Englishहिन्दीമലയാളംதமிழ்తెలుగు

ಸಚಿನ್ ಹಿಂದಿಕ್ಕಿದ ಧೋನಿ ವಿಶ್ವದ ಶ್ರೀಮಂತ ಕ್ರಿಕೆಟರ್

Posted by:
Updated: Monday, September 24, 2012, 10:02 [IST]
 

ಸಚಿನ್ ಹಿಂದಿಕ್ಕಿದ ಧೋನಿ ವಿಶ್ವದ ಶ್ರೀಮಂತ ಕ್ರಿಕೆಟರ್
 

ಬೆಂಗಳೂರು, ಆ.1: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಯಶಸ್ಸಿನ ಜೊತೆಗೆ ಲಕ್ಷ್ಮಿ ಕಟಾಕ್ಷವೂ ಒಲಿದಿದೆ. ಜನಪ್ರಿಯ ಮ್ಯಾಗಜೀನ್ ಫೋರ್ಬ್ ಬಿಡುಗಡೆ ಮಾಡಿರುವ ಇತ್ತೀಚಿನ ಪಟ್ಟಿಯಲ್ಲಿ ಎಂಎಸ್ ಧೋನಿ ಅತ್ಯಂತ ಶ್ರೀಮಂತ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರನ್ನು ಹಿಂದಿಕ್ಕಿರುವ ಧೋನಿ ವಿಶ್ವದ ಶ್ರೀಮಂತ ಕ್ರಿಕೆಟರ್ ಎನಿಸಿದ್ದಾರೆ. ಇದರ ಜೊತೆಗೆ ಭಾರತ ತಂಡ 6 ಕ್ರಿಕೆಟರ್ ಗಳು ಶ್ರೀಮಂತರ ಕ್ರಿಕೆಟರ್ ಗಳ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ಎಂಎಸ್ ಧೋನಿ 2 ಕೋಟಿ 65 ಲಕ್ಷ ಯುಎಸ್ ಡಾಲರ್ ಸಂಪಾದಿಸಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದಿದ್ದಾರೆ. ಈ ಮೊತ್ತದಲ್ಲಿ 2 ಕೋಟಿ 30 ಲಕ್ಷ ಡಾಲರ್ ಜಾಹೀರಾತುಗಳಿಂದ ಬಂದಿದ್ದಾಗಿದೆ. ಉಳಿದ 35 ಲಕ್ಷ ಡಾಲರ್ ಗಳನ್ನು ಕ್ರಿಕೆಟ್ ವೃತ್ತಿಯಿಂದ ಗಳಿಸಿದ್ದಾರೆ.

ಧೋನಿ ಅವರ 2 ಕೋಟಿ 30 ಲಕ್ಷ ರು ಜಾಹೀರಾತು ಗಳಿಕೆ ಮೊತ್ತ ಕೂಡಾ ಕ್ರಿಕೆಟರ್ ಗಳ ಪೈಕಿ ಅತ್ಯಂತ ಹೆಚ್ಚಿನ ಮೊತ್ತವಾಗಿ ದಾಖಲಾಗಿದೆ. ತೆಂಡೂಲ್ಕರ್ ಅವರು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 1 ಕೋಟಿ 86 ಲಕ್ಷ ಯುಎಸ್ ಡಾಲರ್ ಗಳಿಸಿದ್ದಾರೆ. ಇದರಲ್ಲಿ 1 ಕೋಟಿ 65 ಲಕ್ಷ ಯುಎಸ್ ಡಾಲರ್ ಜಾಹೀರಾತುಗಳಿಂದ ಪಡೆದಿದ್ದರೆ, ಮಿಕ್ಕಿದ್ದು ಕ್ರಿಕೆಟ್ ನಿಂದ ಗಳಿಸಿದ್ದಾಗಿದೆ.

ಉಳಿದಂತೆ ಈ ಪಟ್ಟಿಯಲ್ಲಿ ಗೌತಮ್ ಗಂಭೀರ್( 73 ಲಕ್ಷ ಡಾಲರ್), ವಿರಾಟ್ ಕೊಹ್ಲಿ(71 ಲಕ್ಷ ಡಾಲರ್), ವೀರೇಂದರ್ ಸೆಹ್ವಾಗ್ (69 ಲಕ್ಷ ಡಾಲರ್), ಶೇನ್ ವಾಟ್ಸನ್ (59 ಲಕ್ಷ ಡಾಲರ್), ಮೈಕಲ್ ಕ್ಲಾರ್ಕ್ (49 ಲಕ್ಷ ಡಾಲರ್), ಬ್ರೆಟ್ ಲೀ (48 ಲಕ್ಷ ಡಾಲರ್), ರಿಕಿ ಪಾಂಟಿಂಗ್(41 ಲಕ್ಷ ಡಾಲರ್) ಹಾಗೂ ಯೂಸುಫ್ ಪಠಾಣ್(37 ಲಕ್ಷ ಡಾಲರ್) ಇದ್ದಾರೆ.

ಧೋನಿ ಸಾಧನೆ: ಕಳೆದ ಜೂನ್ ನಲ್ಲಿ ಫೋರ್ಬ್ ಬಿಡುಗಡೆ ಮಾಡಿದ್ದ ವಿಶ್ವದ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲೂ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಉಸೈನ್ ಬೋಲ್ಡ್, ನೊವಾಕ್ ಜೊಕೊವಿಕ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದರು.

ಧೋನಿ ಜಾಹೀರಾತಿನಲ್ಲಿ ಫುಟ್ಬಾಲಿಗ ಲಿಯೊನಲ್ ಮೆಸ್ಸಿಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಮೆಸ್ಸಿ ಒಟ್ಟು ಸಂಪಾದನೆಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ಐಸಿಸಿಯ ಜಾಗತಿಕ ಪ್ರಾಯೋಜಕ ಸಂಸ್ಥೆಯಾಗಿರುವ ಪೆಪ್ಸಿ, ಈಗಾಗಲೇ ಭಾರಿ ಮೊತ್ತ ಕೊಟ್ಟು ಎಂಎಸ್ ಧೋನಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದಲ್ಲದೆ, ಯುಬಿ ಗ್ರೂಪ್(26 ಕೋಟಿ), ಮ್ಯಾಕ್ಸ್ ಮೊಬೈಲ್ (29 ಕೋಟಿ) ಜೊತೆ ಕೂಡಾ ಧೋನಿ ಒಪ್ಪಂದ ಮಾಡಿಕೊಂಡಿದ್ದಾರೆ.

ಸಚಿನ್ ಬಳಿ ಐಟಿಸಿಯ ಸನ್ ಫೀಸ್ಟ್, ಅಡಿಡಾಸ್, Audemars Piguet(ಸ್ವಿಸ್ ಕೈ ಗಡಿಯಾರ ತಯಾರಕರು), ಕ್ಯಾನನ್, ಅವಿವಾ ಜೀವ ವಿಮೆ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್, ತೋಷಿಬಾ ಮುಂತಾದ 14 ಬ್ರ್ಯಾಂಡ್ ಗಳಿವೆ.

20 ಕೋಟಿಗೆ ಪೆಪ್ಸಿ ಬದಲು ಕೋಕಾಕೋಲಾ ಕುಡಿಯಲು ಮನಸ್ಸು ಮಾಡಿದ ಸಚಿನ್ ಬ್ರಾಂಡ್ ಮೌಲ್ಯ ಕುಸಿಯುತ್ತಿರುವುದು ಸುಳ್ಳಲ್ಲ. ಧೋನಿ ಪಟ್ಟಿಯಲ್ಲಿ ಇದಕ್ಕೂ ಡಬಲ್ ಬ್ರ್ಯಾಂಡ್ ಗಳಿದೆ.

Story first published:  Wednesday, August 1, 2012, 12:05 [IST]
English summary
MS Dhoni topped the list of the world's highest earning cricketers compiled by Forbes magazine, followed by Sachin Tendulkar, as six Indians made it to the list's top-10.
ಅಭಿಪ್ರಾಯ ಬರೆಯಿರಿ