ ಬೌಲರ್ ಗಳು ತತ್ತರಿಸಿದ್ದಾರೆ. ಲಸಿಂಗ್ ಮಾಲಿಂಗ, ರಂಗಣ ಹೇರಾತ್ ದುಬಾರಿಯಾಗಿದ್ದಾರೆ, ಮ್ಯಾಥ್ಯೂಸ್ ಹಾಗೂ ಪೆರೆರಾ ಉತ್ತಮ ಪ್ರದರ್ಶನ ನೀಡಿದ್ದಾರೆ.

ಬದಲಾವಣೆ: ನಾಳಿನ ಪಂದ್ಯಕ್ಕೆ ಹೆರಾತ್ ಬದಲು ಸಚಿತ್ರಾ ಸೇನಾನಾಯಕೆ ಆಡಬಹುದಾಗಿದೆ. ಸತತ ವೈಫಲ್ಯ ಕಂಡು ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿರುವ ರೋಹಿತ್ ಶರ್ಮ ಬದಲಿಗೆ ಅಜಿಂಕ್ಯಾ ರಹಾನೆ ಆಡಿಸುವ ಸಾಧ್ಯತೆ ಹೆಚ್ಚಿದೆ. ಡಿ.11, 2011 ರ ನಂತರ ಮೊದಲ ಬಾರಿಗೆ ಕಣಕ್ಕಿಳಿಯಲು ರಹಾನೆ ಕಾತುರರಾಗಿದ್ದಾರೆ.

ಏಕದಿನ ಸರಣಿಯಲ್ಲಿ 2.25 ರನ್ ಸರಾಸರಿ ಹೊಂದಿರುವ ರೋಹಿತ್ ಶರ್ಮ ಅವರಿಗೆ ಸತತ ವೈಫಲ್ಯದ ನಡುವೆಯೂ ಅವಕಾಶ ನೀಡುತ್ತಿರುವ ಬಗ್ಗೆ ಸಾರ್ವಜನಿಕ ವಲಯ ಭಾರಿ ಟೀಕೆ ಎದುರಾಗಿದೆ.

ತಂಡಗಳು;
ಭಾರತ: ಎಂಎಸ್ ಧೋನಿ (ನಾಯಕ), ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಇರ್ಫಾನ್ ಪಠಾಣ್, ಆರ್ ಅಶ್ವಿನ್, ಜಹೀರ್ ಖಾನ್, ಉಮೇಶ್ ಯಾದವ್, ಅಜಿಂಕ್ಯ ರಹಾನೆ, ಮನೋಜ್ ತಿವಾರಿ, ರಾಹುಲ್ ಶರ್ಮ, ಅಶೋಕ್ ದಿಂಡಾ, ಪ್ರಜ್ಞಾನ್ ಓಜಾ

ಶ್ರೀಲಂಕಾ: ಮಹೇಲ ಜಯವರ್ದನೆ(ನಾಯಕ), ಏಂಜೆಲೊ ಮ್ಯಾಥ್ಯೂಸ್, ತಿಲಕರತ್ನೆ ದಿಲ್ಶನ್, ಕುಮಾರ್ ಸಂಗಕ್ಕಾರ, ಉಪುಲ್ ತರಂಗ, ದಿನೇಶ್ ಚಂಡಿಮಾಲ್, ಥಿಸಾರಾ ಪರೆರಾ, ಲಹಿರು ತಿರುಮನ್ನೆ, ಲಸಿತ್ ಮಾಲಿಂಗ, ಚಮಾರ ಕಪುಗೆಡೆರಾ, ರಂಗಣ ಹೆರಾತ್, ಸಚಿತ್ರಾ ಸೇನಾನಾಯಕೆ, ಜೀವನ್ ಮೆಂಡಿಸ್, ಇಸುರು ಉದಾನಾ, ನುವಾನ್ ಪ್ರದೀಪ್

Story first published:  Friday, August 3, 2012, 16:30 [IST]
English summary
Having won the series 3-1, India now eye No 2 spot as a win at Pallekele in the fifth and final ODI against Sri Lanka on Saturday, would ensure a second spot in ICC Rankings.
ಅಭಿಪ್ರಾಯ ಬರೆಯಿರಿ