Englishहिन्दीമലയാളംதமிழ்తెలుగు

ಲಂಕಾ ದಹನಕ್ಕೆ ಜಹೀರ್ ವೇಗದ ಬಾಣ ಸಾಕು

Posted by:
Updated: Sunday, July 29, 2012, 22:31 [IST]
 

ಲಂಕಾ ದಹನಕ್ಕೆ ಜಹೀರ್ ವೇಗದ ಬಾಣ ಸಾಕು
 

ಕೊಲೊಂಬೋ, ಜು.29: ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಪ್ರೇಮದಾಸ ಸ್ಟೇಡಿಯಂನಲ್ಲಿ ಗಂಭೀರ್ ಶತಕದ ನಡುವೆಯೂ ಸುರೇಶ್ ರೈನಾ ಅವರನ್ನು ಪಂದ್ಯಶ್ರೇಷ್ಠ ಎಂದು ಕರೆಯಲಾಗಿದೆ.

ಸ್ಕೋರ್ ಕಾರ್ಡ್ ನೋಡಿ| ವೇಳಾಪಟ್ಟಿ |

ಆದರೆ, ಮೂರನೇ ಒನ್ ಡೇ ಮ್ಯಾಚ್ ನಂತರ ಅಂಕಿ ಅಂಶಗಳನ್ನು ಗಮನಿಸಿದರೆ, ಲಂಕಾದಹನಕ್ಕೆ ಜಹೀರ್ ಖಾನ್ ಎಂಬ ವೇಗಿಯ ಅಸ್ತ್ರವೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಕುತೂಹಲಕರ ಅಂಕಿ ಅಂಶಗಳು ಇಲ್ಲಿದೆ

# ಹಗಲು ರಾತ್ರಿ ಪಂದ್ಯಗಳಲ್ಲಿ ಜಹೀರ್ ಖಾನ್ ಅತ್ಯಂತ ಯಶಸ್ವಿ ಬೌಲರ್ ಎನಿಸಿದ್ದಾರೆ. ಒಟ್ಟಾರೆ 155 ವಿಕೆಟ್ ಕಬಳಿಸಿದ್ದಾರೆ.
# ಇದೇ ರೀತಿ ಉಪುಲ್ ತರಂಗ 8 ಸಲ ಜಹೀರ್ ಖಾನ್ ಗೆ ಬಲಿಯಾಗಿದ್ದಾರೆ.
# ಮೂರನೇ ಏಕದಿನ ಪಂದ್ಯದಲಿ ತಿಲಕರತ್ನೆ ದಿಲ್ಶನ್ ರನ್ನು 4 ರನ್ ಗಳಿಗೆ ಔಟ್ ಮಾಡುವ ಮೂಲಕ ಜಹೀರ್ ಖಾನ್ ಒಟ್ಟಾರೆ 6 ಸಲ ದಿಲ್ಶನ್ ರನ್ನು ಪೆವಿಲಿಯನ್ ಗೆ ಅಟ್ಟಿದ್ದಾರೆ.
# ಶ್ರೀಲಂಕಾ ತಂಡ ತವರು ನೆಲದಲ್ಲಿ 250ಕ್ಕೂ ಅಧಿಕ ರನ್ ಮಾಡಿದ ಮೇಲೆ ಮೊದಲ ಬಾರಿ ಸೋಲು ಕಂಡಿತು.

# ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ 228/5 ಭಾರತದ ಅತ್ಯಧಿಕ ಮೊತ್ತವಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಸೆ.22, 2002ರಲ್ಲಿ 271/2 ರನ್ ಹೊಡೆದಿದ್ದು ಅತ್ಯಧಿಕ ಸ್ಕೋರ್ ಆಗಿತ್ತು.
# ಗೌತಮ್ ಗಂಭೀರ್ ತಮ್ಮ ಉತ್ತಮ ಲಯ ಮುಂದುವರೆಸಿ 11 ನೇ ಶತಕ ಸಿಡಿಸಿದರು.

# ಸೊನ್ನೆ ಪರ ರೋಹಿತ್ ಒಲವು ಮುಂದುವರೆದಿದೆ. ಶ್ರೀಲಂಕಾ ವಿರುದ್ಧ 5 ಬಾರಿ ರೋಹಿತ್ ಶರ್ಮ ಸೊನ್ನೆ ಸುತ್ತಿದ್ದಾರೆ. ಒಟ್ಟಾರೆ 8 ಬಾರಿ ಶೂನ್ಯ ಸಂಪಾದನೆ ಮಾಡಿದ್ದು ಈ ಸರಣಿಯಲ್ಲಿ 5,0,0 ಇವರ ಮಹತ್ ಸಾಧನೆ.
# ಪ್ರೇಮದಾಸ ಸ್ಟೇಡಿಯಂನಲ್ಲಿ ಕಳೆದ 10 ಪಂದ್ಯಗಳ ಸರಾಸರಿ ತಂಡದ ಮೊತ್ತ 206 ರನ್ ಮಾತ್ರ.
# ಈ ಪಂದ್ಯ ಕೊಲೊಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 85 ಪಂದ್ಯವಾಗಿದೆ.

# ಪ್ರೇಮದಾಸದಲ್ಲಿ ಭಾರತ ಮತ್ತು ಶ್ರೀಲಂಕಾ ತಂದ 29 ಬಾರಿ ಸೆಣಸಿದ್ದು ಶ್ರೀಲಂಕಾ 15 ಬಾರಿ ಹಾಗೂ ಭಾರತ 11 ಬಾರಿ ಗೆದ್ದಿದ್ದರೆ, 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ.

# ಭಾರತ ಹಾಗೂ ಶ್ರೀಲಂಕಾ ಒಟ್ಟು 24 ಹಗಲು ರಾತ್ರಿ ಪಂದ್ಯಗಳನ್ನು ಆಡಿದ್ದು ಶ್ರೀಲಂಕಾ 12 ಪಂದ್ಯದಲ್ಲಿ ಗೆಲುವು ಸಾಧಿಸಿದೆ, ಭಾರತ 9 ಪಂದ್ಯ ಗೆದ್ದಿದೆ, 3 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಿದ್ದಿಲ್ಲ.
# ತಿಲಕರತ್ನೆ ದಿಲ್ಶನ್ ರನ್ನು ಇರ್ಫಾನ್ ಪಠಾಣ್ 7 ಬಾರಿ ಔಟ್ ಮಾಡಿದ್ದಾರೆ.
# ಶ್ರೀಲಂಕಾ ವಿರುದ್ಧ ಒಟ್ಟಾರೆ 65 ವಿಕೆಟ್ ಪಡೆದು ಜಹೀರ್ ಖಾನ್ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದಾರೆ.
# ಇರ್ಫಾನ್ ಪಠಾಣ್ ಗೆ ಸಂಗಕ್ಕಾರ 5 ಬಾರಿ ಬಲಿಯಾಗಿದ್ದಾರೆ.
# ಮಹೇಲ್ ಜಯವರ್ದನೆ ಅತ್ಯಧಿಕ ಹಗಲು ರಾತ್ರಿ ಪಂದ್ಯ(222)ಗಳನ್ನಾಡಿದ ಆಟಗಾರ ಎನಿಸಿದ್ದಾರೆ.

# ಪ್ರೇಮದಾಸದಲ್ಲಿ ಮೊದಲ ಬ್ಯಾಟ್ ಮಾಡಿದ ತಂಡಗಳು 58 ಬಾರಿ ಗೆದ್ದಿದ್ದರೆ, ರನ್ ಚೇಸ್ ಮಾಡಿ 40 ಬಾರಿ ತಂಡಗಳು ಗೆಲುವು ಸಾಧಿಸಿದೆ.

# ಸಂಗಕ್ಕಾರ-ಜಯವರ್ಧನೆ ಸೇರಿಸಿದ 100 ಪ್ಲಸ್ ಜೊತೆಯಾಟ ಭಾರತದ ವಿರುದ್ಧ ಅತ್ಯಧಿಕ 4ನೇ ವಿಕೆಟ್ ಜೊತೆಯಾಟ ಎನಿಸಿದೆ.

# ಮ್ಯಾಥ್ಯೂಸ್ ಹಾಗೂ ಮೆಂಡಿಸ್ ಜೊತೆಯಾಟದಲ್ಲಿ ಬಂದ 104ರನ್ ಶ್ರೀಲಂಕಾ ತಂಡ 6ನೇ ವಿಕೆಟ್ ಗೆ ಹೊಡೆದ ಅತ್ಯಧಿಕ ಮೊತ್ತವಾಗಿದೆ.

Story first published:  Sunday, July 29, 2012, 21:55 [IST]
English summary
India defeated Sri Lanka by five wickets in the third One Day International at the R Premadasa Stadium on Saturday(Jul.28) Here are a few interesting stats on India and Sri Lanka and the highlights of the third ODI between the two nations.
ಅಭಿಪ್ರಾಯ ಬರೆಯಿರಿ