Englishहिन्दीമലയാളംதமிழ்తెలుగు

ಶಾಕಿಂಗ್ : ಹರ್ಭಜನ್ ಮೇಲೆ ಜನಾಂಗೀಯ ನಿಂದನೆ

Posted by:
Updated: Thursday, July 26, 2012, 17:33 [IST]
 

ಶಾಕಿಂಗ್ : ಹರ್ಭಜನ್ ಮೇಲೆ ಜನಾಂಗೀಯ ನಿಂದನೆ
 

ಬೆಂಗಳೂರು, ಜು.26: ಭಾರತದ ಖ್ಯಾತ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಆದರೆ, ಈ ಬಾರಿ ಹರ್ಭಜನ್ ಅವರ ಮೇಲೆ ಹೆಚ್ಚಿನ ದಾಳಿ ನಡೆದಿದೆ.

ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬ ಹರ್ಭಜನ್ ಮೇಲೆ ಜನಾಂಗೀಯ ನಿಂದನೆ ಮಾಡಿದ್ದಾನೆ. ಹರ್ಭಜನ್ ಹಾಗೂ ಇಂಗ್ಲೀಷ್ ಮನ್ ಪರಸ್ಪರ ಟ್ವೀಟರ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ.

ಇತ್ತೀಚಿನ ಕಳಪೆ ಫಾರ್ಮ್ ಅನ್ನು ಮರೆಮಾಚಿರುವ ಹರ್ಭಜನ್ ಸಿಂಗ್ ಇಂಗ್ಲೀಷ್ ಕೌಂಟಿ ಎಸ್ಸೆಕ್ಸ್ ಪರ ಆಡಿದ್ದು ಇಂಗ್ಲೀಷರಿಗೆ ಯಾಕೋ ಇಷ್ಟವಾದ ಹಾಗೆ ಕಾಣುತ್ತಿಲ್ಲ. ಶ್ರೀಲಂಕಾ ಪ್ರವಾಸ ಹೊರಟ ಭಾರತ ತಂಡದೀಂದ ಹರ್ಭಜನ್ ಸಿಂಗ್ ಕೈಬಿಟ್ಟ ಮೇಲೆ ಮಾಧ್ಯಮಗಳು ಹರ್ಭಜನ್ ಅವರ ಕ್ರಿಕೆಟ್ ಜೀವನ ಅಂತ್ಯ ಎಂಬಂತೆ ಬಿಂಬಿಸಿ ಸುದ್ದಿ ಪ್ರಸಾರ ಮಾಡಿದ್ದರು.

ಇದರಿಂದ ಕೋಪಗೊಂಡಿದ್ದ ಹರ್ಭಜನ್ ಟ್ವೀಟರ್ ಮೂಲಕ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದರು. ಜೊತೆಗೆ ಎಸ್ಸೆಕ್ಸ್ ಪರ ಕೂಡಾ ಕಳಪೆ ಫಾರ್ಮ್ ಮುಂದುವರೆಸಿದ್ದ ಭಜ್ಜಿಗೆ ಇಂಗ್ಲೆಂಡ್ ಮಾಧ್ಯಮ ಕೂಡಾ ಟೀಕಿಸಿತ್ತು.

ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಟಾಮಿ ಜಾನ್ಸನ್ ಎಂಬ ವ್ಯಕ್ತಿ ಹರ್ಭಜನ್ ವಿರುದ್ಧ ಟ್ವೀಟರ್ ನಲ್ಲಿ ಕಿಡಿಕಾರಿದ್ದಾನೆ. ಇದಕ್ಕೆ ಹರ್ಭಜನ್ ಸಿಂಗ್ ಕೂಡಾ ಖಾರವಾಗಿ ಉತ್ತರಿಸಿದ್ದು, ನಂತರ ಇಬ್ಬರ ಜಗಳ ತಾರಕಕ್ಕೇರಿದೆ.

Tommy Johnson (‏@T_JohnsonCFC) ಟ್ವೀಟ್: "@harbhajan_singh Do you know who you are tweeting here harbhajan, I'll tear that turban off your head and shove it up your a*** you melt!"

ಹರ್ಭಜನ್ ಸಿಂಗ್ ಉತ್ತರ: "@T_JohnsonCFC hahahahhaa u are jus a mental guy. May god give u sense.get well soon"
"@harbhajan_singh Shove your turban up your a*** you punk!"

ಇದಕ್ಕೆ ಭಜ್ಜಿ ಪ್ರತ್ಯುತ್ತರ "@T_JohnsonCFC is this how u parents thought u to talk ?"

"@T_JohnsonCFC if u hv balls come meet me and let's see if u can do what u are talking. Anyways may god gives u sense to talk bro.God bles"

: "@harbhajan_singh I'm a football hooligan, I'm Tommy Johnson and I have cleaned up bigger men than you! May God give me cocaine more like!"

ಹರ್ಭಜನ್ ಪರ ವಾದಿಸಲು ಅಜಯ್ ಸತೀಶ್ ಎಂಬ ಕ್ರಿಕೆಟ್ ಅಭಿಮಾನಿ ಬರುತ್ತಾನೆ. ಇದು ಜನಾಂಗೀಯ ನಿಂದನೆ ಸಂದೇಶ ಎಂದು ಟ್ವಿಟರ್ ಸಂಸ್ಥೆ ಹೇಳಲು ಬಯಸುತ್ತೇನೆ ಎನ್ನುತ್ತಾನೆ.

Ajay Satish ‏@Ajays23 : "I would like to report @T_JohnsonCFC for racially abusing @harbhajan_singh on twitter. @metpoliceuk""
ಭಾರತದ ಮಾಧ್ಯಮಗಳನ್ನು ಅಣಕಿಸಿದ ಜಾನ್ಸನ್ "Been told am trending in India, anyone known where that is..."

ಜಾನ್ಸನ್: "Been told am trending in India, anyone know where that is...and from England and proud of it!"

ಹರ್ಭಜನ್ ಸಿಂಗ್ ಇಂಗ್ಲೆಂಡಿನ ಮೈದಾನದ ಒಳಗೂ ಹೊರಗೂ ತಮ್ಮ ಹೋರಾಟ ಮುಂದುವರೆಸಿದ್ದಾರೆ.

Story first published:  Thursday, July 26, 2012, 13:30 [IST]
English summary
Harbhajan Singh's county stint with Essex in England has taken an ugly turn as the Indian offspinner got into a war of words with an Englishman on twitter. Some people on twitter said Harbhajan was subjected to "racial abuse" by that man.
ಅಭಿಪ್ರಾಯ ಬರೆಯಿರಿ