Englishहिन्दीമലയാളംதமிழ்తెలుగు

ಲಂಕಾ ವಿರುದ್ಧ ಭಾರತದ ಕಳಪೆ ಮೊತ್ತಗಳ ಪಟ್ಟಿ

Posted by:
Updated: Tuesday, July 24, 2012, 22:03 [IST]
 

ಲಂಕಾ ವಿರುದ್ಧ ಭಾರತದ ಕಳಪೆ ಮೊತ್ತಗಳ ಪಟ್ಟಿ
 

ಬೆಂಗಳೂರು, ಜು.24: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಹೀನಾಯ ಸೋಲು ಕಂಡಿದೆ. ಆದರೆ, ಇದು ಲಂಕಾ ವಿರುದ್ಧ ಭಾರತದ ಅತ್ಯಂತ ಕಳಪೆ ಮೊತ್ತವಲ್ಲ ಎಂಬುದು ಸಮಾಧಾನಕರ ಸಂಗತಿ.

ಸ್ಕೋರ್ ಕಾರ್ಡ್ : 2ನೇ ಏಕದಿನ ಪಂದ್ಯ: ಭಾರತ vs ಶ್ರೀಲಂಕಾ

2000ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡದ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ 26.3 ಓವರ್ ಗಳಲ್ಲಿ ಕೇವಲ 54 ರನ್ ಗಳಿಸಿದ ಟೀಂ ಇಂಡಿಯಾ ಸರ್ವಪತನ ಕಂಡಿತ್ತು.

ಜು.24, 2012ರಂದು ಹಂಬನ್ ಟೊಟಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಕೂಡಾ ಭಾರತ ತಂಡ ಆತಂಕದ ಕ್ಷಣವನ್ನು ಎದುರಿಸಿತ್ತು. 60 ರನ್ನಿಗೆ 5 ವಿಕೆಟ್ ಕಳೆದುಕೊಂಡು ದುಃಸ್ಥಿತಿ ತಲುಪಿತ್ತು. ಆದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಅವರ ಅರ್ಧಶತಕ ಭಾರತವನ್ನು ಹೀನಾಯ ಮೊತ್ತಕ್ಕೆ ಕುಸಿಯುವುದರಿಂದ ತಡೆಯಿತು.

ಆದರೂ, ಭಾರತ ದಾಖಲಿಸಿದ 138 ರನ್ ಮೊತ್ತ ಕೂಡಾ ಕಳಪೆ ಮೊತ್ತಗಳ ಪಟ್ಟಿಯಲ್ಲಿ ಸೇರಿದೆ. ಇದಕ್ಕೂ ಮುನ್ನ ಭಾರತದ ಕಳಪೆ ಮೊತ್ತ 103 ರನ್ 22 ಆಗಸ್ಟ್ 2009 ಡಂಬುಲಾ ಹಾಗೂ 29 ಆಗಸ್ಟ್ 2008ರಲ್ಲಿ ಕೊಲೊಂಬೊದಲ್ಲಿ ದಾಖಲಾಗಿತ್ತು.

ಶ್ರೀಲಂಕಾ ವಿರುದ್ಧ ಭಾರತದ ಕಳಪೆ ಮೊತ್ತದ ಪಟ್ಟಿ ಇಂತಿದೆ:
* 54 ರನ್, ಶಾರ್ಜಾ (29 ಆಕ್ಟೋಬರ್, 2000)
* 78 ರನ್, ಕಾನ್ಪುರ (24 ಡಿಸೆಂಬರ್ 1986)
* 103 ರನ್, ಡಂಬುಲಾ (22 ಆಗಸ್ಟ್ 2010)
* 103 ರನ್, ಕೊಲೊಂಬೊ (29 ಆಗಸ್ಟ್ 2008)
* 136 ರನ್, ಮಾರ್ಗೊವಾ (8 ಡಿಸೆಂಬರ್ 19900
* 138 ರನ್, ಹಂಬನ್ಟೋಟಾ (24 ಜುಲೈ 2012)
* 146 ರನ್, ಡಂಬುಲಾ (18 ಆಗಸ್ಟ್ 2008)

ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಎಂಎಸ್ ಧೋನಿ ನಾಯಕತ್ವದ ಟೀಂ ಇಂಡಿಯಾ ದಿಢೀರ್ ಎಂದು ಬ್ಯಾಟಿಂಗ್ ಕುಸಿತ ಕಂಡಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

ಕಳೆದ ಐದು ಪಂದ್ಯಗಳಲ್ಲಿ ಭಾರತ 2 ಗೆದ್ದು 1 ಸೋಲು ಹಾಗೂ 2 ಗೆಲುವು ಕಂಡಿದೆ. ಆದರೆ, ಉತ್ತಮ ಫಾರ್ಮ್ ನಲ್ಲಿರುವ ತಂಡಕ್ಕೂ ರಜೆಯ ಬ್ರೇಕ್ ಸಿಕ್ಕರೆ ಆಟದಲ್ಲಿ ಮೊನಚು ಕಳೆದುಕೊಳ್ಳಬಹುದು ಎಂಬುದಕ್ಕೆ ಧೋನಿ ನೇತೃತ್ವದ ತಂಡ ಸಾಕ್ಷಿಯಾಗಿದೆ.

Story first published:  Tuesday, July 24, 2012, 21:50 [IST]
English summary
Team India's disappointing outing at Hambantota in 2nd ODI(Jul.24) is not their lowest total against Sri Lanka, it is one of their lowest scores in Sri Lanka.
ಅಭಿಪ್ರಾಯ ಬರೆಯಿರಿ