Englishहिन्दीമലയാളംதமிழ்తెలుగు

ಸೆಹ್ವಾಗ್ ಸೇರಿದಂತೆ 300ರ ಕ್ಲಬ್ ಸದಸ್ಯರ ಪಟ್ಟಿ

Posted by:
Updated: Tuesday, July 24, 2012, 9:22 [IST]
 

ಸೆಹ್ವಾಗ್ ಸೇರಿದಂತೆ 300ರ ಕ್ಲಬ್ ಸದಸ್ಯರ ಪಟ್ಟಿ
 

ಲಂಡನ್, ಜು.23: ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್ ಮನ್ ಹಾಶಿಂ ಆಮ್ಲ ಅವರು ತ್ರಿಶತಕ ಬಾರಿಸುವುದರ ಮೂಲಕ ವಿಶಿಷ್ಟವಾದ 300 ರನ್ ಕ್ಲಬ್ ಗೆ ಸೇರ್ಪಡೆಗೊಂಡಿದ್ದಾರೆ. 29 ವರ್ಷದ ಆಮ್ಲ ಅವರು ಈ ಸಾಧನೆ ಮಾಡಿದ 22ನೇ ಆಟಗಾರ ಎನಿಸಿದ್ದಾರೆ.

ಆಮ್ಲ ಅವರು 6೦ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಒವಲ್ ನಲ್ಲಿ ನಡೆದಿರುವ ಮೊದಲನೇ ಟೆಸ್ಟ್ ಪಂದ್ಯದ 184ನೇ ಓವರ್ ನಲ್ಲಿ 300ರನ್ ಗಡಿ ದಾಟಿದರು. 311 ರನ್ ಗಳಿಸಿ ಔಟಾಗದೆ ಉಳಿದ ಆಮ್ಲಾ ಅವರು ಈ ಸಾಧನೆ ಮಾಡಿದ ಮೊದಲ ದಕ್ಷಿಣ ಆಫ್ರಿಕಾ ಆಟಗಾರರಾಗಿದ್ದಾರೆ.

300 ರನ್ ಕ್ಲಬ್ ನಲ್ಲಿರುವ ಆಟಗಾರರ ಪೈಕಿ ಡಾಬ್ ಬ್ರಾಡ್ಮನ್(ಆಸ್ಟ್ರೇಲಿಯಾ), ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್), ವೀರೇಂದ್ರ ಸೆಹ್ವಾಗ್ (ಭಾರತ) ಹಾಗೂ ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) ಅವರು ಎರಡು ಬಾರಿ ತ್ರಿಶತಕ ದಾಖಲಿಸಿದ್ದಾರೆ.

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಬ್ರಿಯಾನ್ ಲಾರಾ ಅವರು ಇಂಗ್ಲೆಂಡ್ ವಿರುದ್ಧ ಬಾರಿಸಿರುವ 400 ರನ್ ಇಂದಿಗೂ ದಾಖಲೆಯಾಗೇ ಉಳಿದಿದೆ. ದೇಶಗಳ ಪೈಕಿ ಆಸ್ಟ್ರೇಲಿಯಾ ತಂಡದ ಆಟಗಾರರು 7 ಶತಕ, ವೆಸ್ಟ್ ಇಂಡೀಸ್ 6, ಇಂಗ್ಲೆಂಡ್ 5, ಪಾಕಿಸ್ತಾನ 3, ಭಾರತ 2, ಶ್ರೀಲಂಕಾ 2 ಹಾಗೂ ದಕ್ಷಿಣ ಆಫ್ರಿಕಾ 1 ತ್ರಿಶತಕ ದಾಖಲಿಸಿದೆ.


ತ್ರಿಶತಕದ ಸಾಧನೆ ಮಾಡಿದ ದಾಂಡಿಗರು

ಕ್ರಮ ಸಂಖ್ಯೆ ಆಟಗಾರ (ದೇಶ) ಸ್ಕೋರ್ ಎದುರಾಳಿ ತಂಡ ಸ್ಥಳ(ದಿನಾಂಕ)
1 ಆಂಡ್ಯೆ ಸಾದಾಮ್ (ಇಂಗ್ಲೆಂಡ್) 325 ವೆಸ್ಟ್ ಇಂಡೀಸ್ ಕಿಂಗ್ಸ್‌ಸ್ಟನ್ (ಏ.3, 1930)
2 ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯ) 334 ಇಂಗ್ಲೆಂಡ್ ಲೀಡ್ಸ್ (ಜು.11, 1930)
3 ವಾಲಿ ಹ್ಯಾಮ್ಮಾಂಡ್ (ಇಂಗ್ಲೆಂಡ್) 336 ನ್ಯೂಜಿಲೆಂಡ್ ಅಕ್ಲೆಂಡ್ (ಮಾ.31, 1933)
4 ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯ) 304 ಇಂಗ್ಲೆಂಡ್ ಲೀಡ್ಸ್ (ಜು.20, 1934)
5 ಲೆನ್ ಹಟನ್ (ಇಂಗ್ಲೆಂಡ್) 364 ಆಸ್ಟ್ರೇಲಿಯ ಓವಲ್ (ಆ.20,1938)
6 ಹನೀಫ್ ಮುಹಮ್ಮದ್ (ಪಾಕಿಸ್ತಾನ) 337 ವೆಸ್ಟ್ ಇಂಡೀಸ್ ಬ್ರಿಜ್ ಟೌನ್ (ಜ.17, 1958)
7 ಗ್ಯಾರಿಫಿಲ್ಡ್ ಸೋಬರ್ಸ್ (ವೆಸ್ಟ್ ಇಂಡೀಸ್)
 365  ಪಾಕಿಸ್ತಾನ ಕಿಂಗ್ಸ್‌ಸ್ಟನ್ (ಫೆ.26, 1958)
8 ಬಾಬ್ ಸಿಂಪ್ಸನ್ (ಆಸ್ಟ್ರೇಲಿಯ)
 311  ಇಂಗ್ಲೆಂಡ್  ಮ್ಯಾಂಚೆಸ್ಟರ್ (ಜು.23, 1964)
9  ಜಾನ್ ಎಡ್ರಿಕ್ (ಇಂಗ್ಲೆಂಡ್)  310  ನ್ಯೂಝಿಲೆಂಡ್  ಲೀಡ್ಸ್ (ಜು.8, 1965)
10  ಬಾಬ್ ಕೌಪೆರ್ (ಆಸ್ಟ್ರೇಲಿಯ)  307  ಇಂಗ್ಲೆಂಡ್  ಮೆಲ್ಬೋರ್ನ್ (ಫೆ.11, 1966)
11  ಲಾರೆನ್ಸ್ ರೋವ್ (ವೆಸ್ಟ್ ಇಂಡೀಸ್)  302  ಇಂಗ್ಲೆಂಡ್  ಬ್ರಿಡ್ಜ್‌ಟೌನ್ (ಮಾ.6, 1974)
12  ಗ್ರಹಾಂ ಗೂಚ್ (ಇಂಗ್ಲೆಂಡ್)  333  ಭಾರತದ  ಲಾಡ್ಸ್ (ಜು.26, 1990)
13  ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)  375  ಇಂಗ್ಲೆಂಡ್  ಸೈಂಟ್ ಜಾನ್ಸ್ (ಎ.16, 1994)
14 ಸನತ್ ಜಯಸೂರ್ಯ (ಶ್ರೀಲಂಕಾ); 340 ಭಾರತ ಕೊಲೊಂಬೊ (ಆ.2,1997)
15 ಮಾರ್ಕ್ ಟೇಲರ್ (ಆಸ್ಟ್ರೇಲಿಯ) 334 ಪಾಕಿಸ್ತಾನ ಪೇಶಾವರ (ಅ.15, 1998);
16 ಇಂಝಾಮ್-ಉಲ್ ಹಕ್ (ಪಾಕಿಸ್ತಾನ) 329 ನ್ಯೂಝಿಲೆಂಡ್; ಲಾಹೋರ್ (ಮೇ 1, 2002);
17 ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯ) 380 ಝಿಂಬಾಬ್ವೆ ಪರ್ತ್ (ಅ.9, 2003)
18 ವೀರೇಂದ್ರ ಸೆಹ್ವಾಗ್ (ಭಾರತ) 309 ಪಾಕಿಸ್ತಾನ ಮುಲ್ತಾನ್ (ಮಾ.28, 2004)
19 ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) 400 ಇಂಗ್ಲೆಂಡ್ ಸೈಂಟ್ ಜಾನ್ಸ್ (ಎ.10, 2004);
20 .ಕ್ರಿಸ್ ಗೇಯ್ಲಿ (ವೆಸ್ಟ್ ಇಂಡೀಸ್) 317 ದಕ್ಷಿಣ ಆಫ್ರಿಕಾ ಸೈಂಟ್‌ಜಾನ್ಸ್(ಎ.29, 2005);
21 ಮಹೇಲ ಜಯವರ್ಧನೆ (ಶ್ರೀಲಂಕಾ) 374 ದಕ್ಷಿಣ ಆಫ್ರಿಕಾ ಕೊಲೊಂಬೊ (ಜು.27, 2006)
22 ವೀರೇಂದ್ರ ಸೆಹ್ವಾಗ್ (ಭಾರತ) 319 ದಕ್ಷಿಣ ಆಫ್ರಿಕಾ ಚೆನ್ನೈ (ಮಾ.26, 2008);
23 ಯೂನಿಸ್ ಖಾನ್ (ಪಾಕಿಸ್ತಾನ) 313 ಶ್ರೀಲಂಕಾ ಕರಾಚಿ (ಫೆ.21, 2009)
24 ಕ್ರೀಸ್ ಗೇಯ್ಲ (ವೆಸ್ಟ್ ಇಂಡೀಸ್) 333 ಶ್ರೀಲಂಕಾ ಗಾಲೆ (ನ.15, 2010)
25 ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯ) 329 ಭಾರತ ಸಿಡ್ನಿ (ಜ.3, 2012);
26 ಹಾಶಿಂ ಅಮ್ಲ (ದಕ್ಷಿಣ ಆಫ್ರಿಕಾ) 311 ಇಂಗ್ಲೆಂಡ್ ಓವಲ್ (ಜು.22, 2012);

Story first published:  Monday, July 23, 2012, 13:29 [IST]
English summary
In the 300-run club, there have been four batsmen who have scored two triple hundreds each. Don Bradman (Australia), Brian Lara (West Indies), Virender Sehwag (India) and Chris Gayle (West Indies) are those batsmen.
ಅಭಿಪ್ರಾಯ ಬರೆಯಿರಿ